Kannada actresses: ಪರಭಾಷೆ ನಟರನ್ನು ಮದುವೆಯಾಗಿ ಸೆಟಲ್ಡ್ ಆಗಿರುವ ಕನ್ನಡತಿಯರು..ಯಾರೆಲ್ಲಾ ಇದ್ದಾರೆ ನೋಡಿ
- ಸಿನಿಮಾ, ಕಿರುತೆರೆಯಲ್ಲಿ ಹೆಸರು ಮಾಡಿರುವ ಎಷ್ಟೋ ನಟ - ನಟಿಯರು ಭವಿಷ್ಯದಲ್ಲಿ ತಾವು ನಟಿಯಾಗುತ್ತೇವೆ ಎಂದು ಕಿಂಚಿತ್ತೂ ಕನಸು ಕಂಡಿರುವುದಿಲ್ಲ. ಆಕಸ್ಮಿಕವಾಗಿ ಅವರು ಬಣ್ಣದ ಬದುಕಿಗೆ ಕಾಲಿಡುತ್ತಾರೆ. ಹಾಗೇ ತಮ್ಮ ವೃತ್ತಿಯಲ್ಲಿ ಇರುವವರನ್ನೇ ಪ್ರೀತಿಸಿ ಮದುವೆಯಾಗುತ್ತಾರೆ.
- ಸಿನಿಮಾ, ಕಿರುತೆರೆಯಲ್ಲಿ ಹೆಸರು ಮಾಡಿರುವ ಎಷ್ಟೋ ನಟ - ನಟಿಯರು ಭವಿಷ್ಯದಲ್ಲಿ ತಾವು ನಟಿಯಾಗುತ್ತೇವೆ ಎಂದು ಕಿಂಚಿತ್ತೂ ಕನಸು ಕಂಡಿರುವುದಿಲ್ಲ. ಆಕಸ್ಮಿಕವಾಗಿ ಅವರು ಬಣ್ಣದ ಬದುಕಿಗೆ ಕಾಲಿಡುತ್ತಾರೆ. ಹಾಗೇ ತಮ್ಮ ವೃತ್ತಿಯಲ್ಲಿ ಇರುವವರನ್ನೇ ಪ್ರೀತಿಸಿ ಮದುವೆಯಾಗುತ್ತಾರೆ.
(1 / 9)
ಕನ್ನಡದ ಅನೇಕ ನಟಿಯರು ಪರಭಾಷೆ ಕಿರುತೆರೆ ಹಾಗೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಹಾಗೇ ಪರಭಾಷೆ ನಟರನ್ನು ಪ್ರೀತಿಸಿ ಮದುವೆಯಾಗಿ ಹೊರ ರಾಜ್ಯದಲ್ಲಿ ನೆಲೆಸಿದ್ದಾರೆ. ಬಹುತೇಕರಿಗೆ ಇಲ್ಲಿರುವ ಕೆಲವು ನಟಿಯರ ಪರಿಚಯ ಇರುವುದಿಲ್ಲ.
(2 / 9)
ಮಂಜುಳ ಇವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ಪೋಷಕರೊಂದಿಗೆ ಕಾರ್ಯಕ್ರಮವೊಂದಕ್ಕೆ ಹೋದಾಗ ತಂದೆಯ ಸ್ನೇಹಿತರೊಬ್ಬರ ಒತ್ತಾಯದ ಮೇರೆಗೆ ಇಷ್ಟವಿಲ್ಲದಿದ್ದರೂ ಧಾರಾವಾಹಿ ಆಡಿಷನ್‌ನಲ್ಲಿ ಪಾಲ್ಗೊಂಡರು. ಸಿಎ ಆಗಬೇಕು ಎಂದುಕೊಂಡಿದ್ದ ಆಕೆ ನಟಿ ಆದರು. ಕನ್ನಡದಲ್ಲಿ 'ಪ್ರೇಮ ಪಿಶಾಚಿಗಳು' ಧಾರಾವಾಹಿ ಮೂಲಕ ಬಣ್ಣದ ಬದುಕು ಆರಂಭಿಸಿದರು. ಕನ್ನಡದಲ್ಲಿ ನಟಿಸಿದ್ದು ಬೆರಳೆಣಿಕೆ ಧಾರಾವಾಹಿಗಳು. ನಂತರ ತೆಲುಗು ಕಿರುತೆರೆಯಲ್ಲಿ ಸಕ್ರಿಯರಾದ ಮಂಜುಳ ತಮ್ಮ ಸಹನಟ ನಿರುಪಮ್ ಪರಿಟಾಲ ಅವರನ್ನು ಪ್ರೀತಿಸಿ ಮದುವೆಯಾದರು. ಈ ದಂಪತಿಗೆ ಒಬ್ಬ ಮಗ ಇದ್ದಾನೆ.(PC: Manjula Paritala)
(3 / 9)
ರಚಿತಾ ಮಹಾಲಕ್ಷ್ಮಿರಚಿತಾ ಕನ್ನಡದಲ್ಲಿ 'ಮೇಘ ಮಂದಾರ' ಧಾರಾವಾಹಿ ಮೂಲಕ ಆಕ್ಟಿಂಗ್ ಕರಿಯರ್ ಆರಂಭಿಸಿದರು. ನಂತರ ಗೀತಾಂಜಲಿ, ಸೂರ್ಯಕಾಂತಿ, ಸುಪ್ರಭಾತ, ಸವಿಗನಸು ಸೇರಿ ಅನೇಕ ಧಾರಾವಾಹಿಗಳಲ್ಲಿ ನಟಿಸಿದರು. ನಂತರ ತೆಲುಗು ಹಾಗೂ ತಮಿಳು ಕಿರುತೆರೆಯಲ್ಲಿ ಕೂಡಾ ಅವಕಾಶ ಗಳಿಸಿದರು. ತಮಿಳಿನ 'ಪಿರಿವೊಮ್ ಸಂತಿಪೊಮ್' ಧಾರಾವಾಹಿಯಲ್ಲಿ ತಮ್ಮೊಂದಿಗೆ ನಟಿಸಿದ್ದ ದಿನೇಶ್ ಗೋಪಾಲಸ್ವಾಮಿ ಅವರನ್ನು ಪ್ರೀತಿಸಿ ಮದುವೆಯಾಗಿ ಈಗ ಚೆನ್ನೈನಲ್ಲಿ ಸೆಟಲ್ ಆಗಿದ್ದಾರೆ.(Pc: Rachita mahalakshmi Facebook)
(4 / 9)
ತೇಜಸ್ವಿನಿ ಗೌಡತುಮಕೂರಿನ ಶಿರಾಗೆ ಸೇರಿದ ತೇಜಸ್ವಿನಿ ಗೌಡ 'ಬಿಳಿ ಹೆಂಡ್ತಿ' ಧಾರಾವಾಹಿ ಮೂಲಕ ನಟನೆಗೆ ಬಂದರು. ಇಂಜಿನಿಯರಿಂಗ್ ಪದವೀಧರೆಯಾದ ತೇಜಸ್ವಿನಿ ಥಿಯೇಟರ್ ಆರ್ಟಿಸ್ಟ್ ಕೂಡಾ. ಮೊದಲ ಧಾರಾವಾಹಿಯಲ್ಲಿ ನೆಗೆಟಿವ್ ರೋಲ್‌ನಲ್ಲಿ ನಟಿಸಿದ್ದ ತೇಜಸ್ವಿನಿಗೆ ನಂತರ ತೆಲುಗಿನ 'ಕೋಯಿಲಮ್ಮ' ಧಾರಾವಾಹಿಯಲ್ಲಿ ನಟಿಸುವ ಅವಕಾಶ ದೊರೆಯಿತು. 'ಜಾನಕಿ ಕಲಗನಲೇದು' ಧಾರಾವಾಹಿಯ ಅಮರ್ ದೀಪ್ ಚೌಧರಿ ಅವರನ್ನು ತೇಜಸ್ವಿನಿ ಪ್ರೀತಿಸುತ್ತಿದ್ದು ಇತ್ತೀಚೆಗೆ ಈ ಜೋಡಿಯ ನಿಶ್ಚಿತಾರ್ಥ ನೆರವೇರಿದೆ. ಡಿಸೆಂಬರ್‌ನಲ್ಲಿ ಈ ಜೋಡಿ ಬೆಂಗಳೂರಿನಲ್ಲಿ ಮದುವೆಯಾಗಲಿದ್ದಾರೆ.(PC: Tejaswini Gowda Instagram)
(5 / 9)
ಅನುಷಾ ಹೆಗ್ಡೆರಾಧಾ ರಮಣ ಖ್ಯಾತಿಯ ಅನುಷಾ ಹೆಗ್ಡೆ ಕೂಡಾ 'ನಿನ್ನೇ ಪೆಳ್ಳಾಡತಾ', 'ಸೂರ್ಯಕಾಂತಂ' ತೆಲುಗು ಧಾರಾವಾಹಿಗಳಲ್ಲಿ ಸಕ್ರಿಯರಾಗಿದ್ದಾರೆ. ಪುತ್ತೂರಿಗೆ ಸೇರಿದ ಅನುಷಾ, 2020 ರಲ್ಲಿ ತಮ್ಮ ಸಹನಟ ಪ್ರತಾಪ್ ಸಿಂಗ್ ಷಾ ಅವರನ್ನು ಪ್ರೀತಿಸಿ ಮದುವೆಯಾದರು. ಪ್ರತಾಪ್ ಉತ್ತರ ಭಾರತದವರಾದರೂ ತೆಲುಗು ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ.(PC: Aɴᴜsʜᴀ ᴜᴍᴇsʜ Hᴇɢᴅᴇ Instagram)
(6 / 9)
ಕೀರ್ತಿ ಧನುಷ್ಕೀರ್ತಿ, ಕನ್ನಡದಲ್ಲಿ ನಟಿಸಿದ್ದು ಒಂದೇ ಧಾರಾವಾಹಿ. ನಂತರ ಆಕೆ ತೆಲುಗು ಧಾರಾವಾಹಿಗಳಲ್ಲಿ ಸಾಲು ಸಾಲು ಅವಕಾಶ ಪಡೆದರು. ಕಲಿಯುಗ ರಾಮಾಯಣಂ, ಅಭಿಷೇಕಂ, ಸಮುದ್ರಂ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿದರು. ತೆಲುಗಿನ ಖ್ಯಾತ ನಟ ಜೈ ಧನುಷ್ ಅವರನ್ನು ಕೀರ್ತಿ ಪ್ರೀತಿಸಿ ಮದುವೆಯಾದರು. ಈ ಜೋಡಿಗೆ ಋಗ್ವೇದ್ ಎಂಬ ಗಂಡು ಮಗು ಇದೆ. ಮಂಜುಳ ಪರಿಟಾಲ ಹಾಗೂ ಕೀರ್ತಿ ಧನುಷ್ ಇಬ್ಬರೂ ಅಕ್ಕತಂಗಿಯರು.(Pc: Keerthijaidhanush Instagram)
(7 / 9)
ಐಶ್ವರ್ಯ ರೈ ಇವರು ಯಾರಿಗೆ ತಾನೇ ಗೊತ್ತಿಲ್ಲ? ಮಂಗಳೂರಿಗೆ ಸೇರಿದ ಈ ಚೆಲುವೆ 1994 ರಲ್ಲ್ ವಿಶ್ವಸುಂದರಿ ಪಟ್ಟ ಪಡೆದರು. ಮಂಗಳೂರಿನಲ್ಲಿ ಹುಟ್ಟಿದರೂ ಆಕೆ ಬೆಳೆದ್ದು ಮುಂಬೈನಲ್ಲಿ. 'ಇರುವರ್' ತಮಿಳು ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ಈ ಚೆಲುವೆ 2007 ರಲ್ಲಿ ಅಮಿತಾಬ್ ಬಚ್ಚನ್ ಪುತ್ರಿ ಅಭಿಷೇಕ್ ಬಚ್ಚನ್ ಅವರನ್ನು ಪ್ರೀತಿಸಿ ಮದುವೆಯಾದರು. ಈ ಜೋಡಿಗೆ ಆರಾಧ್ಯ ಎಂಬ ಮಗಳಿದ್ದಾಳೆ.(PC: Aishwarya rai fans page)
(8 / 9)
ಶಿಲ್ಪಾ ಶೆಟ್ಟಿ ಶಿಲ್ಪಾ ಹುಟ್ಟಿದ್ದು ಮಂಗಳೂರಿನಲ್ಲಿ. ಇವರ ಮೊದಲ ಹೆಸರು ಅಶ್ವಿನಿ ಶೆಟ್ಟಿ. 'ಬಾಜಿಗರ್' ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ ಶಿಲ್ಪಾ ಕನ್ನಡದಲ್ಲಿ ಪ್ರೀತ್ಸೋದ್ ತಪ್ಪಾ, ಒಂದಾಗೋಣ ಬಾ, ಆಟೋ ಶಂಕರ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 2009 ರಲ್ಲಿ ಉದ್ಯಮಿ ರಾಜ್ ಕುಂದ್ರಾ ಕೈ ಹಿಡಿದ ಶಿಲ್ಪಾಗೆ ಇಬ್ಬರು ಮಕ್ಕಳಿದ್ದಾರೆ.(PC: Shilpa Shetty Facebook)
(9 / 9)
ದೀಪಿಕಾ ಪಡುಕೋಣೆದೀಪಿಕಾ ಕೊಂಕಣಿ ಕುಟುಂಬಕ್ಕೆ ಸೇರಿದವರು. ಇವರು ಹುಟ್ಟಿದ್ದು ಡೆನ್ಮಾರ್ಕಿನಲ್ಲಿ. ಆದರೆ ವಿದ್ಯಾಭ್ಯಾಸ, ಓದು ಎಲ್ಲವೂ ಬೆಂಗಳೂರಿನಲ್ಲಾಯ್ತು. ದೀಪಿಕಾ ಪಡುಕೋಣೆ ಉಪೇಂದ್ರ ಜೊತೆ 'ಐಶ್ವರ್ಯ' ಚಿತ್ರದ ಮೂಲಕ ಸಿನಿ ಕರಿಯರ್ ಆರಂಭಿಸಿದರು. 'ಬಚ್‌ನಾ ಏ ಹಸಿನೋ' ಸಿನಿಮಾದಲ್ಲಿ ನಟಿಸುವಾಗ ದೀಪಿಕಾ ಹಾಗೂ ರಣವೀರ್‌ಗೆ ಲವ್ ಆಗಿದೆ. ಈ ಜೋಡಿ 2018 ರಲ್ಲಿ ಮದುವೆಯಾದರು.(PC: Deepika padukone Facebook)
ಇತರ ಗ್ಯಾಲರಿಗಳು