ಜಗತ್ತಲ್ಲೇ ಮೊದಲ ಬಾರಿ ಜಪಾನ್‌ನಲ್ಲಿ 6 ಗಂಟೆಯಲ್ಲಿ ಸಿದ್ಧವಾಗಿರೋದು ಅಂತಿಂಥಾ ರೈಲ್ವೆ ನಿಲ್ದಾಣವಲ್ಲ, 3D ರೈಲ್ವೆ ನಿಲ್ದಾಣ- ನೋಡಿ ಚಿತ್ರನೋಟ
ಜಪಾನ್ ತನ್ನ ವಿಶಿಷ್ಟ ಘೋಷಣೆಗಳೊಂದಿಗೆ ಪ್ರತಿ ಬಾರಿಯೂ ಜಗತ್ತನ್ನು ಆಶ್ಚರ್ಯಗೊಳಿಸುವುದನ್ನು ಮುಂದುವರಿಸಿದೆ. ಈ ಬಾರಿ ಜಪಾನೀಯರು ಕೇವಲ 6 ಗಂಟೆಗಳಲ್ಲಿ ನವೀನ ಮಾದರಿಯ ರೈಲ್ವೆ ನಿಲ್ದಾಣವನ್ನು ಸಿದ್ಧಪಡಿಸಿದ ಗಮನಸೆಳೆದರು. ಇದು ಸಾಮಾನ್ಯ ರೈಲ್ವೆ ನಿಲ್ದಾಣವಲ್ಲ, 3D ರೈಲ್ವೆ ನಿಲ್ದಾಣ. ಇಲ್ಲಿದೆ ಚಿತ್ರನೋಟ
(1 / 8)
ಜಪಾನ್‌ನ ಪಶ್ಚಿಮ ಜಪಾನ್ ರೈಲ್ವೆ ಕಂಪನಿ ವಿಶ್ವಾದ್ಯಂತ ರೈಲ್ವೆ ನಿರ್ಮಾಣದ ದಿಕ್ಕನ್ನು ಬದಲಾಯಿಸಬಲ್ಲ ಕೆಲಸವನ್ನು ಮಾಡಿ ಗಮನಸೆಳೆದಿದೆ. ಸಮಯ ಉಳಿತಾಯ, ವೆಚ್ಚ ಕಡಿತ ಮತ್ತು ತಂತ್ರಜ್ಞಾನದ ಅಪಾರ ಬಳಕೆಯೊಂದಿಗೆ ವಿಶ್ವದ ಮೊದಲ 3D ಮುದ್ರಿತ ರೈಲ್ವೆ ನಿಲ್ದಾಣವನ್ನು ಜಪಾನ್‌ನಲ್ಲಿ ನಿರ್ಮಿಸಲಾಗಿದೆ.
(2 / 8)
ಜಪಾನ್‌ನ ಆರಿಡಾ ನಗರದಲ್ಲಿರುವ "ಹ್ಯಾಟ್ಸುಶಿಮಾ ಸ್ಟೇಷನ್" ಅನ್ನು 3D ಮುದ್ರಿತ ಭಾಗಗಳಿಂದ ತಯಾರಿಸುವ ಸಂದರ್ಭದಲ್ಲಿ ತೆಗೆದ ಚಿತ್ರ.
(3 / 8)
ಕೊನೆಯ ರೈಲು ರಾತ್ರಿ 11:57 ಕ್ಕೆ ಹೊರಟುಹೋದ ಬಳಿಕ ರೈಲ್ವೆ ನಿಲ್ದಾಣ ನಿರ್ಮಾಣದ ಕೆಲಸ ಪ್ರಾರಂಭವಾಯಿತು. ನಿಲ್ದಾಣವನ್ನು ಕೇವಲ 6 ಗಂಟೆಗಳಲ್ಲಿ ನಿರ್ಮಿಸಲಾಗಿದೆ. ಹೊಸ ನಿಲ್ದಾಣದಲ್ಲಿ ಮೊದಲ ರೈಲು ಬೆಳಿಗ್ಗೆ 5:45 ಕ್ಕೆ ಬಂದು ನಿಂತಿತು.
(4 / 8)
1948ರಲ್ಲಿ ನಿರ್ಮಿಸಲಾಗಿದ್ದ ಹಳೆಯ ಮರದ ರೈಲ್ವೆ ನಿಲ್ದಾಣದ ಜಾಗದಲ್ಲಿ ಈಗ. 3D ರೈಲ್ವೆ ನಿರ್ಮಾಣವಾಗಿದೆ. ಸೆರೆಂಡಿಕ್ಸ್ ಎಂಬ ನಿರ್ಮಾಣ ಸಂಸ್ಥೆ ಈ ಕಾರ್ಯ ಮಾಡಿದ್ದು,, ಇದು ಸುಧಾರಿತ ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿದೆ.
(5 / 8)
ನಿಲ್ದಾಣದ ಭಾಗಗಳನ್ನು ವಿಶೇಷ ಗಾರೆಗಳಿಂದ ತಯಾರಿಸಲಾಗಿದ್ದು, ಇವುಗಳನ್ನು ಜಪಾನ್‌ನ ಕ್ಯುಶು ದ್ವೀಪದಲ್ಲಿರುವ ಕಾರ್ಖಾನೆಯಲ್ಲಿ ಉತ್ಪಾದಿಸಲಾಗಿದೆ. 804 ಕಿ.ಮೀ ದೂರದಲ್ಲಿರುವ ಕಾರ್ಖಾನೆಯಿಂದ ಟ್ರಕ್‌ಗಳ ಮೂಲಕ ಮುದ್ರಿತ ನಿಲ್ದಾಣದ ಭಾಗಗಳನ್ನು ತರಲಾಗಿದೆ.
(6 / 8)
ಸಾಂಪ್ರದಾಯಿಕ ರೀತಿಯಲ್ಲಿ ನಿಲ್ದಾಣವನ್ನು ನಿರ್ಮಿಸಲು 2 ತಿಂಗಳಿಗಿಂತ ಹೆಚ್ಚು ಮತ್ತು ಎರಡು ಪಟ್ಟು ಹೆಚ್ಚು ವೆಚ್ಚ ಮಾಡಬೇಕಾಗುತ್ತದೆ, ಆದರೆ 3D ತಂತ್ರಜ್ಞಾನವು ಅದನ್ನು ಅರ್ಧಕ್ಕೆ ಇಳಿಸಿತು ಎಂದು ಜಪಾನ್ ರೈಲ್ವೆ ಹೇಳಿಕೊಂಡಿದೆ
(7 / 8)
ಹೊಸ ರೈ;ಲ್ವೆ ನಿಲ್ದಾಣವು ಸಂಚಾರ ದಟ್ಟಣೆಯಿಂದ ಕೂಡಿರಲಿದೆ. ಹೀಗಾಗಿ ಅತ್ಯಾಧುನಿಕ ಸೌಕರ್ಯಗಳೊಂದಿಗೆ ಇದನ್ನು ನಿರ್ಮಿಸಲಾಗಿದ್ದು, ಇಲ್ಲಿ ಟಿಕೆಟ್ ಯಂತ್ರ ಸ್ಥಾಪಿಸಲಾಗಿದ್ದು, ಮತ್ತು ಸಾರಿಗೆ ಕಾರ್ಡ್‌ಗಳನ್ನೂ ಪ್ರಯಾಣಿಕರಿಗೆ ಒದಗಿಸಲು ರೈಲ್ವೆ ಕ್ರಮ ತೆಗೆದುಕೊಂಡಿದೆ
ಇತರ ಗ್ಯಾಲರಿಗಳು