ಕನ್ನಡ ಸುದ್ದಿ  /  Photo Gallery  /  Jofra Archer To Join Rcb England Stars Cryptic Instagram Story Before Ipl 2024 Opener Vs Csk Creates Furore Prs

ಜೋಫ್ರಾ ಆರ್ಚರ್​​ ಐಪಿಎಲ್​ನಲ್ಲಿ ಆರ್​ಸಿಬಿ ಪರ ಆಡುತ್ತಾರೆಯೇ; ಇಂಗ್ಲೆಂಡ್ ವೇಗಿಯ ನಿಗೂಢ ಇನ್​ಸ್ಟಾ ಸ್ಟೋರಿ ವೈರಲ್

  • Jofra Archar: ಇಂಗ್ಲೆಂಡ್​​ ಸ್ಟಾರ್ ಬೌಲರ್​ ಜೋಫ್ರಾ ಆರ್ಚರ್ ಐಪಿಎಲ್ 2024ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಇದೀಗ ಆರ್ಚರ್​​ ಪೋಸ್ಟ್ ಮಾಡಿದ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಈ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.

ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್-2024 ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಲಿದ್ದಾರೆ ಎಂಬ ವದಂತಿಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಆದರೀಗ ಅದಕ್ಕೆ ಪುಷ್ಟಿ ನೀಡುವಂತಿದೆ ಆರ್ಚರ್​ ಇನ್​ಸ್ಟಾಗ್ರಾಂ ಸ್ಟೋರಿ.
icon

(1 / 6)

ಗಾಯದಿಂದ ಚೇತರಿಸಿಕೊಂಡಿರುವ ಆರ್ಚರ್​ ಅವರು ಕೌಂಟಿ ಕ್ರಿಕೆಟ್​​ಗೆ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ. ಅದಕ್ಕಾಗಿ ಸಸೆಕ್ಸ್ ತಂಡದೊಂದಿಗೆ ಬೆಂಗಳೂರಿನಲ್ಲಿ ತಯಾರಿಯಲ್ಲಿ ತೊಡಗಿದ್ದಾರೆ. ಆದರೆ ಅವರು ಐಪಿಎಲ್ ಆಡಲು ಭಾರತಕ್ಕೆ ಬಂದಿದ್ದಾರೆ ಎಂಬ ವದಂತಿಗಳು ಹಬ್ಬಿವೆ.
icon

(2 / 6)

ಗಾಯದಿಂದ ಚೇತರಿಸಿಕೊಂಡಿರುವ ಆರ್ಚರ್​ ಅವರು ಕೌಂಟಿ ಕ್ರಿಕೆಟ್​​ಗೆ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ. ಅದಕ್ಕಾಗಿ ಸಸೆಕ್ಸ್ ತಂಡದೊಂದಿಗೆ ಬೆಂಗಳೂರಿನಲ್ಲಿ ತಯಾರಿಯಲ್ಲಿ ತೊಡಗಿದ್ದಾರೆ. ಆದರೆ ಅವರು ಐಪಿಎಲ್ ಆಡಲು ಭಾರತಕ್ಕೆ ಬಂದಿದ್ದಾರೆ ಎಂಬ ವದಂತಿಗಳು ಹಬ್ಬಿವೆ.(AP)

ಬೆಂಗಳೂರಿನಲ್ಲಿ ಪ್ರಾಕ್ಟೀಸ್ ಮುಗಿಸಿ ಜೋಫ್ರಾ ಆರ್ಚರ್ ಆರ್​ಸಿಬಿ ತಂಡದ ಕೆಫೆಗೆ ಭೇಟಿ ನೀಡಿದ್ದಾರೆ. ಅದರ ಫೋಟೋವನ್ನು ತಮ್ಮ ಇನ್ಸ್​ಟಾಗ್ರಾಂ​ನಲ್ಲಿ ಪೋಸ್ಟ್ ಮಾಡಿದ್ದಾರೆ.
icon

(3 / 6)

ಬೆಂಗಳೂರಿನಲ್ಲಿ ಪ್ರಾಕ್ಟೀಸ್ ಮುಗಿಸಿ ಜೋಫ್ರಾ ಆರ್ಚರ್ ಆರ್​ಸಿಬಿ ತಂಡದ ಕೆಫೆಗೆ ಭೇಟಿ ನೀಡಿದ್ದಾರೆ. ಅದರ ಫೋಟೋವನ್ನು ತಮ್ಮ ಇನ್ಸ್​ಟಾಗ್ರಾಂ​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದಲ್ಲದೆ ಮಾರ್ಚ್ 17ರಂದು ಜೋಫ್ರಾ ಆರ್ಚರ್ ಸ್ಟೋರಿಯಲ್ಲಿ ಈ ಪೋಸ್ಟ್​ ಮಾಡಿದ ಬೆನ್ನಲ್ಲೇ ಆರ್​​ಸಿಬಿ ಪರ ಆಡಲಿದ್ದಾರೆ ಎಂಬ ವದಂತಿಗಳು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
icon

(4 / 6)

ಇದಲ್ಲದೆ ಮಾರ್ಚ್ 17ರಂದು ಜೋಫ್ರಾ ಆರ್ಚರ್ ಸ್ಟೋರಿಯಲ್ಲಿ ಈ ಪೋಸ್ಟ್​ ಮಾಡಿದ ಬೆನ್ನಲ್ಲೇ ಆರ್​​ಸಿಬಿ ಪರ ಆಡಲಿದ್ದಾರೆ ಎಂಬ ವದಂತಿಗಳು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

2022ರ ಐಪಿಎಲ್​​ನಲ್ಲಿ ಮುಂಬೈ ಇಂಡಿಯನ್ಸ್ ಜೋಫ್ರಾ ಆರ್ಚರ್ ಅವರನ್ನು ಆಯ್ಕೆ ಮಾಡಿತ್ತು. ಆದಾಗ್ಯೂ, ಗಾಯದಿಂದ ಅವರು ಋತುವಿನಿಂದ ಹೊರಗುಳಿದಿದ್ದರು. 2023ರ ಸೀಸನ್​ಗೆ ಮರಳಿದರೂ ನಾಲ್ಕು ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿದಿದ್ದರು. ಮತ್ತೆ ಗಾಯಗೊಂಡರು. ಹೀಗಾಗಿ 2023ರ ಆವೃತ್ತಿಗೆ ಆರ್ಚರ್ ಅವರನ್ನು ಮುಂಬೈ ಕೈಬಿಟ್ಟಿತು. ಹರಾಜಿನಲ್ಲಿ ಭಾಗವಹಿಸದ  ಆರ್ಚರ್, ಐಪಿಎಲ್ 2024ರಲ್ಲಿ ಆರ್​ಸಿಬಿ ಪರ ಆಡುತ್ತಾರೆಯೇ ಎಂಬುದನ್ನು ನೋಡಬೇಕಾಗಿದೆ. 
icon

(5 / 6)

ಐಪಿಎಲ್ 2024 ಸೀಸನ್ ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. 
icon

(6 / 6)

ಐಪಿಎಲ್ 2024 ಸೀಸನ್ ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. (IPL)

IPL_Entry_Point

ಇತರ ಗ್ಯಾಲರಿಗಳು