Misuse of PIL: ಪಿಐಎಲ್ ಅಂದ್ರೆ ಪೈಸಾ ಇಂಟರೆಸ್ಟ್ ಲಿಟಿಗೇಶನ್; ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ ವಿ ನಾಗರತ್ನ ಕಳವಳಕ್ಕೆ ಇದುವೇ ಕಾರಣ
Misuse of PIL: ಪಬ್ಲಿಕ್ ಇಂಟರೆಸ್ಟ್ ಲಿಟಿಗೇಶನ್ (ಪಿಐಎಲ್) ಉತ್ತಮ ವಿಚಾರಕ್ಕೆ, ಸಮುದಾಯದ ಹಿತಕ್ಕೆ, ಸಾರ್ವಜನಿಕ ಹಿತ ಕಾಪಾಡುವುದಕ್ಕೆ ಬಳಕೆಯಾಗಬೇಕು. ಅದರೆ, ಇತ್ತೀಚಿನ ಕಾಲಘಟ್ಟದಲ್ಲಿ ಪಿಐಎಲ್ ಎಂದರೆ ಪೈಸಾ ಇಂಟರೆಸ್ಟ್ ಲಿಟಿಗೇಶನ್ ಆಗಿ ಬಳಕೆಯಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ ವಿ ನಾಗರತ್ನ ಕಳವಳ ವ್ಯಕ್ತಪಡಿಸಿದ್ದಾರೆ.
(1 / 7)
ಪಿಐಎಲ್ ಅಥವಾ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಎಂಬುದು ಅನ್ಯಾಯಗಳನ್ನು ಎದುರಿಸುವುದಕ್ಕೆ ಇರುವ ಪ್ರಬಲ ಕಾನೂನು ಅಸ್ತ್ರ. ಆದರೆ, ಕೆಲವರು ಅದನ್ನು ದುರ್ಬಳಕೆ ಮಾಡುತ್ತಿರುವ ಕಾರಣ ಈಗ ಪಿಐಎಲ್ ಎಂದ ಕೂಡಲೇ ಅನುಮಾನದಿಂದ ನೋಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ ವಿ ನಾಗರತ್ನ ವಿಷಾದ ವ್ಯಕ್ತಪಡಿಸಿದ್ದಾರೆ.
(2 / 7)
ಆಡು ಭಾಷೆಯಲ್ಲಿ ಹೇಳುವುದಾದರೆ ಪಿಐಎಲ್ ಎಂಬುದು ಈಗ ಪೈಸಾ ಇಂಟರೆಸ್ಟ್ ಲಿಟಿಗೇಶನ್, ಪಬ್ಲಿಸಿಟಿ ಇಂಟರೆಸ್ಟ್ ಲಿಟಿಗೇಶನ್, ಪ್ರೈವೇಟ್ ಇಂಟರೆಸ್ಟ್ ಲಿಟಿಗೇಶನ್…. ಎಂದೆಲ್ಲ ಹೇಳಬಹುದು ಎಂದು ಬಹಳ ವಿಷಾದದೊಂದಿಗೆ ನ್ಯಾಯಮೂರ್ತಿ ಬಿ ವಿ ನಾಗರತ್ನ ವಿವರಿಸಿದರು.
(ANI Photo/Ishant)(3 / 7)
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ ವಿ ನಾಗರತ್ನ ಅವರು ಪ್ರೊಫೆಸರ್ ಉಪೇಂದ್ರ ಭಕ್ಷಿ ಅವರ ‘ಲಾ, ಜಸ್ಟೀಸ್, ಸೊಸೈಟಿ’ ಎಂಬ ಪುಸ್ತಕ ಬಿಡುಗಡೆ ಮಾಡಿದರು. ನವದೆಹಲಿಯ ಇಂಡಿಯನ್ ಲಾ ಇನ್‌ಸ್ಟಿಟ್ಯೂಟ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪೇಂದ್ರ ಭಕ್ಷಿ ಹಾಗೂ ವಿಕೆ ಅಹುಜಾ ಅವರೂ ಜತೆಗಿದ್ದರು. ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್ ಈ ಪುಸ್ತಕವನ್ನು ಪ್ರಕಟಿಸಿದೆ.
(ANI Photo/Ishant)(4 / 7)
ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳ ಕಾರಣ ನಿಯಮ, ಕಾನೂನು ತಿದ್ದುಪಡಿ ಕೂಡ ಆಗಿದ್ದ ಉದಾಹರಣೆಗಳಿವೆ. ಆದರೆ, ಇತ್ತೀಚೆಗೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ಕೆಲವರು ದುರ್ಬಳಕೆ ಮಾಡುತ್ತಿರುವುದು ಕಳವಳಕಾರಿ. ಇದರಿಂದಾಗಿ ಪಿಐಎಲ್‌ಗಳನ್ನು ಅನುಮಾನದಿಂದಲೇ ನೋಡುವ ಪ್ರವೃತ್ತಿ ಬೆಳೆಯತೊಡಗಿದೆ ಎಂದು ನ್ಯಾಯಮೂರ್ತಿ ಬಿವಿ ನಾಗರತ್ನ ಹೇಳಿದ್ದಾರೆ.
(HT_PRINT)(5 / 7)
ಮೂಲಭೂತ ಹಕ್ಕುಗಳನ್ನು ಕಾಯುವಂತಹ ಕಾನೂನು ಅಸ್ತ್ರವಾಗಿ ಪಿಐಎಲ್, ಹೇಗೆ ಬಳಕೆಯಾಗಬೇಕು, ಬಳಕೆಯಾಗುತ್ತಿದೆ ಎಂಬುದನ್ನು ಪ್ರೊಫೆಸರ್ ಭಕ್ಷಿ ಅವರು ವಿವರಿಸಿದ್ದಾರೆ. ಬಹುಶಃ ಪಿಐಎಲ್‌ಗಳ ದುರುಪಯೋಗದ ಬಗ್ಗೆ ಚಿಂತನೆ ನಡೆಸಲು, ಅದನ್ನು ಬಹಿರಂಗಪಡಿಸಿ ಜಾಗೃತಿ ಮೂಡಿಸುವುದಕ್ಕೆ ಅವರಿಗೆ ಈಗ ಸಮಯ ಸಿಕ್ಕಿದೆ ಎಂದು ಭಾವಿಸುತ್ತೇನೆ ಎಂದು ನ್ಯಾಯಮೂರ್ತಿ ಬಿವಿ ನಾಗರತ್ನ ವಿವರಿಸಿದರು.
(ANI Photo/Ishant)(6 / 7)
ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಅಥವಾ ಸಾಮಾಜಿಕ ಕ್ರಿಯಾ ಮೊಕದ್ದಮೆಗಳನ್ನು ಗುರುತಿಸುವಂತಹ ಪ್ರಕ್ರಿಯೆ ನಡೆಯಬೇಕು. ಪ್ರೊಫೆಸರ್ ಭಕ್ಷಿ ಅವರು ಪಿಐಎಲ್ ಅನ್ನು ಸೋಷಿಯಲ್ ಆಕ್ಷನ್ ಲಿಟಿಗೇಶನ್ (ಸಾಮಾಜಿಕ ಕ್ರಿಯಾ ಮೊಕದ್ದಮೆ) ಎಂದು ವ್ಯಾಖ್ಯಾನಿಸಿದ್ದಾರೆ. ಅದುವೇ ಸರಿಯಾದ ವ್ಯಾಖ್ಯಾನ ಎಂದು ನ್ಯಾಯಮೂರ್ತಿ ಬಿವಿ ನಾಗರತ್ನ ಅಭಿಪ್ರಾಯಪಟ್ಟರು.
(HT_PRINT)ಇತರ ಗ್ಯಾಲರಿಗಳು









