ಅಭಿಮಾನಿಗಳ ಮನದಲ್ಲಿ ಮತ್ತೆ ಸಪ್ತ ಸಾಗರದ ಅಲೆಗಳನ್ನು ಎಬ್ಬಿಸಿದ ಚೈತ್ರಾ ಜೆ ಆಚಾರ್‌; ಕಾಡ್ಗಿಚ್ಚು ಬಳಿಕವೂ ಬೆಳೆಯುವ ಹೂವು ‘ಅವಳು’
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಭಿಮಾನಿಗಳ ಮನದಲ್ಲಿ ಮತ್ತೆ ಸಪ್ತ ಸಾಗರದ ಅಲೆಗಳನ್ನು ಎಬ್ಬಿಸಿದ ಚೈತ್ರಾ ಜೆ ಆಚಾರ್‌; ಕಾಡ್ಗಿಚ್ಚು ಬಳಿಕವೂ ಬೆಳೆಯುವ ಹೂವು ‘ಅವಳು’

ಅಭಿಮಾನಿಗಳ ಮನದಲ್ಲಿ ಮತ್ತೆ ಸಪ್ತ ಸಾಗರದ ಅಲೆಗಳನ್ನು ಎಬ್ಬಿಸಿದ ಚೈತ್ರಾ ಜೆ ಆಚಾರ್‌; ಕಾಡ್ಗಿಚ್ಚು ಬಳಿಕವೂ ಬೆಳೆಯುವ ಹೂವು ‘ಅವಳು’

  • ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಸಿನಿಮಾದಲ್ಲಿ ನಟಿಸಿದ್ದ ಚೈತ್ರಾ ಜೆ ಆಚಾರ್‌ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸುಂದರವಾದ ಫೋಟೋಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳನ್ನು ಪುಳಕಿತಗೊಳಿಸಿದೆ. ಸ್ಯಾಂಡಲ್‌ವುಡ್‌ ಮಾತ್ರವಲ್ಲದೆ ಕಾಲಿವುಡ್‌ನಲ್ಲಿಯೂ ನಟಿಸುವ ಅವಕಾಶ ಪಡೆದಿರುವ ಈ ಪ್ರತಿಭಾನ್ವಿತ ನಟಿಯ ಸುಂದರ ಫೋಟೋಗಳನ್ನು ನೋಡೋಣ ಬನ್ನಿ.

ಸ್ಯಾಂಡಲ್‌ವುಡ್‌ ನಟಿ ಚೈತ್ರಾ ಜೆ ಆಚಾರ್‌ ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಸುಂದರವಾದ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳನ್ನು ಪುಳಕಿತಗೊಳಿಸುತ್ತಾರೆ. ಇವರು ಆರಂಭದಲ್ಲಿ ಬೋಲ್ಡ್‌ ಫೋಟೋಗಳನ್ನು ಹಂಚಿಕೊಳ್ಳುವಾಗ ಸೋಷಿಯಲ್‌ ಮೀಡಿಯಾದಲ್ಲಿ ಕೆಟ್ಟ ಕಾಮೆಂಟ್‌ಗಳ ದಾಳಿಗಳನ್ನು ಎದುರಿಸಿದರು. ಕೆಟ್ಟ ಕಾಮೆಂಟ್‌ಗಳಿಗೆ ದಿಟ್ಟವಾಗಿ ಉತ್ತರಿಸುತ್ತಿದ್ದರು. ಕೆಟ್ಟ ಕಾಮೆಂಟ್‌ಗಳು ಅತಿಯಾದ ಸಂದರ್ಭಗಳಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಆಪ್ತರನ್ನು ಹೊರತುಪಡಿಸಿ ಉಳಿದವರಿಗೆ ಕಾಮೆಂಟ್‌ ಆಫ್‌ ಮಾಡಿದ್ದರು.  ಇದೀಗ ಚೈತ್ರಾ ಜೆ ಆಚಾರ್‌ ಗ್ರಾಮೀಣ ಹಿನ್ನೆಲೆಯಲ್ಲಿ ಒಂದಿಷ್ಟು ಸುಂದರವಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. "ಅವಳು ಕಾಡ್ಗಿಚ್ಚು ಬಳಿಕವು ಬೆಳೆಯುವ ಹೂವು" ಎಂಬ ನುಡಿಮುತ್ತನ್ನು ತನ್ನ ಫೋಟೋಗಳ ಜತೆ ಹಂಚಿಕೊಂಡಿದ್ದಾರೆ.
icon

(1 / 10)

ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದ ಚೈತ್ರಾ ಜೆ ಆಚಾರ್‌ ಈಗ ಎರಡು ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇವುಗಳಲ್ಲಿ ಒಂದು ಸಿನಿಮಾಕ್ಕೆ ರಾಜು ಮುರುಗನ್‌ ಆಕ್ಷನ್‌  ಕಟ್‌ ಹೇಳುತ್ತಿದ್ದಾರೆ.
icon

(2 / 10)

ಶಶಿಕುಮಾರ್‌ ನಾಯಕ ನಟನಾಗಿರುವ ತಮಿಳು ಸಿನಿಮಾದಲ್ಲಿ ಫ್ಯಾಮಿಲಿ ಡ್ರಾಮಾ ಕಥೆ ಇರಲಿದೆ. ಈಗಾಗಲೇ ಈ ಸಿನಿಮಾದ ಶೂಟಿಂಗ್‌ ನಡೆಯುತ್ತಿದೆ. ಈ ಸಿನಿಮಾದ ಕಥೆ ಮತ್ತು ಇತರೆ ಮಾಹಿತಿಗಳು ಸದ್ಯ ಹೊರಬಿದ್ದಿಲ್ಲ.
icon

(3 / 10)

ಕನ್ನಡದಲ್ಲಿ ಉತ್ತರಕಾಂಡ ಎಂಬ ಸಿನಿಮಾದಲ್ಲಿಯೂ ಇವರು ನಟಿಸುತ್ತಿದ್ದಾರೆ. ಈ ಗ್ಯಾಂಗ್‌ಸ್ಟರ್‌ ಡ್ರಾಮಾದಲ್ಲಿ ದಿಗಂತ್‌, ಡಾಲಿ ಧನಂಜಯ ಮತ್ತು ಐಶ್ವರ್ಯಾ ರಂಗರಾಜನ್‌ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
icon

(4 / 10)

ಮಹಿರಾ ಎಂಬ ಸಿನಿಮಾದ ಮೂಲಕ 2019ರಲ್ಲಿ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು.
icon

(5 / 10)

ಮಹಿರಾ ಎಂಬ ಸಿನಿಮಾದ ಮೂಲಕ 2019ರಲ್ಲಿ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು.

ತಲೆದಂಡ ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ್ದ ಚೈತ್ರಾ ಆಚಾರ್‌ ಸ್ಯಾಂಡಲ್‌ವುಡ್‌ನ ಗಮನ ಸೆಳೆದಿದ್ದರು. ಗಿಲ್ಕಿ ಎಂಬ ಸಿನಿಮಾದಲ್ಲೂ ನಟಿಸಿದ್ದರು.
icon

(6 / 10)

ರಾಜ್‌ ಬಿ ಶೆಟ್ಟಿ ಜತೆ ಟೋಬಿ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದ ಇವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ, ಟೋಬಿ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಯಶಸ್ವಿಯಾಗಲಿಲ್ಲ.
icon

(7 / 10)

ಚೈತ್ರಾ ಜೆ ಆಚಾರ್‌ ಗಾಯಕಿಯಾಗಿಯೂ ಜನಪ್ರಿಯರು. ಹಲವು ಹಾಡುಗಳಿಗೆ ಇವರು ಧ್ವನಿಯಾಗಿದ್ದಾರೆ.
icon

(8 / 10)

ಚೈತ್ರಾ ಜೆ ಆಚಾರ್‌ ಗಾಯಕಿಯಾಗಿಯೂ ಜನಪ್ರಿಯರು. ಹಲವು ಹಾಡುಗಳಿಗೆ ಇವರು ಧ್ವನಿಯಾಗಿದ್ದಾರೆ.

ಇವರು ರಿಷಬ್‌ ಶೆಟ್ಟಿ ಮತ್ತು ರಾಜ್‌ ಬಿ ಶೆಟ್ಟಿ ನಟನೆಯ ಗರುಡ ಗಮನ ವೃಷಭ ವಾಹನ ಚಿತ್ರದಲ್ಲಿ "ಸೋಜುಗದ ಸೋಜು ಮಲ್ಲಿಗೆ" ಎಂಬ ಹಾಡನ್ನು ಹಾಡಿದ್ದಾರೆ. ಈ ಹಾಡು ಸಖತ್‌ ಹಿಟ್‌ ಆಗಿತ್ತು.
icon

(9 / 10)

ಕಾಲೇಜಿನಲ್ಲಿದ್ದಾಗಲೇ ಇವರು ಬೆಂಗಳೂರು ಕ್ವೀನ್ಸ್‌ ಎಂಬ ಕನ್ನಡ ವೆಬ್‌ ಸರಣಿಯಲ್ಲಿ ನಟಿಸಿದ್ದರು. ಇದಾದ ಬಳಿಕ ಮಹಿರಾ ಎಂಬ ಥ್ರಿಲ್ಲರ್‌ ಸಿನಿಮಾದಲ್ಲಿ ನಟಿಸಿದರು. ಇದಾದ ಬಳಿಕ ಚೈತ್ರಾ ಜೆ ಆಚಾರ್‌ ಗಿಲ್ಕಿ, ತಲೆದಂಡ, ಆ ದೃಶ್ಯ ಮುಂತಾದ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದರು.
icon

(10 / 10)

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು