ವೀಕ್ಷಣೆಯಲ್ಲಿ ಹೊಸ ದಾಖಲೆ ಬರೆದ ಆರ್ಸಿಬಿ vs ಜಿಜಿ ಪಂದ್ಯ; ಕಳೆದ ವರ್ಷಕ್ಕಿಂತ ಶೇ 150ರಷ್ಟು ಹೆಚ್ಚಳ
- ಡಬ್ಲ್ಯುಪಿಎಲ್ ಸಾಧನೆ ಕುರಿತು ಬಿಸಿಸಿಐ ಮಾಜಿ ಕಾರ್ಯದರ್ಶಿಯೂ ಆಗಿದ್ದ ಐಸಿಸಿ ಅಧ್ಯಕ್ಷ ಜಯ್ ಶಾ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ.
- ಡಬ್ಲ್ಯುಪಿಎಲ್ ಸಾಧನೆ ಕುರಿತು ಬಿಸಿಸಿಐ ಮಾಜಿ ಕಾರ್ಯದರ್ಶಿಯೂ ಆಗಿದ್ದ ಐಸಿಸಿ ಅಧ್ಯಕ್ಷ ಜಯ್ ಶಾ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ.
(1 / 11)
ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು-ಗುಜರಾತ್ ಜೈಂಟ್ಸ್ ನಡುವಿನ 3ನೇ ಆವೃತ್ತಿಯ ಡಬ್ಲ್ಯುಪಿಎಲ್ ಉದ್ಘಾಟನಾ ಪಂದ್ಯವು ವೀಕ್ಷಣೆ ಸಂಖ್ಯೆಯಲ್ಲಿ ಎಲ್ಲಾ ದಾಖಲೆಗಳನ್ನು ಮುರಿದಿದೆ.
(AFP)(2 / 11)
ಡಬ್ಲ್ಯುಪಿಎಲ್ ಸಾಧನೆ ಕುರಿತು ಬಿಸಿಸಿಐ ಮಾಜಿ ಕಾರ್ಯದರ್ಶಿಯೂ ಆಗಿದ್ದ ಐಸಿಸಿ ಅಧ್ಯಕ್ಷ ಜಯ್ ಶಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ.
(PTI)(3 / 11)
ಸುಮಾರು 30 ಮಿಲಿಯನ್ ಜನರು ಟಿವಿಯಲ್ಲಿ ಪಂದ್ಯ ವೀಕ್ಷಿಸಿರುವುದಾಗಿ ಜಯ್ ಶಾ ಅವರು ಪೋಸ್ಟ್ನಲ್ಲಿ ಬರೆದಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ 150 ರಷ್ಟು ಹೆಚ್ಚು.
(AFP)(4 / 11)
ಟಿವಿ ವೀಕ್ಷಕರ ಸಂಖ್ಯೆ ಮಾತ್ರವಲ್ಲ, ಡಿಜಿಟಲ್ ವೀಕ್ಷಕರ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಶೇ 70ರಷ್ಟು ಹೆಚ್ಚು ವೀಕ್ಷಣೆ ಪಡೆದಿದೆ.
(AFP)(5 / 11)
ಗುಜರಾತ್-ಆರ್ಸಿಬಿ ಪಂದ್ಯವು ಸಾಕಷ್ಟು ರೋಚಕತೆಯಿಂದ ಕೂಡಿತ್ತು. ಗುಜರಾತ್ ವಿರುದ್ಧ 202 ರನ್ಗಳ ಗುರಿ ಬೆನ್ನತ್ತಿದ ಆರ್ಸಿಬಿ ಅತಿ ಹೆಚ್ಚು ರನ್ ಚೇಸ್ ಮಾಡಿ ಗೆದ್ದ ಸಾಧನೆ ಮಾಡಿತು.
(AFP)(6 / 11)
ಮೊದಲ ಆವೃತ್ತಿಯಲ್ಲಿ ಹರ್ಮನ್ಪ್ರೀತ್ ಕೌರ್ ನಾಯಕತ್ವದ ಮುಂಬೈ ಇಂಡಿಯನ್ಸ್ ಚಾಂಪಿಯನ್ ಆಗಿತ್ತು. 2ನೇ ಆವೃತ್ತಿಯಲ್ಲಿ ಸ್ಮೃತಿ ಮಂದಾನ ನಾಯಕತ್ವದ ಆರ್ಸಿಬಿ ಪ್ರಶಸ್ತಿ ಗೆದ್ದಿತ್ತು.
(AFP)(7 / 11)
ಆದರೆ ಮೆಗ್ ಲ್ಯಾನಿಂಗ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಎರಡು ಆವೃತ್ತಿಗಳಲ್ಲೂ ಫೈನಲ್ ಪ್ರವೇಶಿಸಿ ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
(HT_PRINT)(8 / 11)
ಪ್ರಸ್ತುತ 3ನೇ ಆವೃತ್ತಿಯ ಮೊದಲ ಚರಣದ ಅಂತ್ಯಕ್ಕೆ ಆರ್ಸಿಬಿ ಆಡಿದ 2 ಪಂದ್ಯಗಳಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಡೆಲ್ಲಿ ಮೂರು ಪಂದ್ಯಗಳಲ್ಲಿ 2ರಲ್ಲಿ ಗೆದ್ದು 2ನೇ ಸ್ಥಾನದಲ್ಲಿದೆ.
(HT_PRINT)(9 / 11)
ಮುಂಬೈ ಮತ್ತು ಗುಜರಾತ್ ತಲಾ ಒಂದು ಪಂದ್ಯ ಗೆದ್ದಿದ್ದು, ಕ್ರಮವಾಗಿ ಮೂರು ಮತ್ತು 4ನೇ ಸ್ಥಾನ ಪಡೆದಿವೆ. ಯುಪಿ ವಾರಿಯರ್ಸ್ ಒಂದು ಪಂದ್ಯ ಗೆಲ್ಲದೆ ಕೊನೆಯ ಸ್ಥಾನದಲ್ಲಿದೆ.
(REUTERS)(10 / 11)
ಈ ಬಗ್ಗೆ ಟ್ವೀಟ್ ಮಾಡಿರುವ ಜಯ್ ಶಾ, "ಡಬ್ಲ್ಯುಪಿಎಲ್ನ 2ನೇ ಹಂತವು ಬೆಂಗಳೂರಿನಲ್ಲಿ ಪ್ರಾರಂಭವಾಗಲಿದೆ. ಅದಕ್ಕೂ ಮೊದಲು, ಸ್ಪರ್ಧೆಯ ಆರಂಭಿಕ ಪಂದ್ಯವನ್ನು ಟಿವಿಯಲ್ಲಿ ಸುಮಾರು 30 ಮಿಲಿಯನ್ ಜನರು ವೀಕ್ಷಿಸಿದ್ದಾರೆ ಎಂದು ಬರೆದಿದ್ದಾರೆ.
(AFP)ಇತರ ಗ್ಯಾಲರಿಗಳು












