ಅತಿ ವೇಗದ 32ನೇ ಟೆಸ್ಟ್ ಶತಕ, 7 ಪಂದ್ಯಗಳಲ್ಲಿ 7 ಸೆಂಚುರಿ ಚಚ್ಚಿದ ಕೇನ್ ವಿಲಿಯಮ್ಸನ್; ಹಲವು ದಾಖಲೆ ಬರೆದ ಮಾಜಿ ನಾಯಕ
- Kane Williamson : ಸೌತ್ ಆಫ್ರಿಕಾ ಎರಡನೇ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್ನಲ್ಲೂ ಶತಕ ಸಿಡಿಸಿದ ನ್ಯೂಜಿಲೆಂಡ್ ತಂಡದ ಕೇನ್ ವಿಲಿಯಮ್ಸನ್ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ.
- Kane Williamson : ಸೌತ್ ಆಫ್ರಿಕಾ ಎರಡನೇ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್ನಲ್ಲೂ ಶತಕ ಸಿಡಿಸಿದ ನ್ಯೂಜಿಲೆಂಡ್ ತಂಡದ ಕೇನ್ ವಿಲಿಯಮ್ಸನ್ ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ.
(1 / 8)
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಏಳು ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಎರಡು ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಈ ಟೆಸ್ಟ್ ಸರಣಿ ಸೌತ್ ಆಫ್ರಿಕಾ ಅನಾನುಭವಿ ಆಟಗಾರರಿಗೆ ಮಣೆ ಹಾಕಿತ್ತು.
(2 / 8)
ಕಿವೀಸ್ ಪರ ಎರಡನೇ ಟೆಸ್ಟ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಕೇನ್ ವಿಲಿಯಮ್ಸನ್ 203 ಎಸೆತಗಳಲ್ಲಿ ಶತಕ ಪೂರೈಸಿದರು. ಅವರು ಶಾಂತ ಮತ್ತು ಸಂಯೋಜಿತ ರೀತಿಯಲ್ಲಿ ತಮ್ಮ ಇನ್ನಿಂಗ್ಸ್ ಕಟ್ಟಿದರು. ಅವರ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಮತ್ತು 2 ಸಿಕ್ಸರ್‌ಗಳಿವೆ.
(3 / 8)
ಎರಡನೇ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಕೇನ್ ವಿಲಿಯಮ್ಸನ್, ಹೊಸ ವಿಶ್ವದಾಖಲೆ ಬರೆದಿದ್ದಾರೆ. ಅವರು ಕೊನೆಯ 4 ಇನ್ನಿಂಗ್ಸ್‌ಗಳಲ್ಲಿ 3 ಶತಕ ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ.
(4 / 8)
ಮೊದಲ ಟೆಸ್ಟ್ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಕ್ರಮವಾಗಿ 118 ಮತ್ತು 109 ರನ್ ಗಳಿಸಿದ್ದ ವಿಶ್ವದ ನಂ 1 ಟೆಸ್ಟ್ ಬ್ಯಾಟರ್, ಕಳೆದ 7 ಟೆಸ್ಟ್‌ಗಳಲ್ಲಿ 7 ಶತಕ ಸಿಡಿಸಿದ್ದಾರೆ. ಅಂದರೆ 7 ಟೆಸ್ಟ್ಗಳ 12 ಇನ್ನಿಂಗ್ಸ್‌ಗಳಲ್ಲಿ 7 ಸಲ ನೂರರ ಗೆರೆ ಗಾಟಿದ್ದಾರೆ.
(5 / 8)
ಇದು ಕೇನ್ ವಿಲಿಯಮ್ಸನ್ ಅವರ 32ನೇ ಟೆಸ್ಟ್ ಶತಕವೂ ಆಗಿದೆ. ಈ ಸೆಂಚುರಿ ಮೂಲಕ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ದಾಖಲೆ ಬ್ರೇಕ್ ಮಾಡಿದ್ದಾರೆ. ಸ್ಮಿತ್ ಅವರನ್ನು ಹಿಂದಿಕ್ಕಿ ಟೆಸ್ಟ್‌ನಲ್ಲಿ ವೇಗವಾಗಿ 32 ಶತಕ ಸಿಡಿಸಿದ ಬ್ಯಾಟರ್ ಎಂಬ ದಾಖಲೆಗೆ ಪಾತ್ರರಾದರು.
(6 / 8)
ವಿಲಿಯಮ್ಸನ್ 172 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 32 ಶತಕ ಗಳಿಸಿದರೆ, ಸ್ಟೀವ್ ಸ್ಮಿತ್ 174 ಇನ್ನಿಂಗ್ಸ್‌ಗಳಲ್ಲಿ 32 ಟೆಸ್ಟ್ ಶತಕಗಳನ್ನು ದಾಖಲಿಸಿದ್ದರು. ರಿಕಿ ಪಾಂಟಿಂಗ್ 176 ಇನ್ನಿಂಗ್ಸ್, ಸಚಿನ್ ತೆಂಡೂಲ್ಕರ್ 179 ಇನ್ನಿಂಗ್ಸ್‌ಗಳಲ್ಲಿ 32 ಶತಕ ಸಿಡಿಸಿದ್ದಾರೆ.(AFP)
(7 / 8)
ಎರಡು ಪಂದ್ಯಗಳ ಸರಣಿಯಲ್ಲಿ ಮೂರು ಶತಕ ಸಿಡಿಸಿದ ಕೇನ್ ವಿಲಿಯಮ್ಸನ್ 134.33ರ ಬ್ಯಾಟಿಂಗ್ ಸರಾಸರಿಯಲ್ಲಿ 403 ರನ್ ಕಲೆ ಹಾಕಿದ್ದಾರೆ. ಇದರೊಂದಿಗೆ ಸರಣಿಶ್ರೇಷ್ಠ ಪ್ರಶಸ್ತಿ ಗೆದ್ದುಕೊಂಡರು.(AFP)
ಇತರ ಗ್ಯಾಲರಿಗಳು