ಸೀರೆಯಲ್ಲಿ ಮನಸೂರೆಗೊಂಡ ನಟಿ ನಿವೇದಿತಾ ಗೌಡ; ನೀನು ಬಂಗಾರದ ಗೊಂಬೆ ಎಂದ ಅಭಿಮಾನಿ
ಕಿರುತೆರೆ ಮತ್ತು ಬೆಳ್ಳಿತೆರೆಯ ಮೂಲಕ ಜನಪ್ರಿಯತೆ ಪಡೆದಿರುವ ಯುವ ನಟಿ ನಿವೇದಿತಾ ಗೌಡರನ್ನು ಈಗ ಅಭಿಮಾನಿಗಳು ಬಂಗಾರದ ಗೊಂಬೆ ಎನ್ನುತ್ತಿದ್ದಾರೆ. ಸಣ್ಣ ಉಡುಗೆಗಳನ್ನು ಬಿಟ್ಟು ಸೀರೆಯಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಿರುವುದು ಇದಕ್ಕೆ ಕಾರಣ. ಹೌದು, ನಟಿ ನಿವೇದಿತಾ ಗೌಡ ಚಂದದ ಸೀರೆ ಉಟ್ಟು ಫೋಟೋಶೂಟ್ ಮಾಡಿಕೊಂಡಿದ್ದಾರೆ.
(1 / 12)
ನಿವೇದಿತಾ ಗೌಡ ತನ್ನ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸೀರೆಯುಟ್ಟು ಫೋಟೋಶೂಟ್ ಮಾಡಿಸಿಕೊಂಡಿದ್ದು, ಈ ಫೋಟೋಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
(2 / 12)
ಅಂದಹಾಗೆ ಇದು ಸೋಷಿಯಲ್ ಮೀಡಿಯಾದಲ್ಲಿ ಬ್ರ್ಯಾಂಡ್ ಪ್ರಚಾರಕ್ಕೆ ಮಾಡಿರುವ ಫೋಟೋಶೂಟ್. ಹೀಗಿದ್ದರೂ, ಜನರು ನೀವು ಸೀರೆಯಲ್ಲಿ ಸಖತ್ ಕಾಣಿಸುವಿರಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
(3 / 12)
ಇವರಿಗೆ ಮೊಸುಮಿಲಿಯಾ ಸ್ಟೈಲಿಂಗ್ ಮಾಡಿದ್ದಾರೆ. ಮಾಯಾ ಡಿಸೈನರ್ ಸ್ಟುಡಿಯೋದಿಂದ ಔಟ್‌ಫಿಟ್ ಪಡೆದಿದ್ದಾರೆ. ಚೇತನ್‌ಗೌಡ ಮೇಕಪ್ ಮಾಡಿದ್ದಾರೆ.
(4 / 12)
ಸಣ್ಣ ಬಟ್ಟೆಗಳಲ್ಲಿ ಫೋಟೋ ಶೂಟ್, ರೀಲ್ಸ್ ಮಾಡುತ್ತಿದ್ದ ನಿವೇದಿತಾ ಗೌಡರಿಗೆ ಆನ್‌ಲೈನ್‌ನಲ್ಲಿ ಸಾಕಷ್ಟು ಕೆಟ್ಟ ಅನುಭವವಾಗಿದೆ. ಇವರ ಫೋಟೋ ವಿಡಿಯೋಗಳಿಗೆ ಜನರು ನಾನಾ ರೀತಿ ಕೆಟ್ಟದ್ದಾಗಿ ಕಾಮೆಂಟ್ ಮಾಡುತ್ತಿದ್ದರು.
(5 / 12)
ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟ ಕಾಮೆಂಟ್‌ಗಳು, ಡಿಜಿಟಲ್ ಕಿರುಕುಳಗಳ ಬಗ್ಗೆ ಮೌನವಾಗಿದ್ದ ನಿವೇದಿತಾ ಗೌಡ ತನ್ನ ಸಿನಿಮಾ ನಟನೆಯನ್ನೂ ಮುಂದುವರೆಸಿದ್ದರು.
(6 / 12)
ಈಗ ಸೀರೆಯಲ್ಲಿ ಫೋಟೋಶೂಟ್ ಮಾಡಿಕೊಂಡಿದ್ದಾರೆ. ಈ ಫೋಟೋಗಳಿಗೆ ಕೆಟ್ಟ ಕಾಮೆಂಟ್‌ಗಳ ಬದಲು "ಸೌಂದರ್ಯವನ್ನು ಹಾಡಿ ಹೊಗಳುವಂತಹ" ಕಾಮೆಂಟ್ ಮಾಡುತ್ತಿದ್ದಾರೆ. ನೀನು ನಿಜವಾಗಿಯೂ ಗೊಂಬೆ ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ.
(7 / 12)
ಮೈಸೂರು ಮೂಲದ ನಿವೇದಿತಾ ಗೌಡ 1998 ಮೇ 12ರಂದು ಜನಿಸಿದರು. ಇವರು ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದರು. ಟಿಕ್ ಟಾಕ್ ವಿಡಿಯೋ ಮೂಲಕ ಬೆಳಕಿಗೆ ಬಂದ ಪ್ರತಿಭೆ ಇವರು.
(8 / 12)
ಟಿಕ್‌ಟಾಕ್ ಭಾರತದಲ್ಲಿ ಕ್ಲೋಸ್ ಆದ ಬಳಿಕ ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ನಲ್ಲಿ ಹೆಚ್ಚು ಆಕ್ಟಿವ್ ಆಗಿದ್ದರು.
(10 / 12)
ಕಿಚ್ಚ ಸುದೀಪ್ ನಿರೂಪಣೆಯ ಬಿಗ್‌ಬಾಸ್ ಕನ್ನಡ ಸೀಸನ್ 5ರಲ್ಲಿ ಇವರು ಸ್ಪರ್ಧಿಸಿದ್ದರು. ಈ ಸಮಯದಲ್ಲಿ ಈಕೆ ಮತ್ತು ಚಂದನ್ ಶೆಟ್ಟಿಯ ಸ್ನೇಹ ಕಿರುತೆರೆ ವೀಕ್ಷಕರ ಮನೆಮಾತಾಗಿತ್ತು.
(11 / 12)
ಬಿಗ್‌ಬಾಸ್ ಬಳಿಕ ರಾಜಾರಾಣಿ, ಗಿಚ್ಚಿ ಗಿಲಿಗಿಲಿ ಮುಂತಾದ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದರು. ಕೆಲವೊಂದು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.
ಇತರ ಗ್ಯಾಲರಿಗಳು