ಅವನಿಲ್ಲದೆ ನಾನೇನು ಮಾಡಲಿ? ಮಗನ ಜತೆ ಅಶ್ವಿನಿ ನಕ್ಷತ್ರ ಧಾರಾವಾಹಿ ನಟಿ ಮಯೂರಿ ಕ್ಯಾತರಿ ಸ್ವಗತ
ಕಲರ್ಸ್ ಕನ್ನಡದ ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ ಕಿರುತೆರೆ ವೀಕ್ಷಕರ ಮನ ಗೆದ್ದಿದ್ದ ನಟಿ ಅಶ್ವಿನಿ ಕ್ಯಾತರಿ ಅವರು ಸೋಷಿಯಲ್ ಮೀಡಿಯಾದಲ್ಲಿ ತನ್ನ ಮುದ್ದು ಮಗನ ಜತೆ ತನ್ನ ಸೌಂದರ್ಯದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮಯೂರಿಗೂ ಪತಿ ಅರುಣ್‌ಗೂ ಡಿವೋರ್ಸ್ ಆಗುತ್ತಿದೆ ಎಂಬ ಸುದ್ದಿಯೂ ಹಿಂದೊಮ್ಮೆ ಹಬ್ಬಿತ್ತು. ಈ ಕುರಿತ ವಿವರವೂ ಇಲ್ಲಿದೆ.
(1 / 12)
ನಟಿ, ರೂಪದರ್ಶಿ ಮಯೂರಿ ಕ್ಯಾತರಿ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದಾರೆ. ಮಯೂರಿ ಕ್ಯಾತರಿ ಮತ್ತು ಅರುಣ್ ಕುಮಾರ್‌ಗೆ ಒಬ್ಬ ಗಂಡು ಮಗನಿದ್ದಾನೆ. ತನ್ನ ಮಗನ ಜತೆ ನಟಿ ಇದೀಗ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಮಯೂರಿ ಕುಟುಂಬದಲ್ಲಿ ಏನೋ ಸರಿ ಇಲ್ಲ. ಇವರು ಪತಿಯಿಂದ ದೂರಾವಾಗಿದ್ದಾರೆ ಎಂಬ ಸುದ್ದಿಯೂ ಹಿಂದೊಮ್ಮೆ ಹಬ್ಬಿತ್ತು. ಸೋಷಿಯಲ್ ಮೀಡಿಯಾದಲ್ಲಿ ಮಗನ ಜತೆಗೆ ಮಾತ್ರ ಫೋಟೋ ಹಂಚಿಕೊಳ್ಳುತ್ತಿದ್ದಾರೆ.
(2 / 12)
ಮಯೂರಿಯವರು ತನ್ನ ಮಗನ ಜತೆಗೆ ಫೋಟೋಶೂಟ್ ಮಾಡಿಸಿಕೊಂಡಿದ್ದು, ಆ ಫೋಟೋಗಳ ಗೊಂಚಲನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋಗಳಿಗೆ "ಅವನಿಲ್ಲದೆ ನಾನೇನು ಮಾಡಲಿ?" "ವಾಟ್ ವುಡ್ ಡು ಐ ಡು ವಿದೌಟ್ ಹಿಮ್" ಎಂದು ಕ್ಯಾಪ್ಷನ್ ನೀಡಿದ್ದಾರೆ.
(3 / 12)
ಈ ಮೂಲಕ ಮಗನೇ ನನ್ನ ಪ್ರಪಂಚ, ಮಗನೇ ನನ್ನ ಎಲ್ಲವೂ ಎಂದು ತಿಳಿಸಿದ್ದಾರೆ. ಈ ಸುಂದರ ಫೋಟೋಗಳಿಗೆ ಅಭಿಮಾನಿಗಳು ವಾಹ್ ಎಂದಿದ್ದಾರೆ. ಮಗ ಮುದ್ದಾಗಿದ್ದಾನೆ ಎಂದು ಕಾಮೆಂಟ್ ಮಾಡಿದ್ದಾರೆ.
(4 / 12)
ಈ ಫೋಟೋಶೂಟ್‌ಗೆ ಸೀರೆಯನ್ನು ವಿಭಿನ್ನ ಫ್ಲೈರೋಬ್‌ಬೆಂಗಳೂರು-ಮಲ್ಲೇಶ್ವರಂ ನೀಡಿದ್ದಾರೆ. ಮೇಕ್ ಅಪ್ ಆರ್ಟಿಸ್ಟ್ ಸುಷ್ಮಾ ಮಂಜುನಾಥ್ ಮೇಕಪ್‌ನಿಂದ ಇವರ ಅಂದ ಇನ್ನಷ್ಟು ಹೆಚ್ವಾಆಗಿದೆ. ಪೃಥ್ವಿ ರಾಜ್ ಈ ಫೋಟೋಗಳನ್ನು ಕ್ಲಿಕ್ಕಿಸಿದ್ದಾರೆ.
(5 / 12)
ಅಶ್ವಿನಿ ನಕ್ಷತ್ರ ಸೀರಿಯಲ್ ಮೂಲಕ ಖ್ಯಾತಿ ಪಡೆದ ಮಯೂರಿ ಬಳಿಕ ಕೃಷ್ಣಾ ಲೀಲಾ ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ನೀಡಿದ್ದರು.
(7 / 12)
ಕರ್ನಾಟಕದ ಹುಬ್ಬಳ್ಳಿ ಮೂಲದ ಇವರು ಆರಂಭದಲ್ಲಿ ನಿರೂಪಕಿಯಾಗಿದ್ದರು. ಅಶ್ವಿನಿ ನಕ್ಷತ್ರ ಸೀರಿಯಲ್‌ನಲ್ಲಿ ಅಶ್ವಿನಿ ಪತ್ನಿಯಾಗಿ ಮಿಂಚಿದ್ದರು. ಇವರು ನಟಿಸಿದ ಕೃಷ್ಣ ಲೀಲಾ ಸಿನಿಮಾವು ಶತದಿನಗಳನ್ನು ಯಶಸ್ವಿಯಾಗಿ ಪೂರೈಸಿತು.
(8 / 12)
ಇಷ್ಟಕಾಮ್ಯ ಸಿನಿಮಾದ ಬಳಿಕ ಇವರು ಪುನೀತ್ ರಾಜ್‌ಕುಮಾರ್ ಅವರ ನಟರಾಜ ಸರ್ವೀಸ್ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ಶರಣ್ ನಾಯಕ ನಟನಾಗಿ ನಟಿಸಿದ್ದಾರೆ.
(9 / 12)
ಕರಿಯಾ 2. ರಾಂಬೋ 2, ಜಾನಿ ಜಾನಿ ಯೆಸ್ ಪಪ್ಪಾ, 8 ಎಂಎಂ ಬುಲೆಟ್, ರಸ್ತುಂ, ನನ್ನ ಪ್ರಕಾರ ಮುಂತಾದ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.
(10 / 12)
ಆಟಕ್ಕುಂಟು ಲೆಕ್ಕಕ್ಕಿಲ್ಲ, ಮೌನಮ್, ಪೊಗರು, ವೀಲ್‌ಚೇರ್ ರೋಮಿಯೊ ಮುಂತಾದ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಕಿಸ್ ಸೀರಿಯಲ್‌ನಲ್ಲಿ ಡಬ್ಬಿಂಗ್ ಕಲಾವಿದೆಯಾಗಿಯೂ ಕಾರ್ಯನಿರ್ವಹಿಸಿದ್ದಾರೆ
(11 / 12)
ಮಯೂರಿ ಮತ್ತು ಅರುಣ್ ಕುಮಾರ್ ಅವರದ್ದು ಹತ್ತು ವರ್ಷಗಳ ಪರಿಚಯ. ಸ್ನೇಹ ಪ್ರೀತಿಗೆ ತಿರುಗಿ ಇವರು 2020ರ ಜೂನ್ 12ರಂದು ವಿವಾಹವಾಗಿದ್ದರು. ಬೆಂಗಳೂರಿನ ದೇವಾಲಯವೊಂದರಲ್ಲಿ ಇವರಿಬ್ಬರು ಮದುವೆಯಾಗಿದ್ದರು. ಇತ್ತೀಚೆಗೆ ಮಯೂರಿ ಇನ್‌ಸ್ಟಾಗ್ರಾಂನಲ್ಲಿ ಪತಿ ಅರುಣ್ ಕುಮಾರ್ ಜತೆಗಿದ್ದ ಫೋಟೋಗಳು ಡಿಲೀಟ್ ಆಗಿದ್ದವು. ಇವರಿಬ್ಬರಿಗೆ ಡಿವೋರ್ಸ್ ಆಗುತ್ತಿದೆ ಎಂದು ಸುದ್ದಿಯಾಗಿತ್ತು.
ಇತರ ಗ್ಯಾಲರಿಗಳು