ISL Points Table: ಹೈದರಾಬಾದ್ ಮಣಿಸಿ ಅಗ್ರ 5ರಲ್ಲಿ ಕಾಣಿಸಿಕೊಂಡ ಈಸ್ಟ್ ಬೆಂಗಾಲ್; ಐಎಸ್‌ಎಲ್ ಅಂಕಪಟ್ಟಿಯಲ್ಲಿ ಬೆಂಗಳೂರಿಗೆ ಎಷ್ಟನೇ ಸ್ಥಾನ?
ಕ್ಟೇಟನ್ ಸಿಲ್ವರ್ ಅವರ ಡಬಲ್ ಗೋಲು ನೆರವಿನಿಂದ ಹೈದರಾಬಾದ್ ಮಣಿಸಿರುವ ಈಸ್ಟ್ ಬೆಂಗಾಲ್ ಐಎಸ್‌ಎಲ್ ಪಾಯಿಂಟ್ಸ್ ಟೇಬಲ್‌ನಲ್ಲಿ 4ನೇ ಸ್ಥಾನಕ್ಕೇರಿದೆ. ಸತತ ಎರಡು ಪಂದ್ಯಗಳನ್ನು ಸೋತಿರುವ ಬೆಂಗಳೂರು ಎಫ್‌ಸಿ ಎಷ್ಟನೇ ಸ್ಥಾನದಲ್ಲಿದೆ.
(1 / 7)
ಐಎಸ್‌ಎಲ್‌ನಲ್ಲಿ ಸತತ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಹಾಲಿ ಚಾಂಪಿಯನ್ ಮೋಹನ್ ಬಾಗನ್ 2023ನೇ ಆವೃತ್ತಿಯ ಐಸಿಎಲ್ ಪಾಯಿಂಟ್ಸ್ ಪಟ್ಟಿಯಲ್ಲಿ 6 ಅಂಕಗಳೊಂದಿಗೆ ನಂಬರ್ 1 ಸ್ಥಾನದಲ್ಲಿದೆ. ಒಡಿಶಾ, ಮುಂಬೈ ಸಿಟಿ, ಈಸ್ಟ್ ಬೆಂಗಾಲ್ ಕ್ರಮವಾಗಿ ಎರಡು, ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿವೆ.
(2 / 7)
ಒಡಿಶಾ ಎಫ್‌ಸಿ ಮೊದಲ ಪಂದ್ಯದಲ್ಲಿ ಚೆನ್ನೈಇನ್ ಎಫ್‌ಸಿ ವಿರುದ್ಧ ಗೆಲುವಿನೊಂದಿಗೆ ಲೀಗ್‌ನಲ್ಲಿ ಶುಭಾರಂಭ ಮಾಡಿದೆ. ಆದರೆ ಎರಡನೇ ಪಂದ್ಯದಲ್ಲಿ ಮುಂಬೈ ಸಿಟಿ ವಿರುದ್ಧ ಡ್ರಾ ಸಾಧಿಸಿದೆ. ಒಡಿಶಾ 2 ಪಂದ್ಯಗಳಿಂದ 4 ಅಂಕಗಳನ್ನು ಪಡೆದು ಲೀಗ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.
(3 / 7)
ಈಸ್ಟ್ ಬೆಂಗಾಲ್ ತನ್ನ ಮೊದಲ ಪಂದ್ಯದಲ್ಲಿ ಜಮ್‌ಶೆಡ್‌ಪುರ ಎಫ್‌ಸಿ ವಿರುದ್ಧ ಗೋಲು ರಹಿತ ಡ್ರಾ ಸಾಧಿಸಿತ್ತು. ಶನಿವಾರ ನಡೆದ ಎರಡನೇ ಪಂದ್ಯದಲ್ಲಿ ಹೈದರಾಬಾದ್ ಎಫ್‌ಸಿಯನ್ನು 2-1 ರಿಂದ ಸೋಲಿಸಿ 2 ಪಂದ್ಯಗಳಿಂದ 4 ಅಂಕಗಳೊಂದಿಗೆ ಲೀಗ್ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ.
(4 / 7)
ಮುಂಬೈ ಸಿಟಿ ವಿರುದ್ಧ ತನ್ನ ಮೊದಲ ಪಂದ್ಯದಲ್ಲಿ ಸೋತಿದ್ದ ನಾರ್ತ್ ಈಸ್ಟ್ ಯುನೈಟೆಡ್ ತಂಡ ಎರಡನೇ ಪಂದ್ಯದಲ್ಲಿ ಚೆನ್ನೈ ಇನ್ ತಂಡವನ್ನು 3-0 ಅಂತರ ಗೆಲುವಿನೊಂದಿಗೆ ಕಂಬ್ಯಾಕ್ ಮಾಡಿದೆ. ಲೀಗ್ ಪಟ್ಟಿಯಲ್ಲಿ ನಾರ್ತ್ ಈಸ್ಟ್ ಯುನೈಟೆಡ್ 5ನೇ ಸ್ಥಾನದಲ್ಲಿದ್ದಾರೆ.
(5 / 7)
ಈಸ್ಟ್ ಬೆಂಗಾಲ್ ವಿರುದ್ಧ ತಾನಾಡಿರುವ ಒಂದೇ ಒಂದು ಪಂದ್ಯದಲ್ಲಿ ಜೆಮ್‌ಶೆಡ್‌ಪುರ ಎಫ್‌ಸಿ ಡ್ರಾ ಸಾಧಿಸಿದೆ. 1 ಅಂಕಗೊಂದಿಗೆ ಲೀಗ್ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.
(6 / 7)
ಈ ವರ್ಷದ ಐಎಸ್‌ಎಲ್‌ನಲ್ಲಿ ಇದುವರೆಗೆ ಒಂದೇ ಒಂದು ಪಂದ್ಯವನ್ನು ಆಡದ ಏಕೈಕ ತಂಡವೆಂದರೆ ಗೋವಾ ಎಫ್‌ಸಿ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಗೋವಾ ತಂಡ ಅಕ್ಟೋಬರ್ 2 ರಂದು ಪಂಜಾಬ್ ಎಫ್‌ಸಿ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ.
ಇತರ ಗ್ಯಾಲರಿಗಳು