ಮೈಸೂರು ಸ್ಯಾಂಡಲ್ ಸೋಪ್ ಪ್ರಚಾರಕ್ಕೆ ಮುತ್ತಿನಂಥ ಮಾತು ಹೇಳಿದ್ರು ಮೋಹಕತಾರೆ ರಮ್ಯಾ, ಉಚಿತವಾಗಿ ಪ್ರಚಾರ!
ಮೈಸೂರು ಸ್ಯಾಂಡಲ್ ಸೋಪ್ ಪ್ರಚಾರಕ್ಕೆ ನಟಿ ತಮನ್ನಾ ನೇಮಕ ಮತ್ತು ಆಕೆಗೆ ನೀಡುವ 6.20 ಕೋಟಿ ಸಂಭಾವನೆ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಇದೇ ಸಮಯದಲ್ಲಿ ಮೋಹಕತಾರೆ ರಮ್ಯಾ ಅವರು ಈ ಸೋಪ್‌ನ ಪ್ರಚಾರದ ಕುರಿತು ಮುತ್ತಿನಂಥ ಮಾತುಗಳನ್ನಾಡಿದ್ದು ಅಭಿಮಾನಿಗಳನ್ನು ಮೋಡಿ ಮಾಡಿದೆ.
(1 / 12)
ಮೈಸೂರು ಸ್ಯಾಂಡಲ್ ಸೋಪ್ ಪ್ರಚಾರಕ್ಕೆ ನಟಿ ತಮನ್ನಾ ನೇಮಕ ಮತ್ತು ಆಕೆಗೆ ನೀಡುವ 6.20 ಕೋಟಿ ಸಂಭಾವನೆ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಕನ್ನಡಿಗರೇ ಈ ಸೋಪ್ ಅನ್ನು ಉಚಿತವಾಗಿ ಪ್ರಚಾರ ಮಾಡ್ತಾರೆ ಎಂದು ಅವರು ಹೇಳಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಅವರು ಹಂಚಿಕೊಂಡು ಸುದೀರ್ಘ ನೋಟ್‌ನಲ್ಲಿ ಈ ಮುಂದಿನಂತೆ ತನ್ನ ಅಭಿಪ್ರಾಯ ಹಂಚಿಕೊಂಡಿದ್ದಾರೆ.
(Photos Curtesy: Instagram and indiglamour)(2 / 12)
"ಈಗ ಕಥೆಯೊಂದನ್ನು ಹೇಳಲು ಅಕರ್ಷಕ ಮತ್ತು ವಿಶಿಷ್ಠ ದಾರಿಗಳಿವೆ. ನಿಮ್ಮ ಉತ್ಪನ್ನವನ್ನು ಪ್ರಚಾರ ಮಾಡಲು ಹಳೆಯ ಕಾಲದ ರಾಯಭಾರಿ ಎಂಬ ಸಂಪ್ರದಾಯ ಈಗ ಬೇಕಿಲ್ಲ. ಇದು ತೆರಿಗೆದಾರರ ಹಣ ವ್ಯರ್ಥ ಮಾಡುತ್ತದೆ ಅಷ್ಟೇ" ಎಂದು ರಮ್ಯಾ ಹೇಳಿದ್ದಾರೆ.
(3 / 12)
"ಸೆಲೆಬ್ರಿಟಿಯೊಬ್ಬರು ರಾಯಭಾರಿಯಾಗಿದ್ದಾರೆ ಎಂಬ ಒಂದೇ ಒಂದು ಕಾರಣಕ್ಕೆ ಈಗ ಸಾರ್ವಜನಿಕರು ಏನನ್ನಾದರೂ ಖರೀದಿಸುತ್ತಾರೆ ಎಂದಿಲ್ಲ"
(5 / 12)
"ನಿಮ್ಮ ಉತ್ಪನ್ನ ಜನರಿಗೆ ಅತ್ಯುತ್ತಮವೆನಿಸಿದರೆ ಅವರು ನಿಮ್ಮ ಉತ್ಪನ್ನದ ರಾಯಲ್ ಗ್ರಾಹಕರಾಗುತ್ತಾರೆ. ನಾವು ಹೊಂದಿರುವುದು ಕೇವಲ ಒಂದು ಒಳ್ಳೆಯ ಉತ್ಪನ್ನ ಮಾತ್ರವಲ್ಲ, ಅದು ನಮ್ಮ ಪರಂಪರೆಯೂ ಹೌದು"
(6 / 12)
"ಮೈಸೂರು ಸ್ಯಾಂಡಲ್ ಸೋಪ್ ಅನ್ನು ಬಳಸುವ ಪ್ರತಿಯೊಬ್ಬ ವ್ಯಕ್ತಿಯೂ ಅದರ ಹೆಮ್ಮೆಯ ರಾಯಭಾರಿ. ಪ್ರತಿಯೊಬ್ಬ ಕನ್ನಡಿಗರೂ ಮೈಸೂರು ಸ್ಯಾಂಡಲ್ ಸೋಪ್‌ನ ರಾಯಭಾರಿಗಳು"
(7 / 12)
"ಪ್ರತಿಯೊಬ್ಬ ಕನ್ನಡಿಗರೂ ಇದನ್ನು ಜಗತ್ತಿಗೆ ಕೊಂಡೊಯ್ಯಬಲ್ಲರು. ಉಚಿತವಾಗಿ ಮೈಸೂರು ಸ್ಯಾಂಡಲ್ ಸೋಪ್ ಬಗ್ಗೆ ಪ್ರಚಾರ ಮಾಡಬಲ್ಲರು. ಇದು ಕನ್ನಡಿಗರಿಗೆ ಹೆಮ್ಮೆಯ ವಿಷಯ"
(8 / 12)
"ಗ್ರಾಹಕರ ಜತೆ ಹೊಸತನದ ಸೃಜನಶೀಲವಾದ ಸಂಬಂಧ ಈಗ ಅಗತ್ಯವಿದೆ" ಎಂದು ಹೇಳಿರುವ ರಮ್ಯಾ ಇದಕ್ಕೊಂದು ಸುಂದರವಾದ ಉದಾಹರಣೆಯನ್ನೂ ನೀಡಿದ್ದಾರೆ.
(9 / 12)
"ನಿಮಗೆ ಗೊತ್ತೆ, ಆಪಲ್ ಕಂಪನಿಯು ಯಶಸ್ವಿ ಬ್ರ್ಯಾಂಡ್. ಆದರೆ, ಅದು ಹಣ ಕೊಟ್ಟು ಯಾವುದೇ ಬ್ರ್ಯಾಂಡ್ ಅಂಬಾಸಿಡರ್ ಅನ್ನು ಇಟ್ಟುಕೊಂಡಿಲ್ಲ." "ಡವ್ ಸೋಪ್‌ನ ಕ್ಯಾಂಪೈನ್ ಕೂಡ ನನಗೆ ತುಂಬಾ ಇಷ್ಟ" ಎಂದು ಮೋಹಕತಾರೆ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಬರೆದಿದ್ದಾರೆ. ಕನ್ನಡಿಗರೇ ಈ ಮೈಸೂರು ಸ್ಯಾಂಡಲ್ ಸೋಪ್ ಅನ್ನು ಉಚಿತವಾಗಿ ಪ್ರಚಾರ ಮಾಡ್ತಾರೆ ಎಂದು ಅವರು ಹೇಳಿದ್ದಾರೆ.
(10 / 12)
"ನಿಮಗೆ ಗೊತ್ತೆ, ಆಪಲ್ ಕಂಪನಿಯು ಯಶಸ್ವಿ ಬ್ರ್ಯಾಂಡ್. ಆದರೆ, ಅದು ಹಣ ಕೊಟ್ಟು ಯಾವುದೇ ಬ್ರ್ಯಾಂಡ್ ಅಂಬಾಸಿಡರ್ ಅನ್ನು ಇಟ್ಟುಕೊಂಡಿಲ್ಲ." "ಡವ್ ಸೋಪ್‌ನ ಕ್ಯಾಂಪೈನ್ ಕೂಡ ನನಗೆ ತುಂಬಾ ಇಷ್ಟ" ಎಂದು ಮೋಹಕತಾರೆ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಬರೆದಿದ್ದಾರೆ. ಕನ್ನಡಿಗರೇ ಈ ಮೈಸೂರು ಸ್ಯಾಂಡಲ್ ಸೋಪ್ ಅನ್ನು ಉಚಿತವಾಗಿ ಪ್ರಚಾರ ಮಾಡ್ತಾರೆ ಎಂದು ಅವರು ಹೇಳಿದ್ದಾರೆ.
(11 / 12)
ಮೈಸೂರು ಸ್ಯಾಂಡಲ್ ಸೋಪ್‌ಗೆ ನೂತನ ರಾಯಭಾರಿ ನೇಮಕವಾಗಿದ್ದು, ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ಬ್ರ್ಯಾಂಡ್ ಅಂಬಾಸಡರ್ ಆಗಿ ನೇಮಕ ಮಾಡಲಾಗಿದೆ. ಈ ವಿಚಾರದ ಕುರಿತು ಕರ್ನಾಟಕದಲ್ಲಿ ಸಾಕಷ್ಟು ಜನರು ಚರ್ಚೆ ನಡೆಸುತ್ತಿದ್ದಾರೆ.
ಇತರ ಗ್ಯಾಲರಿಗಳು