Photos: ಐಟಿಎಫ್ ಕಲಬುರಗಿ ಓಪನ್ ಪುರುಷರ ಟೆನಿಸ್ ಕ್ರೀಡಾಕೂಟಕ್ಕೆ ಚಾಲನೆ
- ITF Open 2023: ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ 25000 ಯುಎಸ್ ಡಾಲರ್ ಮೊತ್ತದ ಅಲ್ಟ್ರಾಟೆಕ್ ಪ್ರಾಯೋಜಕತ್ವದ ಐಟಿಎಫ್ ಕಲಬುರಗಿ ಓಪನ್ 2023 ಪುರುಷರ ಟೆನಿಸ್ ಮುಖ್ಯ ಪಂದ್ಯಗಳಿಗೆ ಮಂಗಳವಾರ ಚಾಲನೆ ನೀಡಲಾಯಿತು.
- ITF Open 2023: ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ 25000 ಯುಎಸ್ ಡಾಲರ್ ಮೊತ್ತದ ಅಲ್ಟ್ರಾಟೆಕ್ ಪ್ರಾಯೋಜಕತ್ವದ ಐಟಿಎಫ್ ಕಲಬುರಗಿ ಓಪನ್ 2023 ಪುರುಷರ ಟೆನಿಸ್ ಮುಖ್ಯ ಪಂದ್ಯಗಳಿಗೆ ಮಂಗಳವಾರ ಚಾಲನೆ ನೀಡಲಾಯಿತು.
(1 / 7)
ಚಂಪಾ ಕ್ರೀಡಾಂಗಣದ ಟೆನಿಸ್ ಕೋರ್ಟ್ ಒಂದರಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಬಲೂನ್‌ಗಳನ್ನು ಹಾರಿಬಿಡುವ ಮೂಲಕ ಟೂರ್ನಿಗೆ ಚಾಲನೆ ನೀಡಿದರು.
(2 / 7)
ಶಾಸಕರು, ಅಧಿಕಾರಿಗಳು ಹಾಗೂ ಗಣ್ಯರು ಮುಖ್ಯ ಪಂದ್ಯಾವಳಿಗೆ ಆಯ್ಕೆಯಾದ ಕ್ರೀಡಾಪಟುಗಳು, ಅಂಪೈರ್ ಹಾಗೂ ಇತರ ಸಿಬ್ಬಂದಿಗೆ ಹಸ್ತಲಾಘವ ಮಾಡಿ ಪಂದ್ಯಕ್ಕೆ ಶುಭ ಕೋರಿದರು.
(3 / 7)
ಭಾರತದ ಆದಿಲ್ ಶಾ ಮತ್ತು ಆದಿಲ್ ಕಲ್ಯಾಣಪುರ ನಡುವಿನ ಮೊದಲನೇ ಮುಖ್ಯ ಪಂದ್ಯಕ್ಕೆ ಡಿಸಿ ಬಿ ಫೌಜಿಯಾ ತರನ್ನುಮ್ ಅವರು ಟಾಸ್ ಹಾರಿಸಿದರು. ಆದಿಲ್ ಕಲ್ಯಾಣಪುರ ಅವರು ಟಾಸ್ ಗೆದ್ದು ಸರ್ವ್ ಮಾಡುವುದರೊಂದಿಗೆ ಅಂತಾರಾಷ್ಟ್ರೀಯ ಐಟಿಎಫ್ ಪಂದ್ಯಾವಳಿ ಅಧಿಕೃತವಾಗಿ ಅರಂಭವಾಯಿತು.
(4 / 7)
ಸರಳ ಸಮಾರಂಭದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ ಮಾತನಾಡಿ, ದೇಶಗಳ ನಡುವೆ ಸೌಹಾರ್ದ ವಾತಾವರಣ ನಿರ್ಮಾಣಕ್ಕೆ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳು ಸಹಕಾರಿಯಾಗಲಿವೆ. ಗೆಲುವು-ಸೋಲು ಕ್ರೀಡೆಯಲ್ಲಿ ಸಹಜ ಎಂದ ಅವರು ಅಚ್ಚುಕಟ್ಟಾಗಿ ಕ್ರೀಡಾಕೂಟ ಆಯೋಜಿಸಿದ ಜಿಲ್ಲಾಡಳಿತದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
(5 / 7)
ಶಾಸಕ ಶಶೀಲ್ ಜಿ ನಮೋಶಿ ಮಾತನಾಡಿ, ಸ್ಥಳೀಯ ಕ್ರೀಡಾಪಟುಗಳ ಉತ್ತೇಜನಕ್ಕೆ ಕೆಕೆಆರ್‌ಡಿಬಿ ಮಂಡಳಿ ಅನುದಾನ ನೀಡಿ ಕೋಚ್ ನೇಮಿಸುವ ಮೂಲಕ ಪ್ರದೇಶದಲ್ಲಿ ಟೆನಿಸ್ ಬೆಳವಣಿಗೆ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.
(6 / 7)
32 ಜನ ಕ್ರೀಡಾಟಪಟುಗಳು ಕಲಬುರಗಿ ಓಪನ್ ಕಿರೀಟಕ್ಕಾಗಿ ಜಿದ್ದಾಜಿದ್ದಿನ ಆಟಕ್ಕಿಳಿದಿದ್ದಾರೆ. 8 ಆಟಗಾರರು ಕ್ವಾಲಿಫೈಯರ್ ಪಂದ್ಯವಾಡಿ ಪ್ರಮುಖ ಘಟಕ್ಕೆ ತಲುಪಿದರೆ, 20 ಜನ ಅಟಗಾರರು ಐಟಿಎಫ್ ಶ್ರೇಯಾಂಕ ಮತ್ತು 4 ಜನ ವೈಲ್ಡ್ ಕಾರ್ಡ್ ಪಡೆದು ಮುಖ್ಯ ಪಂದ್ಯಗಳಿಗೆ ನೇರಪ್ರವೇಶ ಪಡೆದಿದ್ದಾರೆ.
ಇತರ ಗ್ಯಾಲರಿಗಳು