41ನೇ ವಯಸ್ಸಲ್ಲೂ ವಿಶ್ವದಾಖಲೆ ಬರೆದ ಜೇಮ್ಸ್ ಆ್ಯಂಡರ್ಸನ್; ಈ ರೆಕಾರ್ಡ್ ನಿರ್ಮಿಸಿದ ವಿಶ್ವದ ಮೊದಲ ವೇಗದ ಬೌಲರ್
- ಧರ್ಮಶಾಲಾದಲ್ಲಿ ನಡೆದ ಭಾರತ - ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯದಲ್ಲಿ ಜೇಮ್ಸ್ ಆಂಡರ್ಸನ್ 700 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಟೆಸ್ಟ್ನಲ್ಲಿ 700 ವಿಕೆಟ್ಗಳ ಸಾಧನೆಗೈದ ವಿಶ್ವದ ಮೊದಲ ವೇಗದ ಬೌಲರ್ ಎನಿಸಿದ್ದಾರೆ.
- ಧರ್ಮಶಾಲಾದಲ್ಲಿ ನಡೆದ ಭಾರತ - ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್ ಪಂದ್ಯದಲ್ಲಿ ಜೇಮ್ಸ್ ಆಂಡರ್ಸನ್ 700 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಟೆಸ್ಟ್ನಲ್ಲಿ 700 ವಿಕೆಟ್ಗಳ ಸಾಧನೆಗೈದ ವಿಶ್ವದ ಮೊದಲ ವೇಗದ ಬೌಲರ್ ಎನಿಸಿದ್ದಾರೆ.
(1 / 5)
ಜೇಮ್ಸ್ ಆಂಡರ್ಸನ್ ಕ್ರಿಕೆಟ್ ಜಗತ್ತಿನಲ್ಲಿ ಯಾವುದೇ ವೇಗದ ಬೌಲರ್ ಮಾಡದ ನಂಬಲಾಗದ ದಾಖಲೆಯನ್ನು ಮಾಡಿದ್ದಾರೆ. ಧರ್ಮಶಾಲಾದಲ್ಲಿ ನಡೆದ ಭಾರತ ವಿರುದ್ಧದ ಐದನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ 700 ಟೆಸ್ಟ್ ವಿಕೆಟ್ ಪಡೆದ ಮೊದಲ ವೇಗಿ ಮತ್ತು ಇತಿಹಾಸದಲ್ಲಿ3ನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
(2 / 5)
ಧರ್ಮಶಾಲಾ ಟೆಸ್ಟ್ನ ಮೂರನೇ ದಿನದ ಆರಂಭದಲ್ಲಿ ಕುಲ್ದೀಪ್ ಯಾದವ್ ಅವರ ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್ ವೇಗಿ 700 ವಿಕೆಟ್ಗಳ ಮೈಲಿಗಲ್ಲನ್ನು ತಲುಪಿದರು. 5ನೇ ಟೆಸ್ಟ್ಗೂ ಮುನ್ನ ಈ ಐತಿಹಾಸಿಕ ಸಾಧನೆಗೆ ಎರಡು ವಿಕೆಟ್ಗಳ ಅಗತ್ಯ ಇತ್ತು. ಕುಲ್ದೀಪ್ಗೂ ಮೊದಲು ಶುಭ್ಮನ್ ಗಿಲ್ ಅವರನ್ನು ಔಟ್ ಮಾಡಲಾಗಿತ್ತು.
(3 / 5)
ಆ್ಯಂಡರ್ಸನ್ಗಿಂತ ಮೊದಲು ಇಬ್ಬರು ಟೆಸ್ಟ್ ಕ್ರಿಕೆಟ್ನಲ್ಲಿ 700 ವಿಕೆಟ್ಗಳ ಮೈಲಿಗಲ್ಲು ದಾಟಿದ ಸಾಧನೆ ಮಾಡಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಅವರು 800 ವಿಕೆಟ್ ಪಡೆದರೆ, ಪಡೆದಿದ್ದಾರೆ. 133 ಟೆಸ್ಟ್ಗಳ 230 ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯಾದ ಶೇನ್ ವಾರ್ನ್ 145 ಟೆಸ್ಟ್ ಪಂದ್ಯಗಳಲ್ಲಿ 273 ಇನ್ನಿಂಗ್ಸ್ಗಳಲ್ಲಿ 708 ವಿಕೆಟ್ ಪಡೆದಿದ್ದಾರೆ. ಆ್ಯಂಡರ್ಸನ್ 187 ಟೆಸ್ಟ್ಗಳ 348 ಇನ್ನಿಂಗ್ಸ್ಗಳಲ್ಲಿ 700 ವಿಕೆಟ್ಗಳ ಮೈಲಿಗಲ್ಲನ್ನು ತಲುಪಿದ್ದಾರೆ.
(4 / 5)
ಇದಕ್ಕೂ ಮುನ್ನ ಜಿಮ್ಮಿ 600 ವಿಕೆಟ್ ಪಡೆದ ವಿಶ್ವದ ಮೊದಲ ವೇಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ವೇಗಿಗಳಲ್ಲಿ ಆ್ಯಂಡರ್ಸನ್ ಹತ್ತಿರಕ್ಕೂ ಬರುವವರಿಲ್ಲ. ಇಂಗ್ಲೆಂಡ್ನ ಸ್ಟುವರ್ಟ್ ಬ್ರಾಡ್ 2ನೇ ಸ್ಥಾನದಲ್ಲಿದ್ದು, ಅವರು 604 ವಿಕೆಟ್ ಪಡೆದಿದ್ದಾರೆ. ವಿಶ್ವದ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಬೌಲರ್ಗಳ ಪಟ್ಟಿಯಲ್ಲಿ ಬ್ರಾಡ್ ಐದನೇ ಸ್ಥಾನದಲ್ಲಿದ್ದಾರೆ.
ಇತರ ಗ್ಯಾಲರಿಗಳು