PKL 11: ಇವರೇ ನೋಡಿ ಪಿಕೆಎಲ್ ಸೀಸನ್-10ರ ಟಾಪ್ 5 ರೈಡರ್ಸ್; ಬೆಂಗಳೂರು ಬುಲ್ಸ್ ಆಟಗಾರರು ಒಬ್ಬರೂ ಇಲ್ಲ!
- Pro Kabaddi League 2024: ಪ್ರೊ ಕಬಡ್ಡಿ ಲೀಗ್ 11ನೇ ಸೀಸನ್ ಅಕ್ಟೋಬರ್ 18ರಿಂದ ಆರಂಭವಾಗಲಿದೆ. ಅದಕ್ಕೂ ಮುನ್ನ 10ನೇ ಆವೃತ್ತಿಯ ಪಿಕೆಎಲ್ನಲ್ಲಿ ಟಾಪ್-10 ರೈಡರ್ಸ್ ಯಾರೆಂಬುದನ್ನು ನೋಡೋಣ.
- Pro Kabaddi League 2024: ಪ್ರೊ ಕಬಡ್ಡಿ ಲೀಗ್ 11ನೇ ಸೀಸನ್ ಅಕ್ಟೋಬರ್ 18ರಿಂದ ಆರಂಭವಾಗಲಿದೆ. ಅದಕ್ಕೂ ಮುನ್ನ 10ನೇ ಆವೃತ್ತಿಯ ಪಿಕೆಎಲ್ನಲ್ಲಿ ಟಾಪ್-10 ರೈಡರ್ಸ್ ಯಾರೆಂಬುದನ್ನು ನೋಡೋಣ.
(1 / 6)
ಪ್ರೊ ಕಬಡ್ಡಿ ಲೀಗ್ ಸೀಸನ್ 10ರಲ್ಲಿ ದಬಾಂಗ್ ಡೆಲ್ಲಿ ತಂಡದ ಆಶು ಮಲಿಕ್, ರೇಡ್ ಪಾಯಿಂಟ್ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದರು. ಅವರು 276 ರೇಡ್ ಪಾಯಿಂಟ್ಸ್ ಪಡೆದು ಅತ್ಯಂತ ಯಶಸ್ವಿ ರೈಡರ್ ಆಗಿದ್ದರು. ಇದರೊಂದಿಗೆ ಸೀಸನ್ 10ರ ಅತ್ಯುತ್ತಮ ರೈಡರ್ ಪ್ರಶಸ್ತಿಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಅವರ ಅದ್ಭುತ ಆಟದ ನೆರವಿನಿಂದ ದಬಾಂಗ್ ಡೆಲ್ಲಿ ಪ್ಲೇಆಫ್‌ಗೆ ಅರ್ಹತೆ ಗಳಿಸಿತ್ತು.
(2 / 6)
ಸೀಸನ್ 9ರಂತೆ ಅರ್ಜುನ್ ದೇಶ್ವಾಲ್ 10ನೇ ಆವೃತ್ತಿಯಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಜೈಪುರ ಪಿಂಕ್ ಪ್ಯಾಂಥರ್ಸ್ ತಂಡದಲ್ಲಿದ್ದ ಅರ್ಜುನ್ ಆಶು ಮಲಿಕ್ರಂತೆ 276 ರೇಡ್ ಪಾಯಿಂಟ್ಸ್ ಪಡೆದರು. ಆ ಮೂಲಕ ಅತ್ಯಧಿಕ ರೇಡ್ ಅಂಕ ಪಡೆದ ಜಂಟಿ ಆಟಗಾರನಾದರು. ಇವರ ಅಮೋಘ ಆಟದ ನೆರವಿನಿಂದ ಜೈಪುರ ಸೆಮಿಫೈನಲ್ ಪ್ರವೇಶಿಸಿತ್ತು.
(3 / 6)
ತೆಲುಗು ಟೈಟಾನ್ಸ್ ತಂಡದ ಪರ ಕಣಕ್ಕಿಳಿದಿದ್ದ ಪವನ್ ಸೆಹ್ರಾವತ್ ಅತ್ಯುತ್ತಮ ಪ್ರದರ್ಶನ ನೀಡಿದರು. ಆದರೆ ಇವರ ಆಟದ ಹೊರತಾಗಿಯೂ ಟೈಟಾನ್ಸ್ ಗೆಲುವು ಸಾಧಿಸಲು ವಿಫಲವಾಯಿತು. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆಯಿತು. ಹೈ-ಫ್ಲೈಯರ್ 202 ರೇಡ್ ಪಾಯಿಂಟ್‌ಗಳೊಂದಿಗೆ ಸೀಸನ್ 10ರ ಮೂರನೇ ಅತಿ ಹೆಚ್ಚು ರೇಡ್ ಪಾಯಿಂಟ್‌ಗಳನ್ನು ಗಳಿಸಿದವರಾಗಿ ಉಳಿದರು. ಅಲ್ಲದೆ, 200 ರೇಡ್ ಪಾಯಿಂಟ್ ಗಳಿಸಿದ 3ನೇ ಆಟಗಾರನೂ ಹೌದು.
(4 / 6)
ಪಿಕೆಎಲ್ ಇತಿಹಾಸದಲ್ಲಿ ಅತ್ಯಂತ ಸ್ಥಿರ ಪ್ರದರ್ಶನಕಾರರಲ್ಲಿ ಒಬ್ಬರು ಮಣಿಂದರ್ ಸಿಂಗ್. ಬೆಂಗಾಲ್ ವಾರಿಯರ್ಸ್ ತಂಡದೊಂದಿಗೆ ಕಣಕ್ಕಿಳಿದಿದ್ದ ಅವರು, ಅತ್ಯುತ್ತಮ ಅಭಿಯಾನ ಹೊಂದಿದ್ದರು. ಒಟ್ಟಾರೆಯಾಗಿ 1428 ರೇಡ್ ಪಾಯಿಂಟ್‌ಗಳೊಂದಿಗೆ ಪ್ರೊ ಕಬಡ್ಡಿ ಇತಿಹಾಸದಲ್ಲಿ 2ನೇ ಅತಿ ಹೆಚ್ಚು ರೇಡ್ ಅಂಕಗಳನ್ನು ಗಳಿಸಿದ ಮನೀಂದರ್ ಸಿಂಗ್, ಸೀಸನ್ 10ರಲ್ಲಿ 197 ರೇಡ್ ಪಾಯಿಂಟ್‌ಗಳನ್ನು ಗಳಿಸಿದರು. ಆದರೆ ತಂಡವು 7ನೇ ಸ್ಥಾನ ಪಡೆದು ಲೀಗ್ನಲ್ಲೇ ಹೊರಬಿತ್ತು.
(5 / 6)
ಸೀಸನ್ 9ರಲ್ಲಿ 243 ರೇಡ್ ಪಾಯಿಂಟ್‌ಗಳನ್ನು ಗಳಿಸಿದ್ದ ತಮಿಳ್ ತಲೈವಾಸ್ ತಂಡವನ್ನು ಪ್ರತಿನಿಧಿಸಿದ್ದ ನರೇಂದರ್, ಸೀಸನ್-10ರಲ್ಲಿ ಮತ್ತೊಮ್ಮೆ ತನ್ನ ಸಾಮರ್ಥ್ಯ ಸಾಬೀತುಪಡಿಸಿದರು. ಸೀಸನ್-10ರಲ್ಲಿ 186 ರೇಡ್ ಪಾಯಿಂಟ್‌ಗಳನ್ನು ಗಳಿಸಿದ್ದರು. ಆದರೆ ನರೇಂದರ್ ಅತ್ಯುತ್ತಮ ಪ್ರದರ್ಶನ ನೀಡಿದ್ದರ ಹೊರತಾಗಿಯೂ ತಮಿಳ್ ತಲೈವಾಸ್ ತಂಡವು 9ನೇ ಸ್ಥಾನಕ್ಕೆ ತೃಪ್ತಿತಾಗಿ ಲೀಗ್ನಲ್ಲೇ ಹೊರಬಿತ್ತು.
ಇತರ ಗ್ಯಾಲರಿಗಳು