Sharana Basaveshwara Rathotsav2025: ಕಲಬುರಗಿಯಲ್ಲಿ ಶ್ರೀ ಶರಣಬಸವೇಶ್ವರರ ರಥೋತ್ಸವ ವೈಭವ, ಲಕ್ಷಾಂತರ ಭಕ್ತರ ಸಡಗರ
- Sharana Basaveshwara Rathotsav2025: ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಕಲಬುರಗಿಯ ಮಹಾದಾಸೋಹಿ ಶರಣಬಸವೇಶ್ವರರ 203ನೇ ಮಹಾರಥೋತ್ಸವವು ಸಡಗರ, ಸಂಭ್ರಮದಿಂದ ನೆರವೇರಿತು. ಆ ಕ್ಷಣಗಳು ಹೀಗಿದ್ದವು.
- Sharana Basaveshwara Rathotsav2025: ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಕಲಬುರಗಿಯ ಮಹಾದಾಸೋಹಿ ಶರಣಬಸವೇಶ್ವರರ 203ನೇ ಮಹಾರಥೋತ್ಸವವು ಸಡಗರ, ಸಂಭ್ರಮದಿಂದ ನೆರವೇರಿತು. ಆ ಕ್ಷಣಗಳು ಹೀಗಿದ್ದವು.
(1 / 8)
ಎರಡು ವಾರಗಳ ಕಾಲ ನಡೆಯುವ ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದ ದೊಡ್ಡ ಜಾತ್ರೆ ಎಂದು ಪ್ರಸಿದ್ದಿಯಾಗಿರುವ ಕಲಬುರಗಿ ಶರಣಬಸವೇಶ್ವರರ 203ನೇ ಮಹಾರಥೋತ್ಸವ ಬುಧವಾರ ಸಂಜೆ ನೆರವೇರಿತು
(prajavai)(2 / 8)
ಮೂರು ದಿನದ ಹಿಂದೆ ಆರಂಭಗೊಂಡಿರುವ ಕಲಬುರಗಿ ಶರಣಬಸವೇಶ್ವರ ಜಾತ್ರೆಯು 11 ದಿನಗಳ ಕಾಲ ಅಂದರೆ ಯುಗಾದಿ ಹಬ್ಬದ ದಿನದವರೆಗೂ ಜರುಗಲಿದೆ.
(3 / 8)
ರಥೋತ್ಸವ ಅಂಗವಾಗಿ ಕಲಬುರಗಿ ಶರಣ ಬಸವೇಶ್ವರ ದೇಗುಲದಲ್ಲಿ ಗುರು ಮರುಳಾರಾಧ್ಯರು ಹಾಗೂ ಶಿಷ್ಯ ಶರಣ ಬಸವೇಶ್ವರ ಗದ್ದುಗೆಯಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು.
(4 / 8)
ರಥೋತ್ಸವ ಹಿನ್ನೆಲೆಯಲ್ಲಿ ಕಲಬುರಗಿ ಮಹಾನಗರದ ರಸ್ತೆಗಳೆಲ್ಲ ಶರಣಬಸವೇಶ್ವರ ದೇವಾಲಯಕ್ಕೆ ಸೇರುವಂತೆ ಭಕ್ತರು ಬಂದು ಸೇರುತ್ತಿದ್ದುದು ಕಂಡು ಬಂದಿತು.
(6 / 8)
ರಥೋತ್ಸವಕ್ಕೆ ಆಗಮಿಸುವ ಭಕ್ತರಿಗೆ ದೇವಾಲಯ ರಸ್ತೆಗಳುದ್ದಕ್ಕೂ ವ್ಯಾಪಕ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ದೇಗುಲವೂ ಕೂಡ ಬಗೆಬಗೆಯ ದೀಪಾಲಂಕಾರದಿಂದ ಗಮನ ಸೆಳೆಯಿತು.
(7 / 8)
ಕಲಬುರಗಿ ಜಿಲ್ಲೆ ಮಾತ್ರವಲ್ಲದೇ ಕರ್ನಾಟಕ, ಮಹಾರಾಷ್ಟ್ರ ಅಂಧ್ರ, ತೆಲಂಗಾಣದಿಂದ ಲಕ್ಷಾಂತರ ಭಕ್ತರು ರಥೋತ್ಸವ ದಲ್ಲಿ ಭಾಗವಹಿಸಿ ಶ್ರೀ ಶರಣ ಬಸವೇಶ್ವರ ದರ್ಶನ ಆಶೀರ್ವಾದ ಪಡೆದುಕೊಂಡರು.
ಇತರ ಗ್ಯಾಲರಿಗಳು