Jiohotstar Web Series: ಒಟಿಟಿಯಲ್ಲಿ ರೋಚಕ ಥ್ರಿಲ್ಲರ್ ವೆಬ್ ಸರಣಿ ಬಿಡುಗಡೆ; ಪ್ರತಿಭಾನ್ವಿತ ಪಂಜಾಬಿ ಗಾಯಕನ ಬದುಕುಳಿಯುವ ಹೋರಾಟ
- Jiohotstar Web Series: ಜಿಯೋಹಾಟ್‌ಸ್ಟಾರ್‌ನಲ್ಲಿ (ಮಾರ್ಚ್ 21) ಹೊಸ ವೆಬ್ ಸರಣಿ ಕನ್ನೆಡಾ (Kanneda Web Series) ಬಿಡುಗಡೆಯಾಗಿದೆ. ಸಿಖ್ ದಂಗೆ ಸಮಯದಲ್ಲಿ ಭಾರತ ಬಿಟ್ಟು ಕೆನಡಾಕ್ಕೆ ವಲಸೆ ಹೋದ ಪಂಜಾಬಿ ಗಾಯಕನೊಬ್ಬನ ಬದುಕಿನ ಸಾಹಸದ ಹೋರಾಟದ ಕಥೆ ಇದಾಗಿದೆ.
- Jiohotstar Web Series: ಜಿಯೋಹಾಟ್‌ಸ್ಟಾರ್‌ನಲ್ಲಿ (ಮಾರ್ಚ್ 21) ಹೊಸ ವೆಬ್ ಸರಣಿ ಕನ್ನೆಡಾ (Kanneda Web Series) ಬಿಡುಗಡೆಯಾಗಿದೆ. ಸಿಖ್ ದಂಗೆ ಸಮಯದಲ್ಲಿ ಭಾರತ ಬಿಟ್ಟು ಕೆನಡಾಕ್ಕೆ ವಲಸೆ ಹೋದ ಪಂಜಾಬಿ ಗಾಯಕನೊಬ್ಬನ ಬದುಕಿನ ಸಾಹಸದ ಹೋರಾಟದ ಕಥೆ ಇದಾಗಿದೆ.
(1 / 8)
Kanneda Web Series: 1990ರ ದಶಕದ ಘಟನೆ ಇದಾಗಿದೆ. ಪಂಜಾಬಿ ಗಾಯಕನೊಬ್ಬ ರೋಡ್ ಸೈಡ್ ಹಾಡುತ್ತ ಜನಪ್ರಿಯತೆ ಪಡೆಯುತ್ತಾನೆ. ಮುಂದೆ ಆತ ಉದಯೋನ್ಮುಖ ಗಾಯಕನಾಗುತ್ತಾನೆ. ಈ ಸಮಯದಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ವಲಸಿಗನ ಕಷ್ಟ, ಸಮಸ್ಯೆಗಳು ಬೆನ್ನು ಹತ್ತುತ್ತವೆ. ಈ ಸಮಯದಲ್ಲಿ ಈತ ಉಗ್ರ ಹಾದಿಯನ್ನೂ ಹಿಡಿಯಬೇಕಾಗುತ್ತದೆ. ಕನ್ನೆಡಾ ಎಂಬ ರೋಚಕ ವೆಬ್‌ಸರಣಿ ಮಾರ್ಚ್ 21 ರಿಂದ ಜಿಯೋ ಹಾಟ್‌ಸ್ಟಾರ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ.
(2 / 8)
ಈ ವಾರ ಭಾರತದ ಒಟಿಟಿಗಳಲ್ಲಿ ವಿವಿಧ ಸಿನಿಮಾಗಳು ಬಿಡುಗಡೆಯಾಗಲು ಸರತಿಯಲ್ಲಿವೆ. ಜಿಯೋಹಾಟ್‌ಸ್ಟಾರ್ ಸಾಕಷ್ಟು ಹೊಸ ಸಿನಿಮಾ, ವೆಬ್ ಸರಣಿಗಳನ್ನು ಪರಿಚಯಿಸುತ್ತಿದೆ. ಇದರ ಮೊದಲ ಜಾಗತಿಕ ಕಾರ್ಯಕ್ರಮವಾದ ಡೇರ್‌ಡೆವಿಲ್: ಬಾರ್ನ್ ಎಗೇನ್ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಇದೀಗ ಜಿಯೋಹಾಟ್‌ಸ್ಟಾರ್ ತನ್ನ ಮೊದಲ ಹಿಂದಿ ಭಾಷೆಯ ವೆಬ್‌ಸರಣಿ ಪರಿಚಯಿಸುತ್ತಿದೆ. ಅದರ ಹೆಸರು ಕನ್ನೇಡ . ಇದು ಅಪರಾಧ ಜಗತ್ತಿನ ಸಿನಿಮಾ. ಬದುಕುವ ಹೋರಾಟವೂ ಹೌದು.
(3 / 8)
ಪ್ರತಿಭಾನ್ವಿತ ಪಂಜಾಬಿ ಗಾಯಕ ನಿಮ್ಜಾ ಅನಿವಾರ್ಯವಾಗಿ ಬದುಕು ಕಟ್ಟಿಕೊಳ್ಳಲು ಕೆನಡಾಕ್ಕೆ ವಲಸೆ ಹೋಗುತ್ತಾನೆ. ಒಳ್ಳೆಯತನದಿಂದ ಬದುಕಲು ಅಲ್ಲಿನ ವ್ಯವಸ್ಥೆ ಬಿಡುವುದಿಲ್ಲ. ವಲಸಿಗನ ಸಂಕಷ್ಟ ಮುಂದುವರೆಯುತ್ತದೆ. ಸಂಗೀತ, ಹಣ ಮತ್ತು ಅವ್ಯವಸ್ಥೆ ಈತನನ್ನು ಅಪರಾಧ ಜಗತ್ತಿನತ್ತ ಕರೆದೊಯ್ಯುತ್ತದೆ.
(4 / 8)
ಜಿಯೋಹಾಟ್‌ಸ್ಟಾರ್ ತನ್ನ ಮುಂಬರುವ ಸರಣಿ ಕನ್ನೇಡದ ಬಹುನಿರೀಕ್ಷಿತ ಟ್ರೇಲರ್ ಕೂಡ ಕುತೂಹಲ ಹುಟ್ಟಿಸಿದೆ. ಈ ಸರಣಿಯಲ್ಲಿ ಬದುಕಿನ ಹೋರಾಟದ ಚಿತ್ರಣಗಳು ಇವೆ. ಎಲ್ಲರೂ ಬದುಕಲು ಹೋರಾಡಬೇಕು. ಇಲ್ಲವಾದರೆ ನಿರ್ದಯ ಬೀದಿಗಳು ಕರುಣೆ ತೋರದು ಎಂದು ಟ್ರೈಲರ್‌ನಲ್ಲಿ ತೋರಿಸಲಾಗಿದೆ.
(5 / 8)
ಪರ್ಮಿಶ್ ವರ್ಮಾ ನಟಿಸಿರುವ ಕನ್ನೆಡ ಭಾರತದಲ್ಲಿ ಜಿಯೋಹಾಟ್‌ಸ್ಟಾರ್‌ನಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ. ಸ್ಟಾರ್ ನೆಟ್‌ವರ್ಕ್ ಸ್ವಾಧೀನದ ನಂತರ ಜಿಯೋಸಿನಿಮಾ ಮತ್ತು ಡಿಸ್ನಿ+ ಹಾಟ್‌ಸ್ಟಾರ್ ಒಂದೇ ವೇದಿಕೆಯಲ್ಲಿ ವಿಲೀನಗೊಂಡ ನಂತರ ಮೊದಲ ಹಿಂದಿ ವೆಬ್ ಸರಣಿ ಬಿಡುಗಡೆಯಾಗುತ್ತಿದೆ.
(6 / 8)
ಯಾವುದೇ ಹೆಚ್ಚುವರಿ ಬಾಡಿಗೆ ಇಲ್ಲದೆ, ಸಾಮಾನ್ಯ ಚಂದಾದಾರಿಕೆಯನ್ನು ಹೊಂದಿರುವ ಚಂದಾದಾರರಿಗೆ ಈ ಸರಣಿಯು ಲಭ್ಯವಿರುತ್ತದೆ. ಇದು ಮಾರ್ಚ್ 21, 2025ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಈ ಸರಣಿಯು ಅನಿರೀಕ್ಷಿತ ತಿರುವುಗಳಿರುವ ಆ್ಯಕ್ಷನ್ ಥ್ರಿಲ್ಲರ್ ವೆಬ್ ಸರಣಿ ಇದಾಗಿದೆ.
(7 / 8)
ನಿಮ್ಮ ಪಾತ್ರದಲ್ಲಿ ಪರ್ಮಿಶ್ ವರ್ಮಾ ನಟಿಸಿದ್ದಾರೆ. ಉಳಿದಂತೆ, ಮೊಹಮ್ಮದ್ ಜೀಶನ್ ಅಯ್ಯೂಬ್, ರಣವೀರ್ ಶೋರೆ, ಅರುಣೋದಯ ಸಿಂಗ್, ಆಧಾರ್ ಮಲಿಕ್, ಜಾಸ್ಮಿನ್ ಬಾಜ್ವಾ ನಟಿಸಿದ್ದಾರೆ.
(8 / 8)
"ಕನ್ನೆಡ ಕೇವಲ ಕಥೆಯಲ್ಲ. ಅದಕ್ಕಿಂತಲೂ ಹೆಚ್ಚಿನದು. ಇದು ವಿದೇಶಗಳಲ್ಲಿ ವಾಸಿಸುವ ಅಸಂಖ್ಯಾತ ಭಾರತೀಯರ ಹೋರಾಟಗಳು, ಮಹತ್ವಾಕಾಂಕ್ಷೆಗಳು ಮತ್ತು ಕನಸುಗಳ ಪ್ರತಿಬಿಂಬವಾಗಿದೆ. ನಿಮ್ಮಾ ಅವರ ಈ ಬದುಕಿನ ಪ್ರಯಾಣ ನನಗೆ ವೈಯಕ್ತಿಕವಾಗಿಯೂ ಕನೆಕ್ಟ್ ಆಗಿದೆ. ಏಕೆಂದರೆ, ನಾನು ಜೀವನದಲ್ಲಿ ಈ ರೀತಿಯ ಅನುಭವ ಪಡೆದಿದ್ದೇನೆ. ಆದರೆ ನಿಮ್ಮಾ ಅವರ ಬದುಕು ಇನ್ನಷ್ಟು ಕಷ್ಟಕರವಾಗಿದೆ. ಅಲ್ಲಿ ಬದುಕುಳಿಯುವ ಪ್ರಯತ್ನ ಕಾಣಿಸುತ್ತದೆ. ಅದು ಕೇವಲ ಒಂದು ಪಾತ್ರವಲ್ಲ. ಆ ಪಾತ್ರಕ್ಕೆ ಸಹಜವಾಗಿ ಜೀವ ತುಂಬಲು ಪ್ರಯತ್ನಿಸಿದ್ದೇನೆ" ಎಂದು ಪರ್ಮಿಶ್ ವರ್ಮಾ ಹೇಳಿದ್ದಾರೆ.
ಇತರ ಗ್ಯಾಲರಿಗಳು