Jupiter Mars Conjunction: ವೃಷಭ ರಾಶಿಯಲ್ಲಿ ಗುರು, ಮಂಗಳ ಸಂಯೋಗ; ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ-jupiter mars conjunction in taurus these three zodiac signs will get luck by this combination arc ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Jupiter Mars Conjunction: ವೃಷಭ ರಾಶಿಯಲ್ಲಿ ಗುರು, ಮಂಗಳ ಸಂಯೋಗ; ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ

Jupiter Mars Conjunction: ವೃಷಭ ರಾಶಿಯಲ್ಲಿ ಗುರು, ಮಂಗಳ ಸಂಯೋಗ; ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ

  • ಮಂಗಳನು ವೃಷಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಮಂಗಳನು ಈಗಾಗಲೇ ವೃಷಭ ರಾಶಿಯಲ್ಲಿರುವ ಗುರು ಗ್ರಹದೊಂದಿಗೆ ಸೇರಿ ಅಪರೂಪದ ಯೋಗವನ್ನು ರೂಪಿಸಲಿದ್ದಾನೆ. ಈ ಸಂಯೋಜನೆಯು ಎಲ್ಲಾ 12 ರಾಶಿಗಳ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಆದರೆ ಕೆಲವು ರಾಶಿಗಳಿಗೆ ಅಪರೂಪದ ಯೋಗ ಸಿಗಲಿದೆ.

ಜ್ಯೋತಿಷ್ಯ ಶಾಸ್ತ್ರದಲ್ಲಿರುವ ನವ ಗ್ರಹಗಳಲ್ಲಿ ಗುರುವನ್ನು ಶುಭ ಗ್ರಹ ಎಂದು ಕರೆಯಲಾಗುತ್ತದೆ. ಅವನು ವರ್ಷಕ್ಕೊಮ್ಮೆ ತನ್ನ ಸ್ಥಾನವನ್ನು ಬದಲಾಯಿಸುತ್ತಾನೆ. ಅವನ ಸ್ಥಾನ ಬದಲಾವಣೆಯು ಎಲ್ಲಾ ರಾಶಿಗಳ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಗುರು ಮೇ 1 ರಂದು ಮೇಷದಿಂದ ವೃಷಭ ರಾಶಿಗೆ ಪ್ರಯಾಣಿಸಿರುತ್ತಾನೆ. 2025ರವರೆಗೆ ಅದೇ ರಾಶಿಯಲ್ಲಿ ಸಂಚರಿಸಲಿದ್ದಾನೆ. ಸಂಪತ್ತು, ಸಮೃದ್ಧಿ, ಸಂತತಿ ಹಾಗೂ ಮದುವೆಯ ಭಾಗ್ಯವನ್ನು ಗುರು ನೀಡುತ್ತಾನೆ.
icon

(1 / 7)

ಮಂಗಳ ಗ್ರಹವು ಒಂಬತ್ತು ಗ್ರಹಗಳ ಅಧಿಪತಿ. ಅವನು ಆತ್ಮವಿಶ್ವಾಸ, ಧೈರ್ಯ, ಪರಿಶ್ರಮ ಮತ್ತು ಶಕ್ತಿಯ ಮೂಲ. ಮಂಗಳ ಗ್ರಹವು 45 ದಿನಗಳಿಗೊಮ್ಮೆ ತನ್ನ ಸ್ಥಾನವನ್ನು ಬದಲಾಯಿಸುತ್ತಾನೆ. ಈ ಸ್ಥಾನ ಬದಲಾವಣೆ ಸಹ ಎಲ್ಲಾ ರಾಶಿಗಳ ಮೇಲೆ ಭಾರಿ ಪರಿಣಾಮ ಬೀರುತ್ತದೆ.
icon

(2 / 7)

ಈಗ ಮಂಗಳನು ವೃಷಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಗುರು ಗ್ರಹವು ಈಗಾಗಲೇ ವೃಷಭ ರಾಶಿಯಲ್ಲಿ ಸಾಗುತ್ತಿರುವುದರಿಂದ ಮಂಗಳ ಮತ್ತು ಗುರು ಇಬ್ಬರೂ ಒಂದೇ ರಾಶಿಯಲ್ಲಿ ಸಂಚರಿಸಲಿದ್ದಾರೆ. ಗುರು ಮತ್ತು ಮಂಗಳನ ಸಂಯೋಜನೆಯು ಎಲ್ಲಾ ರಾಶಿಗಳ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಆದರೆ ಇದರಿಂದ ಕೆಲವು ರಾಶಿಯವರಿಗೆ ಒಳ್ಳೆಯ ಯೋಗ ಲಭಿಸುತ್ತದೆ. ಹಾಗಾದರೆ ಯಾವ ರಾಶಿಯವರು ಅದೃಷ್ಟವಂತರು ಎಂಬುದನ್ನು ನೋಡೋಣ.
icon

(3 / 7)

ಮೇಷ ರಾಶಿ: ಗುರು ಮತ್ತು ಮಂಗಳನ ಸಂಯೋಗವು ಮೇಷ ರಾಶಿಯವರಿಗೆ ಅನೇಕ ಪ್ರಯೋಜನಗಳನ್ನು ನೀಡಲಿದೆ. ಈ ಸಮಯದಲ್ಲಿ ಆರ್ಥಿಕ ಲಾಭವನ್ನು ಪಡೆಯುತ್ತೀರಿ. ಅನಿರೀಕ್ಷಿತ ಸಮಯದಲ್ಲಿ ಹಣದ ಹರಿವು ಇರುತ್ತದೆ. ಸಂವಹನ ಕೌಶಲದ ಸಹಾಯದಿಂದ ಎಲ್ಲಾ ಕಾರ್ಯಗಳು ಯಶಸ್ವಿಯಾಗುತ್ತವೆ. ನಿಮ್ಮ ಜೀವನದಲ್ಲಿ ಅನೇಕ ಬೆಳವಣಿಗೆಗಳು ಆಗುತ್ತವೆ.
icon

(4 / 7)

ಮಕರ ರಾಶಿ: ಗುರು ಮತ್ತು ಮಂಗಳ ಗ್ರಹಗಳ ಸಂಯೋಜನೆಯು ಮಕರ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ನಿಮಗೆ ಅನೇಕ ರೀತಿಯ ಮಂಗಳಕರವಾದ ಸಮಯವನ್ನು ಒದಗಿಸುತ್ತದೆ. ನೀವು ಪ್ರಾರಂಭಿಸಿದ ಕೆಲಸಗಳು ಯಶಸ್ವಿಯಾಗುತ್ತವೆ. ಆರ್ಥಿಕ ಲಾಭ ಇರುತ್ತದೆ. ಬಾಕಿ ಹಣ ವಾಪಸ್ ಬರುತ್ತೆ.
icon

(5 / 7)

ಕುಂಭ ರಾಶಿ: ಗುರು ಮತ್ತು ಮಂಗಳ ಗ್ರಹಗಳ ಸಂಯೋಜನೆಯು ನಿಮಗೆ ಉತ್ತಮ ಯೋಗವನ್ನು ನೀಡುತ್ತದೆ. ನಿಮ್ಮ ರಾಶಿಚಕ್ರದ ನಾಲ್ಕನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಇದು ನಿಮಗೆ ಜೀವನದಲ್ಲಿ ಎಲ್ಲಾ ರೀತಿಯ ಸಂತೋಷವನ್ನು ನೀಡುತ್ತದೆ. ಹೊಸ ಮನೆ ಮತ್ತು ವಾಹನ ಖರೀದಿಸುವ ಸಾಧ್ಯತೆ ಇದೆ. ಆರ್ಥಿಕವಾಗಿ ಬಲಗೊಳ್ಳುತ್ತೀರಿ. ಹಳೆಯ ಬಾಕಿಯನ್ನು ಪಾವತಿ ಮಾಡುತ್ತೀರಿ. ಕುಟುಂಬದಲ್ಲಿ ಸಂತೋಷ ಇರಲಿದೆ.
icon

(6 / 7)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
icon

(7 / 7)

ಇತರ ಗ್ಯಾಲರಿಗಳು