ISRO: ಭಾರತದ ಹೆಮ್ಮೆಯ ಇಸ್ರೋದ ಶತಕದ ಉಡಾವಣೆ ಮೈಲಿಗಲ್ಲು, ನೂರನೇ ಉಪಗ್ರಹ ನಭದತ್ತ ಹಾರಿದ ಸಂತಸದ ಕ್ಷಣಗಳು ಹೀಗಿದ್ದವು
ISRO: ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಇಸ್ರೋ ನೂರನೇ ಉಪಗ್ರಹ ಉಡಾವಣೆ ಮಾಡಿದೆ. ಭಾರತದ ಬಾಹ್ಯಾಕಾಶ ಪ್ರಯಾಣಕ್ಕೆ ಇದು ಹೆಮ್ಮೆಯ ಮೈಲಿಗಲ್ಲು' ಎಂದು ಇಸ್ರೋ ಎಕ್ಸ್ ನಲ್ಲಿ ಬರೆದಿದೆ.
(1 / 7)
ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಇತಿಹಾಸದಲ್ಲಿ ಐತಿಹಾಸಿಕ ದಿನ. ಬುಧವಾರ ಬೆಳಿಗ್ಗೆ ನೂರನೇ ಉಪಗ್ರಹ ಉಡಾವಣೆ ಮಾಡಲಾಯಿತು.
(ISRO)
(2 / 7)
ಶ್ರೀಹರಿಕೋಟಾದಿಂದ ಇಸ್ರೋದ 100 ನೇ ಹೆಜ್ಜೆಯಾಗಿ ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಜಿಎಸ್ಎಲ್ವಿ-ಎಫ್ 15) ನ್ಯಾವಿಗೇಷನ್ ಉಪಗ್ರಹ ಎನ್ವಿಎಸ್ -02 ಅನ್ನು ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿದೆ.
(ISRO)(3 / 7)
ಈಗಾಗಲೇ ಹಲವಾರು ಪ್ರಯೋಗಗಳನ್ನು ಕಳೆದ ಕೆಲ ದಶಕಗಳಿಂದ ಯಶಸ್ವಿಯಾಗಿ ಉಡಾವಣೆ ಮಾಡಿ ಜಗತ್ತಿನಲ್ಲಿಯೇ ಇಸ್ರೋ ಗಮನ ಸೆಳೆದಿದೆ.
(ISRO)(4 / 7)
ಶ್ರೀ ಹರಿಕೋಟಾದಲ್ಲಿರುವ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ನಿಯಮಿತವಾಗಿ ಉಪಗ್ರಹಗಳ ಉಡಾವಣೆ ನಡೆದಿದೆ. ಆದರೆ ನೂರನೇ ಉಪಗ್ರಹವನ್ನೂ ಈಗ ಉಡಾವಣೆ ಮಾಡಿದ್ದು ಐತಿಹಾಸಿಕ ಎನ್ನಿಸಿದೆ.
(PTI)(5 / 7)
ಇಸ್ರೋದ 100 ನೇ ಉಡಾವಣೆ, ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಜಿಎಸ್ಎಲ್ವಿ-ಎಫ್ 15) ಉಡಾವಣೆಯ ಹೆಜ್ಜೆಯ ಬಗ್ಗೆ ಸಂಸ್ಥೆ ಎಕ್ಸ್ ಮೂಲಕ ಸಂತಸ ವ್ಯಕ್ತಪಡಿಸಿದೆ.
(PTI)(6 / 7)
1979ರ ಆಗಸ್ಟ್ 10 ರಂದು ಶ್ರೀಹರಿಕೋಟಾದಿಂದ ಉಡಾವಣೆಯಾದ ಮೊದಲ ದೊಡ್ಡ ರಾಕೆಟ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (SLV-3) ಆಗಿದ್ದು, ಇದೀಗ ಸುಮಾರು 46 ವರ್ಷಗಳ ನಂತರ ಬಾಹ್ಯಾಕಾಶ ಇಲಾಖೆ ಶತಕದ ಸಂತಸದ ಕ್ಷಣ.
(PTI)ಇತರ ಗ್ಯಾಲರಿಗಳು