ಅವಳಿ ಶತಕದೊಂದಿಗೆ ವಿರಾಟ್, ಜೋ ರೂಟ್ ಹಿಂದಿಕ್ಕಿದ ಕೇನ್ ವಿಲಿಯಮ್ಸನ್; ದಕ್ಷಿಣ ಆಫ್ರಿಕಾ ವಿರುದ್ಧ ಕಿವೀಸ್ ಮುನ್ನಡೆ
- New Zealand vs South Africa 1st Test: ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೊದಲ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಕಿವೀಸ್ ಆಟಗಾರ ಕೇನ್ ವಿಲಿಯಮ್ಸನ್ ಶತಕ ಸಿಡಿಸಿದ್ದಾರೆ. ಆ ಮೂಲಕ ಅತಿ ಹೆಚ್ಚು ಟೆಸ್ಟ್ ಶತಕ ಸಿಡಿಸಿದ ಕ್ರಿಕೆಟಿಗರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಜೋ ರೂಟ್ ಅವರನ್ನು ಹಿಂದಿಕ್ಕಿದ್ದಾರೆ.
- New Zealand vs South Africa 1st Test: ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೊದಲ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಕಿವೀಸ್ ಆಟಗಾರ ಕೇನ್ ವಿಲಿಯಮ್ಸನ್ ಶತಕ ಸಿಡಿಸಿದ್ದಾರೆ. ಆ ಮೂಲಕ ಅತಿ ಹೆಚ್ಚು ಟೆಸ್ಟ್ ಶತಕ ಸಿಡಿಸಿದ ಕ್ರಿಕೆಟಿಗರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಜೋ ರೂಟ್ ಅವರನ್ನು ಹಿಂದಿಕ್ಕಿದ್ದಾರೆ.
(1 / 6)
ಬೇ ಓವಲ್‌ನಲ್ಲಿ ನಡೆಯುತ್ತಿರುವ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಕೇನ್ ವಿಲಿಯಮ್ಸನ್ ಶತಕ ಬಾರಿಸಿದ್ದಾರೆ. ಆ ಮೂಲಕ ನಿವೃತ್ತಿ ಪಡೆಯದ ಕ್ರಿಕೆಟಿಗರ ಪೈಕಿ, ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರನಾಗಿ ವಿರಾಟ್ ಕೊಹ್ಲಿ ಮತ್ತು ಜೋ ರೂಟ್ ಅವರನ್ನು ಹಿಂದಿಕ್ಕಿದ್ದಾರೆ. ಸ್ಟೀವ್ ಸ್ಮಿತ್ ಮಾತ್ರ ಕಿವೀಸ್ ಆಟಗಾರನಿಗಿಂತ ಮುಂದಿದ್ದಾರೆ. ಪ್ರಸ್ತುತ ಕೇನ್ ವಿಲಿಯಮ್ಸನ್ ಈಗ ಎರಡನೇ ಅತಿ ಹೆಚ್ಚು ಟೆಸ್ಟ್ ಶತಕಗಳನ್ನು ಸಿಡಿಸಿದ ಆಟಗಾರನಾಗಿದ್ದಾರೆ. (AP)
(2 / 6)
ವಿಲಿಯಮ್ಸನ್ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 118 ರನ್ ಗಳಿಸಿದರು. ಎರಡನೇ ಇನ್ನಿಂಗ್ಸ್‌ನಲ್ಲಿ 109 ರನ್ ಸಿಡಿಸಿದರು. ಈಗ ಅವರ ಟೆಸ್ಟ್ ಶತಕಗಳ ಸಂಖ್ಯೆ 31ಕ್ಕೇರಿದೆ. 97 ಟೆಸ್ಟ್ ಪಂದ್ಯಗಳ 170 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿರುವ ಕಿವೀಸ್ ಸ್ಟಾರ್, ಅಮೋಘ ದಾಖಲೆ ಮಾಡಿದ್ದಾರೆ. ಹಾಲಿ ಕ್ರಿಕೆಟಿಗರ ಪೈಕಿ ಸ್ಟೀವ್ ಸ್ಮಿತ್ ಮಾತ್ರ ವಿಲಿಯಮ್ಸನ್ ಅವರಿಗಿಂತ ಹೆಚ್ಚು ಟೆಸ್ಟ್ ಶತಕ ಗಳಿಸಿದ್ದಾರೆ. (AP)
(3 / 6)
ಸ್ಟೀವ್ ಸ್ಮಿತ್ 107 ಟೆಸ್ಟ್‌ಗಳ 191 ಇನ್ನಿಂಗ್ಸ್‌ಗಳಲ್ಲಿ 32 ಶತಕ ಗಳಿಸಿದ್ದಾರೆ. ಮುಂದೆ 1 ಶತಕ ಸಿಡಿಸಿದರೆ ವಿಲಿಯಮ್ಸನ್ ಅವರು ಸ್ಮಿತ್ ದಾಖಲೆ ಸರಿಗಟ್ಟಲಿದ್ದಾರೆ. ಈಗಾಗಲೇ ವಿರಾಟ್ ಕೊಹ್ಲಿ ಮತ್ತು ಜೋ ರೂಟ್‌ರನ್ನು ಕೇನ್ ಹಿಂದಿಕ್ಕಿದ್ದಾರೆ. (AFP)
(4 / 6)
ಜೋ ರೂಟ್ 137 ಟೆಸ್ಟ್‌ಗಳ 251 ಇನ್ನಿಂಗ್ಸ್‌ಗಳಲ್ಲಿ 30 ಶತಕಗಳನ್ನು ಗಳಿಸಿದ್ದಾರೆ. ವಿಲಿಯಮ್ಸನ್ ಈಗ ರೂಟ್ ಹಿಂದಿಕ್ಕಿದ್ದಾರೆ. ಪ್ರಸ್ತುತ ಆಡುತ್ತಿರುವ ಕ್ರಿಕೆಟಿಗರ ಪೈಕಿ ಅತಿ ಹೆಚ್ಚು ಟೆಸ್ಟ್ ಶತಕಗಳ ಪಟ್ಟಿಯಲ್ಲಿ ರೂಟ್ ಮೂರನೇ ಸ್ಥಾನದಲ್ಲಿದ್ದಾರೆ. (AFP)
(5 / 6)
ವಿರಾಟ್ ಕೊಹ್ಲಿ 113 ಟೆಸ್ಟ್‌ಗಳ 191 ಇನ್ನಿಂಗ್ಸ್‌ಗಳಲ್ಲಿ 29 ಶತಕ ಗಳಿಸಿದ್ದಾರೆ. ಬೇ ಓವಲ್‌ನಲ್ಲಿ ವಿಲಿಯಮ್ಸನ್ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸುವ ಮೂಲಕ ಕೊಹ್ಲಿಯನ್ನು ಹಿಂದಿಕ್ಕಿದ್ದರು. ಪ್ರಸ್ತುತ ಕ್ರಿಕೆಟಿಗರ ಪೈಕಿ ಕೊಹ್ಲಿ ಅತಿ ಹೆಚ್ಚು ಟೆಸ್ಟ್ ಶತಕಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. (Reuters)
ಇತರ ಗ್ಯಾಲರಿಗಳು