Jawaharlal Nehru Birth Anniversary: ಭಾರತದ ಮೊದಲ ಪ್ರಧಾನಿ ನೆಹರೂ ಪಾತ್ರವನ್ನು ನಿರ್ವಹಿಸಿದ ನಟರಿವರು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Jawaharlal Nehru Birth Anniversary: ಭಾರತದ ಮೊದಲ ಪ್ರಧಾನಿ ನೆಹರೂ ಪಾತ್ರವನ್ನು ನಿರ್ವಹಿಸಿದ ನಟರಿವರು

Jawaharlal Nehru Birth Anniversary: ಭಾರತದ ಮೊದಲ ಪ್ರಧಾನಿ ನೆಹರೂ ಪಾತ್ರವನ್ನು ನಿರ್ವಹಿಸಿದ ನಟರಿವರು

  • ಇಂದು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ 133ನೇ ಜನ್ಮದಿನ. ಈ ದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತದೆ. ಚಲನಚಿತ್ರಗಳಲ್ಲಿ ಜವಾಹರಲಾಲ್ ನೆಹರೂ ಪಾತ್ರವನ್ನು ನಿರ್ವಹಿಸಿದ ನಟರು ಯಾರ್ಯಾರು ಎಂಬುದನ್ನು ನೋಡೋಣ ಬನ್ನಿ..

ದಲೀಪ್ ತಾಹಿಲ್: ರಾಕೇಶ್ ಓಂಪ್ರಕಾಶ್ ಮೆಹ್ರಾ ನಿರ್ದೇಶಿಸಿದ 2013 ರ ಕ್ರೀಡಾ ಚಲನಚಿತ್ರ 'ಭಾಗ್ ಮಿಲ್ಕಾ ಭಾಗ್' ನಲ್ಲಿ ದಲೀಪ್ ತಾಹಿಲ್ ಜವಾಹರಲಾಲ್ ನೆಹರು ಪಾತ್ರವನ್ನು ನಿರ್ವಹಿಸಿದ್ದಾರೆ. ದಲೀಪ್ ತಾಹಿಲ್ ಅವರು ಶ್ಯಾಮ್ ಬೆನಗಲ್ ಅವರ ಧಾರಾವಾಹಿ 'ಸಂವಿಧಾನ್' ನಲ್ಲಿ ಕೂಡ ನೆಹರೂ ಪಾತ್ರದಲ್ಲಿ ನಟಿಸಿದ್ದಾರೆ.
icon

(1 / 6)

ರಜಿತ್ ಕಪೂರ್: ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟ ರಜಿತ್ ಕಪೂರ್ ಇತ್ತೀಚೆಗೆ ಬಿಡುಗಡೆಯಾದ 'ರಾಕೆಟ್ ಬಾಯ್ಸ್' ಎಂಬ ವೆಬ್ ಸರಣಿಯಲ್ಲಿ ಚಾಚಾ ನೆಹರೂ ಅವರ ಪಾತ್ರದಲ್ಲಿ ನಟಿಸಿದ್ದಾರೆ. 4 ದಶಕಗಳ ಕಾಲದ ಅವರ ವೃತ್ತಿಜೀವನದಲ್ಲಿ, ಅವರು ಮಹಾತ್ಮಾ ಗಾಂಧಿ, ವಿಕ್ರಮ್ ಸಾರಾಭಾಯ್ ಮತ್ತು ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿಯವರಂತಹ ಪಾತ್ರವನ್ನು ನಿರ್ವಹಿಸಿದ್ದಾರೆ.
icon

(2 / 6)

ರೋಶನ್ ಸೇಠ್: 1982ರಲ್ಲಿ ತೆರೆಕಂಡ ಬ್ರಿಟಿಷ್-ಇಂಡಿಯನ್ ಚಲನಚಿತ್ರ 'ಗಾಂಧಿ' ಯಲ್ಲಿ ಪ್ರಧಾನ ಮಂತ್ರಿ ನೆಹರೂ ಪಾತ್ರವನ್ನು ರೋಶನ್ ಸೇಠ್ ನಿರ್ವಹಿಸಿದ್ದರು. ಈ ಚಿತ್ರವು 8 ಅಕಾಡೆಮಿ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.
icon

(3 / 6)

ಸೌರಭ್ ದುಬೆ:  2002 ರ ಚಲನಚಿತ್ರ 'ದಿ ಲೆಜೆಂಡ್ ಆಫ್ ಭಗತ್ ಸಿಂಗ್' ನಲ್ಲಿ ಪಂಡಿತ್ ನೆಹರೂ ಅವರ ಪಾತ್ರವನ್ನು ಸೌರಭ್ ದುಬೆ ನಿರ್ವಹಿಸಿದ್ದರು. ಈ ಚಿತ್ರವು ಎರಡು ರಾಷ್ಟ್ರೀಯ ಮತ್ತು ಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.
icon

(4 / 6)

ಬೆಂಜಮಿನ್ ಗಿಲಾನಿ: 1994 ರಲ್ಲಿ ತೆರೆಕಂಡ 'ಸರ್ದಾರ್' ಚಿತ್ರದಲ್ಲಿ ಪ್ರಧಾನಿ ನೆಹರೂ ಪಾತ್ರದಲ್ಲಿ ಬೆಂಜಮಿನ್ ಗಿಲಾನಿ ನಟಿಸಿದ್ದರು. ಈ ಚಿತ್ರವು ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
icon

(5 / 6)

ಭಾರತದ ಮೊದಲ ಪ್ರಧಾನಿ ನೆಹರೂ ಪಾತ್ರವನ್ನು ನಿರ್ವಹಿಸಿದ ನಟರಿವರು
icon

(6 / 6)

ಇತರ ಗ್ಯಾಲರಿಗಳು