ಆಕರ್ಷಕ ಸೆಂಚುರಿಯೊಂದಿಗೆ ರಿಕಿ ಪಾಂಟಿಂಗ್ ದಾಖಲೆ ಹಿಂದಿಕ್ಕಿದ ಜೋ ರೋಟ್; ವೇಗದ 19 ಸಾವಿರ ರನ್ ಸಿಡಿಸಿದ ಇಂಗ್ಲೆಂಡ್ ಆಟಗಾರ
- Joe Root Record : ಭಾರತದ ವಿರುದ್ಧದ ನಾಲ್ಕನೇ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ಜೋ ರೂಟ್, ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ ದಾಖಲೆ ಮುರಿದಿದ್ದಾರೆ.
- Joe Root Record : ಭಾರತದ ವಿರುದ್ಧದ ನಾಲ್ಕನೇ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ಜೋ ರೂಟ್, ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ ದಾಖಲೆ ಮುರಿದಿದ್ದಾರೆ.
(1 / 9)
ರಾಂಚಿಯಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ಜೋ ರೂಟ್ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಇದು ಅವರ 31ನೇ ಟೆಸ್ಟ್ ಶತಕವಾಗಿದ್ದು, ದಿಗ್ಗಜರ ದಾಖಲೆಗಳನ್ನು ಮುರಿಸಿದ್ದಾರೆ.
(2 / 9)
219 ಎಸೆತಗಳಲ್ಲಿ ನೂರರ ಗಡಿ ದಾಟಿದ ರೂಟ್, 2ನೇ ದಿನದಾಟಕ್ಕೂ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಸದ್ಯ ಅವರು 226 ಎಸೆತಗಳಲ್ಲಿ 106 ರನ್ ಗಳಿಸಿ ನಿಧಾನಗತಿಯ ಇನ್ನಿಂಗ್ಸ್‌ನಲ್ಲಿ ಕಟ್ಟಿದರು. ಅವರ ಇನ್ನಿಂಗ್ಸ್‌ನಲ್ಲಿ 9 ಬೌಂಡರಿಗಳಿವೆ.
(3 / 9)
ಈ ಶತಕದೊಂದಿಗೆ ಭಾರತದ ವಿರುದ್ಧ 10 ಟೆಸ್ಟ್ ಶತಕಗಳನ್ನು ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಇತಿಹಾಸ ನಿರ್ಮಿಸಿದರು. ಆ ಮೂಲಕ ಸ್ಟೀವ್ ಸ್ಮಿತ್ ದಾಖಲೆಯನ್ನು ಮುರಿದರು. ಅವರು 52 ಇನ್ನಿಂಗ್ಸ್‌ಗಳನ್ನು ಆಡಿದ ನಂತರ 10ನೇ ಶತಕ ಗಳಿಸಿದರು.
(4 / 9)
ಸ್ಟೀವ್ ಸ್ಮಿತ್ ಅವರು ಭಾರತದ ವಿರುದ್ಧ 37 ಇನ್ನಿಂಗ್ಸ್‌ಗಳಲ್ಲಿ 9 ಶತಕ ಗಳಿಸಿದ್ದರು. ಗ್ಯಾರಿ ಸೋಬರ್ಸ್ ಭಾರತದ ವಿರುದ್ಧ 30 ಇನ್ನಿಂಗ್ಸ್‌ಗಳಲ್ಲಿ 8 ಶತಕ, ವಿವಿಯನ್ ರಿಚರ್ಡ್ಸ್ ಮತ್ತು ರಿಕಿ ಪಾಂಟಿಂಗ್ ಕ್ರಮವಾಗಿ 41 ಮತ್ತು 51 ಇನ್ನಿಂಗ್ಸ್‌ಗಳಲ್ಲಿ ತಲಾ 8 ಶತಕ ಗಳಿಸಿದ್ದಾರೆ.
(5 / 9)
ಜೋ ರೂಟ್ ವೇಗದ 19,000 ಅಂತಾರಾಷ್ಟ್ರೀಯ ರನ್‌ಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಇಂಗ್ಲೆಂಡ್‌ನ ಸ್ಟಾರ್ ಬ್ಯಾಟ್ಸ್‌ಮನ್ 444 ಇನ್ನಿಂಗ್ಸ್‌ಗಳಲ್ಲಿ 19 ಸಾವಿರ ರನ್ ಪೂರೈಸಿದರು. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಕೂಡ ಒಬ್ಬರು.
(6 / 9)
ಕೊಹ್ಲಿ 399 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. 2ನೇ ಸ್ಥಾನದಲ್ಲಿರುವ ಸಚಿನ್ ತೆಂಡೂಲ್ಕರ್ 432 ಇನ್ನಿಂಗ್ಸ್‌ಗಳಲ್ಲಿ 19 ಸಾವಿರ ರನ್ ಪೂರೈಸಿದ್ದಾರೆ. ಮೂರನೇ ಸ್ಥಾನದಲ್ಲಿರುವ ಲಾರಾ, 433 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು.
(7 / 9)
ಜೋ ರೂಟ್ ರಿಕಿ ಪಾಂಟಿಂಗ್ (2,555) ಅವರನ್ನು ಹಿಂದಿಕ್ಕಿ ಭಾರತದ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಅವರು ಭಾರತದ ವಿರುದ್ಧ 29 ಟೆಸ್ಟ್‌ಗಳಲ್ಲಿ 2,600 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಸರಾಸರಿ 56ಕ್ಕಿಂತ ಹೆಚ್ಚಿದೆ.(AFP)
(8 / 9)
ಜೋ ರೂಟ್ ಇದೇ ವೇಳೆ ಟೆಸ್ಟ್ ಕ್ರಿಕೆಟ್‌ನಲ್ಲಿ 11,500 ರನ್ ಪೂರೈಸಿದರು. ಭಾರತದ ವಿರುದ್ಧ ರಾಂಚಿಯಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ನಲ್ಲಿ ಏಳು ರನ್ ಗಳಿಸಿದ ನಂತರವೇ ಅವರು ಈ ಮೈಲಿಗಲ್ಲನ್ನು ತಲುಪಿದರು. ರೂಟ್ ಮೈಲಿಗಲ್ಲನ್ನು ತಲುಪಿದ 2ನೇ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಮತ್ತು ಒಟ್ಟಾರೆಯಾಗಿ 10 ನೇ ಆಟಗಾರರಾದರು.(PTI)
ಇತರ ಗ್ಯಾಲರಿಗಳು