Jos Buttler: ಭಾರತದ ವಿರುದ್ಧ ಸೋತರೂ ವಿಶ್ವದಾಖಲೆ ನಿರ್ಮಿಸಿದ ಜೋಸ್ ಬಟ್ಲರ್
- Jos Buttler: ಈಡನ್ ಗಾರ್ಡನ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ಭಾರತ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಜೋಸ್ ಬಟ್ಲರ್ ಭರ್ಜರಿ ಅರ್ಧಶತಕ ಬಾರಿಸಿ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
- Jos Buttler: ಈಡನ್ ಗಾರ್ಡನ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ಭಾರತ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಜೋಸ್ ಬಟ್ಲರ್ ಭರ್ಜರಿ ಅರ್ಧಶತಕ ಬಾರಿಸಿ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
(1 / 9)
ಈಡನ್ ಗಾರ್ಡನ್ಸ್ ಮೈದಾನದಲ್ಲಿ ಜರುಗಿದ ಟೀಮ್ ಇಂಡಿಯಾ ವಿರುದ್ಧದ ಮೊದಲ ಟಿ20ಐ ಪಂದ್ಯದಲ್ಲಿ ಇಂಗ್ಲೆಂಡ್ ಸೋತರೂ ನಾಯಕ ಜೋಸ್ ಬಟ್ಲರ್ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
(2 / 9)
ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಬಾರಿಸಿದ ಜೋಸ್ ಬಟ್ಲರ್ 44 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಹಿತ 58 ರನ್ ಬಾರಿಸಿದರು. ಇದರೊಂದಿಗೆ ವೈಯಕ್ತಿಕ ಮೈಲಿಗಲ್ಲೊಂದನ್ನು ದಾಟಿದ್ದಾರೆ.
(3 / 9)
ಪಂದ್ಯದಲ್ಲಿ ಬಟ್ಲರ್ 33 ರನ್ ಗಳಿಸಿದ ವೇಳೆ ಒಟ್ಟಾರೆ ಟಿ20 ಇತಿಹಾಸದಲ್ಲಿ (ದೇಶೀಯ-ಅಂತಾರಾಷ್ಟ್ರೀಯ) ಕ್ರಿಕೆಟ್ನಲ್ಲಿ 12,000 ರನ್ ಪೂರೈಸಿದರು. ಇದರೊಂದಿಗೆ ದಿಗ್ಗಜರ ಎಲೈಟ್ ಪಟ್ಟಿಗೆ ಸೇರಿದ್ದಾರೆ.
(4 / 9)
ಬಟ್ಲರ್ ಐತಿಹಾಸಿಕ ಮೈಲಿಗಲ್ಲು ತಲುಪಿದ ಬೆನ್ನಲ್ಲೇ ಕ್ರಿಸ್ಗೇಲ್, ವಿರಾಟ್ ಕೊಹ್ಲಿ ಸೇರಿದಂತೆ ಪ್ರಮುಖರ ಸಾಲಿಗೆ ಸೇರ್ಪಡೆಯಾದರು.
(5 / 9)
ಟಿ20 ಕ್ರಿಕೆಟ್ನಲ್ಲಿ 12,000 ರನ್ ಪೂರೈಸಿದ ವಿಶ್ವದ 7ನೇ ಆಟಗಾರ ಎಂಬ ಹೆಗ್ಗಳಿಕೆಗೆ ಬಟ್ಲರ್ ಪಾತ್ರರಾಗಿದ್ದಾರೆ. ಈ ಸಾಧನೆ ಮಾಡಿದ ಇಂಗ್ಲೆಂಡ್ನ 2ನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
(6 / 9)
ಜೋಸ್ ಬಟ್ಲರ್ ತಮ್ಮ ವೃತ್ತಿಜೀವನದಲ್ಲಿ 430 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ಪೈಕಿ 405 ಇನ್ನಿಂಗ್ಸ್ಗಳಲ್ಲಿ 12035 ರನ್ ಗಳಿಸಿದ್ದಾರೆ. 8 ಶತಕ, 84 ಅರ್ಧಶತಕ ಬಾರಿಸಿದ್ದಾರೆ. ಗರಿಷ್ಠ ವೈಯಕ್ತಿಕ ಇನ್ನಿಂಗ್ಸ್ 124 ರನ್.
(Shyamal Maitra)(7 / 9)
ಕ್ರಿಸ್ ಗೇಲ್ (14562), ಶೋಯೆಬ್ ಮಲಿಕ್ (13492), ಕೀರನ್ ಪೊಲಾರ್ಡ್ (13434), ಅಲೆಕ್ಸ್ ಹೇಲ್ಸ್ (13361), ವಿರಾಟ್ ಕೊಹ್ಲಿ (12886), ಡೇವಿಡ್ ವಾರ್ನರ್ (12757) ಅವರು ಬಟ್ಲರ್ ಅವರಿಗಿಂತ ಮೊದಲು ಟಿ20 ಕ್ರಿಕೆಟ್ನಲ್ಲಿ 12,000 ರನ್ ಗಡಿ ದಾಟಿದ್ದಾರೆ.
(AFP)(8 / 9)
ಇಂಗ್ಲೆಂಡ್ ಪರ ಜೋಸ್ ಬಟ್ಲರ್ ಅವರಿಗಿಂತ ಮೊದಲು ಅಲೆಕ್ಸ್ ಹೇಲ್ಸ್ ಮಾತ್ರ ಈ ಮೈಲಿಗಲ್ಲನ್ನು ದಾಟಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
(PTI)ಇತರ ಗ್ಯಾಲರಿಗಳು