ಕನ್ನಡ ಸುದ್ದಿ  /  Photo Gallery  /  Isro Releases Stunning New Images Showing India From Space

India From Space: ಬಾಹ್ಯಾಕಾಶದಿಂದ ಕಂಡ ನಮ್ಮ ಹೆಮ್ಮೆಯ ಭಾರತ: ಇಸ್ರೋ ಬಿಡುಗಡೆ ಮಾಡಿದ ಈ ಚಿತ್ರಗಳು ಅದೆಷ್ಟು ಅದ್ಭುತ!

ಬೆಂಗಳೂರು: ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಉಪಗ್ರಹವೊಂದು, ಬಾಹ್ಯಾಕಾಶದಿಂದ ಭೂಮಿಯ ಅದ್ಭುತ ಚಿತ್ರಗಳನ್ನು ಸೆರೆಹಿಡಿದಿದ್ದು, ಇಸ್ರೋ ಬಿಡುಗಡೆ ಮಾಡಿರುವ ಈ ಚಿತ್ರಗಳಲ್ಲಿ ಭಾರತವನ್ನು ಅತ್ಯಂತ ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಇಸ್ರೋ ಬಿಡುಗಡೆ ಮಾಡಿರುವ ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಈ ಕುರಿತ ವಿಸ್ತೃತ ಮಾಹಿತಿ ಇಲ್ಲಿದೆ..

ಓಷನ್‌ಸ್ಯಾಟ್-3 ಎಂದೂ ಕರೆಯಲ್ಪಡುವ ಭೂಮಿಯ ವೀಕ್ಷಣಾ ಉಪಗ್ರಹ (EOS-06), ಸಾಗರದ ಬಣ್ಣ ಮಾನಿಟರ್ (OCM) ಅನ್ನು ಬಳಸಿಕೊಂಡು ಭೂಗ್ರಹದ ಹೊಸ ಚಿತ್ರಗಳನ್ನು ಕ್ಲಿಕ್ಕಿಸಿದೆ. ಇಸ್ರೋ ಪ್ರಕಾರ ಈ ಚಿತ್ರಗಳು ಬಾಹ್ಯಾಕಾಶ ನೌಕೆಯಿಂದ ಮರಳಿದ ಡೇಟಾ ಬಳಸಿಕೊಂಡು, ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ (ಎನ್‌ಆರ್‌ಎಸ್‌ಸಿ) ರಚಿಸಿದ ಮೊಸಾಯಿಕ್ ಆಗಿದೆ.is
icon

(1 / 5)

ಓಷನ್‌ಸ್ಯಾಟ್-3 ಎಂದೂ ಕರೆಯಲ್ಪಡುವ ಭೂಮಿಯ ವೀಕ್ಷಣಾ ಉಪಗ್ರಹ (EOS-06), ಸಾಗರದ ಬಣ್ಣ ಮಾನಿಟರ್ (OCM) ಅನ್ನು ಬಳಸಿಕೊಂಡು ಭೂಗ್ರಹದ ಹೊಸ ಚಿತ್ರಗಳನ್ನು ಕ್ಲಿಕ್ಕಿಸಿದೆ. ಇಸ್ರೋ ಪ್ರಕಾರ ಈ ಚಿತ್ರಗಳು ಬಾಹ್ಯಾಕಾಶ ನೌಕೆಯಿಂದ ಮರಳಿದ ಡೇಟಾ ಬಳಸಿಕೊಂಡು, ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ (ಎನ್‌ಆರ್‌ಎಸ್‌ಸಿ) ರಚಿಸಿದ ಮೊಸಾಯಿಕ್ ಆಗಿದೆ.is(ISRO)

ಈ ಪ್ರತಿ ಮೊಸಾಯಿಕ್ 300 ಜಿಬಿ ಡೇಟಾವನ್ನು ಪ್ರಕ್ರಿಯೆಗೊಳಿಸಿದ ನಂತರ 2,939 ಚಿತ್ರಗಳನ್ನು ಸಂಯೋಜಿಸುತ್ತದೆ. ಇವು ಭೂಮಿಯ ಪ್ರತಿ ಖಂಡವನ್ನು ಒಳಗೊಂಡಿರುವ ಹೆಚ್ಚಿನ ರೆಸಲ್ಯೂಶನ್ ಚಿತ್ರಗಳಾಗಿವೆ.  ಕೆಲವು ಚಿತ್ರಗಳಲ್ಲಿ, ಭಾರತವು ಬಾಹ್ಯಾಕಾಶದಿಂದ ಸ್ಪಷ್ಟವಾಗಿ ಗೋಚರಿಸುತ್ತದೆ ಮತ್ತು ಪ್ರಕಾಶಮಾನವಾಗಿ ಹೊಳೆಯುತ್ತದೆ.
icon

(2 / 5)

ಈ ಪ್ರತಿ ಮೊಸಾಯಿಕ್ 300 ಜಿಬಿ ಡೇಟಾವನ್ನು ಪ್ರಕ್ರಿಯೆಗೊಳಿಸಿದ ನಂತರ 2,939 ಚಿತ್ರಗಳನ್ನು ಸಂಯೋಜಿಸುತ್ತದೆ. ಇವು ಭೂಮಿಯ ಪ್ರತಿ ಖಂಡವನ್ನು ಒಳಗೊಂಡಿರುವ ಹೆಚ್ಚಿನ ರೆಸಲ್ಯೂಶನ್ ಚಿತ್ರಗಳಾಗಿವೆ.  ಕೆಲವು ಚಿತ್ರಗಳಲ್ಲಿ, ಭಾರತವು ಬಾಹ್ಯಾಕಾಶದಿಂದ ಸ್ಪಷ್ಟವಾಗಿ ಗೋಚರಿಸುತ್ತದೆ ಮತ್ತು ಪ್ರಕಾಶಮಾನವಾಗಿ ಹೊಳೆಯುತ್ತದೆ.(ISRO)

ತರಂಗಾಂತರಗಳಲ್ಲಿನ ವ್ಯತ್ಯಾಸಗಳಿಂದಾಗಿ ವಿವಿಧ ಖಂಡಗಳು ಪ್ರತ್ಯೇಕ ಬಣ್ಣಗಳಲ್ಲಿ ಕಾಣಿಸಿಕೊಳ್ಳುತ್ತವೆ. ಓಷನ್ ಕಲರ್ ಮಾನಿಟರ್‌ನಿಂದ ಸೆರೆಹಿಡಿಯಲಾದ ಚಿತ್ರಗಳು ಭೂಮಿ ಮತ್ತು ಸಾಗರ ಬಯೋಟಾದಲ್ಲಿನ ಜಾಗತಿಕ ಸಸ್ಯವರ್ಗದ ಹಂಚಿಕೆಯ ಬಗ್ಗೆ ವಿಫುಲ ಮಾಹಿತಿಯನ್ನು ಒದಗಿಸುತ್ತವೆ.
icon

(3 / 5)

ತರಂಗಾಂತರಗಳಲ್ಲಿನ ವ್ಯತ್ಯಾಸಗಳಿಂದಾಗಿ ವಿವಿಧ ಖಂಡಗಳು ಪ್ರತ್ಯೇಕ ಬಣ್ಣಗಳಲ್ಲಿ ಕಾಣಿಸಿಕೊಳ್ಳುತ್ತವೆ. ಓಷನ್ ಕಲರ್ ಮಾನಿಟರ್‌ನಿಂದ ಸೆರೆಹಿಡಿಯಲಾದ ಚಿತ್ರಗಳು ಭೂಮಿ ಮತ್ತು ಸಾಗರ ಬಯೋಟಾದಲ್ಲಿನ ಜಾಗತಿಕ ಸಸ್ಯವರ್ಗದ ಹಂಚಿಕೆಯ ಬಗ್ಗೆ ವಿಫುಲ ಮಾಹಿತಿಯನ್ನು ಒದಗಿಸುತ್ತವೆ.(ISRO)

OCM ಭೂಮಿಯನ್ನು 13 ವಿಭಿನ್ನ ತರಂಗಾಂತರಗಳಲ್ಲಿ ಗ್ರಹಿಸುತ್ತದೆ ಎಂದು ಇಸ್ರೋ ತನ್ನ ಟ್ವೀಟ್‌ನಲ್ಲಿ ಮಾಹಿತಿ ನೀಡಿದೆ.
icon

(4 / 5)

OCM ಭೂಮಿಯನ್ನು 13 ವಿಭಿನ್ನ ತರಂಗಾಂತರಗಳಲ್ಲಿ ಗ್ರಹಿಸುತ್ತದೆ ಎಂದು ಇಸ್ರೋ ತನ್ನ ಟ್ವೀಟ್‌ನಲ್ಲಿ ಮಾಹಿತಿ ನೀಡಿದೆ.(ISRO)

ಇಸ್ರೋ ತನ್ನ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿರುವ ಈ ಚಿತ್ರಗಳು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿವೆ. ಬಾಹ್ಯಾಕಾಶದಿಂದ ಭಾರತದ ಸಂದರ ನೋಟವನ್ನು ಕಣ್ತುಂಬಿಕೊಂಡಿರುವ ನೆಟ್ಟಿಗರು, ಇಂತಹ ಅದ್ಭುತ ದೇಶದಲ್ಲಿ ನಾವು ಜನ್ಮ ತಳೆದಿರುವುದು ನಮ್ಮ ಪೂರ್ವ ಜನ್ಮದ ಪುಣ್ಯ ಎಂದು ಧನ್ಯತೆಯ ಭಾವನೆ ವ್ಯಕ್ತಪಡಿಸಿದ್ದಾರೆ.
icon

(5 / 5)

ಇಸ್ರೋ ತನ್ನ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿರುವ ಈ ಚಿತ್ರಗಳು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿವೆ. ಬಾಹ್ಯಾಕಾಶದಿಂದ ಭಾರತದ ಸಂದರ ನೋಟವನ್ನು ಕಣ್ತುಂಬಿಕೊಂಡಿರುವ ನೆಟ್ಟಿಗರು, ಇಂತಹ ಅದ್ಭುತ ದೇಶದಲ್ಲಿ ನಾವು ಜನ್ಮ ತಳೆದಿರುವುದು ನಮ್ಮ ಪೂರ್ವ ಜನ್ಮದ ಪುಣ್ಯ ಎಂದು ಧನ್ಯತೆಯ ಭಾವನೆ ವ್ಯಕ್ತಪಡಿಸಿದ್ದಾರೆ.(ISRO)


IPL_Entry_Point

ಇತರ ಗ್ಯಾಲರಿಗಳು