ಟೆಸ್ಟ್ ಕ್ರಿಕೆಟ್ನಲ್ಲಿ ಜೋ ರೂಟ್ ಐತಿಹಾಸಿಕ ಸಾಧನೆ; ಸಚಿನ್, ಪಾಂಟಿಂಗ್, ಕಾಲೀಸ್ ಪಟ್ಟಿಗೆ ಸೇರ್ಪಡೆ
- Joe Root: ನ್ಯೂಜಿಲೆಂಡ್ ವಿರುದ್ಧದ ವೆಲ್ಲಿಂಗ್ಟನ್ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಭರ್ಜರಿ ಅರ್ಧಶತಕ ಬಾರಿಸಿದ ಇಂಗ್ಲೆಂಡ್ ತಂಡದ ಅನುಭವಿ ಬ್ಯಾಟರ್ ಜೋ ರೂಟ್ ವಿಶ್ವ ಕ್ರಿಕೆಟ್ನಲ್ಲಿ ಅರ್ಧಶತಕಗಳ ಶತಕ ಸಿಡಿಸಿ ವಿಶೇಷ ದಾಖಲೆ ನಿರ್ಮಿಸಿದ್ದಾರೆ.
- Joe Root: ನ್ಯೂಜಿಲೆಂಡ್ ವಿರುದ್ಧದ ವೆಲ್ಲಿಂಗ್ಟನ್ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಭರ್ಜರಿ ಅರ್ಧಶತಕ ಬಾರಿಸಿದ ಇಂಗ್ಲೆಂಡ್ ತಂಡದ ಅನುಭವಿ ಬ್ಯಾಟರ್ ಜೋ ರೂಟ್ ವಿಶ್ವ ಕ್ರಿಕೆಟ್ನಲ್ಲಿ ಅರ್ಧಶತಕಗಳ ಶತಕ ಸಿಡಿಸಿ ವಿಶೇಷ ದಾಖಲೆ ನಿರ್ಮಿಸಿದ್ದಾರೆ.
(1 / 6)
ನ್ಯೂಜಿಲೆಂಡ್ ವಿರುದ್ಧದ ವೆಲ್ಲಿಂಗ್ಟನ್ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ವೈಫಲ್ಯ ಅನುಭವಿಸಿದ್ದ ಇಂಗ್ಲೆಂಡ್ ಸ್ಟಾರ್ ಬ್ಯಾಟರ್ ಜೋ ರೂಟ್, ಎರಡನೇ ಇನ್ನಿಂಗ್ಸ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ರೂಟ್ 2ನೇ ಇನ್ನಿಂಗ್ಸ್ನಲ್ಲಿ ಅದ್ಭುತ ಅರ್ಧಶತಕದ ಬೆನ್ನಲ್ಲೇ ಹೊಸದೊಂದು ದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾರೆ.
(2 / 6)
ಜೋ ರೂಟ್ ವೆಲ್ಲಿಂಗ್ಟನ್ನಲ್ಲಿ ಅರ್ಧಶತಕದ ಗಡಿ ದಾಟಿದ ಕೂಡಲೇ ವೈಯಕ್ತಿಕ ದಾಖಲೆ ಬರೆದರು. ವಿಶ್ವ ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿರುವುದು ನಾಲ್ವರು (ಜೋ ರೂಟ್ ಸೇರಿ) ಮಾತ್ರ. ಈ ದಾಖಲೆಯೊಂದಿಗೆ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಎಲೈಟ್ ಪಟ್ಟಿಗೆ ಸೇರ್ಪಡೆಯಾದರು.
(3 / 6)
76 ಎಸೆತಗಳಲ್ಲಿ 4 ಬೌಂಡರಿಗಳ ಸಹಾಯದಿಂದ ಅರ್ಧಶತಕ ಪೂರ್ಣಗೊಳಿಸಿದ ಜೋ ರೂಟ್, ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 100 ಬಾರಿ 50 ರನ್ಗಳ ಗಡಿ ದಾಟಿದ್ದಾರೆ.
(4 / 6)
ಜೋ ರೂಟ್ 151 ಟೆಸ್ಟ್ ಪಂದ್ಯಗಳಲ್ಲಿ 276 ಇನ್ನಿಂಗ್ಸ್ಗಳಲ್ಲಿ 35 ಶತಕ, 65 ಅರ್ಧಶತಕ ಗಳಿಸಿದ್ದಾರೆ. 2ನೇ ಇನ್ನಿಂಗ್ಸ್ನಲ್ಲಿ ರೂಟ್ ತಮ್ಮ ಅರ್ಧಶತಕವನ್ನು ಶತಕವಾಗಿ ಪರಿವರ್ತಿಸುವ ಅವಕಾಶವನ್ನು ಹೊಂದಿದ್ದಾರೆ.
(5 / 6)
ಒಟ್ಟಾರೆಯಾಗಿ ರೂಟ್ 100 ಟೆಸ್ಟ್ ಇನ್ನಿಂಗ್ಸ್ಗಳಲ್ಲಿ 50 ರನ್ಗಳ ಗಡಿ ದಾಟಿದ್ದಾರೆ. ಜೋ ರೂಟ್ಗಿಂತ ಮೊದಲು ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್ ಮತ್ತು ಜಾಕ್ ಕಾಲಿಸ್ ಮಾತ್ರ ಟೆಸ್ಟ್ನಲ್ಲಿ ಇಂತಹ ಸಾಧನೆ ಮಾಡಿದ್ದಾರೆ,
(6 / 6)
ಸಚಿನ್ ತೆಂಡೂಲ್ಕರ್ 200 ಟೆಸ್ಟ್ಗಳ 329 ಇನ್ನಿಂಗ್ಸ್ಗಳಲ್ಲಿ 119 ಬಾರಿ 50 ರನ್ಗಳ (51 ಶತಕ ಮತ್ತು 68 ಅರ್ಧಶತಕ) ದಾಟಿದ್ದಾರೆ. ಪಾಂಟಿಂಗ್ 168 ಟೆಸ್ಟ್ಗಳ 287 ಇನ್ನಿಂಗ್ಸ್ಗಳಲ್ಲಿ ಬ್ಯಾಟಿಂಗ್ ಮಾಡಿದ್ದು, 103 ಬಾರಿ (41 ಶತಕ ಮತ್ತು 62 ಅರ್ಧಶತಕ) 50 ರನ್ಗಳ ಗಡಿ ದಾಟಿದ್ದಾರೆ, ಜಾಕ್ ಕಾಲಿಸ್ 166 ಟೆಸ್ಟ್ ಪಂದ್ಯಗಳ 280 ಇನ್ನಿಂಗ್ಸ್ಗಳಲ್ಲಿ 103 ಬಾರಿ (45 ಶತಕ, 58 ಅರ್ಧಶತಕ) 50ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಜೋ ರೂಟ್ ಇವರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ,
ಇತರ ಗ್ಯಾಲರಿಗಳು