ಜೂನ್ ತಿಂಗಳಲ್ಲಿ ಬಿಡುಗಡೆಯಾಗಲಿರುವ ಬಹುನಿರೀಕ್ಷಿತ 7 ಸಿನಿಮಾಗಳು; ಚಿತ್ರಮಂದಿರಗಳು ಹೌಸ್‌ಫುಲ್ ಆಗುವ ನಿರೀಕ್ಷೆ
ಜೂನ್ ತಿಂಗಳಲ್ಲಿ ಬಹುನಿರೀಕ್ಷಿತ ಹಲವು ಸಿನಿಮಾಗಳು ಬಿಡುಗಡೆಯಾಗಲಿವೆ. ಇವುಗಳಲ್ಲಿ ಕೆಲವು ಚಿತ್ರಗಳು ಚಿತ್ರಮಂದಿರಗಳನ್ನು ಹೌಸ್‌ಫುಲ್ ಮಾಡಬಹುದೆಂಬ ನಿರೀಕ್ಷೆಯಲ್ಲಿ ಅಭಿಮಾನಿಗಳು ಇದ್ದಾರೆ. ಕಮಲ್ ಹಾಸನ್ ನಟನೆಯ ಥಗ್ ಲೈಫ್ ಸೇರಿದಂತೆ ಜೂನ್ ತಿಂಗಳಲ್ಲಿ ಬಿಡುಗಡೆಯಾಗುವ ಸಿನಿಮಾಗಳ ವಿವರ ಇಲ್ಲಿದೆ.
(1 / 8)
ಜೂನ್ ತಿಂಗಲ್ಲಿ ಹಲವು ಸಿನಿಮಾಗಳು ಬಿಡುಗಡೆಯಾಗಲಿವೆ. ಇವುಗಳಲ್ಲಿ ಏಳು ಬಹುನಿರೀಕ್ಷಿತ ಚಿತ್ರಗಳು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿವೆ. ಥಗ್‌ಲೈಫ್, ಸಿತಾರೆ ಜಮೀನ್ ಪರ್, ಮಾ ಸೇರಿದಂತೆ ವಿವಿಧ ಸಿನಿಮಾಗಳ ವಿವರ ಇಲ್ಲಿದೆ. ಕನ್ನಡದ ಸ್ಟಾರ್ ನಟರ ಯಾವುದೇ ಸಿನಿಮಾ ಜೂನ್‌ನಲ್ಲಿ ರಿಲೀಸ್ ಆಗುತ್ತಿಲ್ಲ.
(2 / 8)
ಮಾ: 'ಮಾ' ಜೂನ್ 27, 2025 ರಂದು ಬಿಡುಗಡೆಯಾಗಲಿದೆ. ಈ ಚಿತ್ರವು ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಅಂತ್ಯವಿಲ್ಲದ ಯುದ್ಧವನ್ನು ಚಿತ್ರಿಸುತ್ತದೆ, ಇದು ರೋಮಾಂಚಕ, ನಿಗೂಢ ಡ್ರಾಮಾ ಸಿನಿಮಾವೆಂದು ಚಿತ್ರತಂಡ ಹೇಳಿದೆ.
(3 / 8)
ಜ್ಞಾನವಾಪಿ ಫೈಲ್ಸ್: 'ಜ್ಞಾನವಾಪಿ ಫೈಲ್ಸ್ - ಎ ಟೈಲರ್ ಮರ್ಡರ್ ಸ್ಟೋರಿ' ಉದಯಪುರದ ಟೈಲರ್ ಕನ್ಹಯ್ಯಾಲಾಲ್ ಅವರ ಕ್ರೂರ ಹತ್ಯೆಯನ್ನು ಆಧರಿಸಿದೆ. ಈ ಚಿತ್ರವು ಜೂನ್ 27, 2025ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಭಾರತ, ಯುಕೆ, ಯುಎಸ್ಎ ಮತ್ತು ದುಬೈ ಸೇರಿದಂತೆ 4,500 ಪರದೆಗಳಲ್ಲಿ ಪ್ರದರ್ಶನಗೊಳ್ಳಲಿದೆ.
(4 / 8)
ಸಿತಾರೆ ಜಮೀನ್ ಪರ್: 'ಸಿತಾರೆ ಜಮೀನ್ ಪರ್' ಚಿತ್ರವು ಜೂನ್ 20, 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು ಆಮಿರ್ ಖಾನ್ ಅವರ 2007 ರ ಹಿಟ್ 'ತಾರೆ ಜಮೀನ್ ಪರ್' ಚಿತ್ರದ ಶೈಲಿಯನ್ನು ಹೋಲುತ್ತದೆ. ಇದು ಸಂಪೂರ್ಣವಾಗಿ ಹೊಸ ಕಥೆಯನ್ನು ಹೊಂದಿದೆ.
(5 / 8)
ಎಲಿಯೊ: ಎಲಿಯೊ ಡಿಸ್ನಿ ಮತ್ತು ಪಿಕ್ಸರ್‌ನಿಂದ ಮುಂಬರುವ ಅನಿಮೇಟೆಡ್ ವಿಜ್ಞಾನ-ನಾಟಕ ಚಲನಚಿತ್ರವಾಗಿದೆ. ಜೂನ್ 20 ರಂದು ಜಗತ್ತಿನಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
(6 / 8)
ಹೌಸ್‌ಫುಲ್ 5: 'ಹೌಸ್‌ಫುಲ್ 5' ಮುಂಬರುವ ಹಿಂದಿ ಹಾಸ್ಯ ಚಿತ್ರ. ಜೂನ್ 6 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದು 'ಹೌಸ್‌ಫುಲ್' ಫ್ರಾಂಚೈಸ್‌ನ ಐದನೇ ಕಂತಾಗಿದ್ದು, ತರುಣ್ ಮನ್ಸುಖಾನಿ ನಿರ್ದೇಶಿಸಿದ್ದಾರೆ. ಸಾಜಿದ್ ನಾಡಿಯಾಡ್ವಾಲಾ ನಿರ್ಮಿಸಿದ್ದಾರೆ.
(7 / 8)
ಥಗ್ ಲೈಫ್: ಮಣಿರತ್ನಂ ನಿರ್ದೇಶನದ ಮತ್ತು ಕಮಲ್ ಹಾಸನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಬಹುನಿರೀಕ್ಷಿತ ತಮಿಳು ಗ್ಯಾಂಗ್‌ಸ್ಟರ್ ಡ್ರಾಮಾ ಚಿತ್ರವಾಗಿದೆ. ಈ ಚಿತ್ರವು ಜೂನ್ 5, 2025ರಂದು ಬಿಡುಗಡೆಯಾಗಲಿದೆ.
ಇತರ ಗ್ಯಾಲರಿಗಳು