ಕನ್ನಡ ಸುದ್ದಿ  /  Photo Gallery  /  Kannada Actresses Who Neglect From Kannada Small Screen And Film Industry

Kannada Actresses: ಕನ್ನಡ ಕಿರುತೆರೆ, ಚಿತ್ರರಂಗದಿಂದ ತಿರಸ್ಕರಿಸಲ್ಪಟ್ಟು ಪರಭಾಷೆಯಲ್ಲಿ ಗುರುತಿಸಿಕೊಂಡಿರುವ ಈ ಕನ್ನಡತಿಯರ ಪರಿಚಯ ಇದ್ಯಾ..?

  • ಕನ್ನಡದ ಬಹಳಷ್ಟು ನಟಿಯರು ಪರಭಾಷೆಗಳಲ್ಲಿ ಕೂಡಾ ಗುರುತಿಸಿಕೊಂಡಿದ್ದಾರೆ. ಕೆಲವು ನಟಿಯರು ಪರಭಾಷೆಯಲ್ಲೂ ತಮ್ಮ ಪ್ರತಿಭೆ ತೋರಬೇಕೆಂಬ ಆಸೆಯಿಂದ ಆ ಭಾಷೆಗಳ ಸಿನಿಮಾಗಳಲ್ಲಿ ನಟಿಸಿದರೆ, ಇನ್ನೂ ಕೆಲವು ನಟಿಯರು ಕನ್ನಡದಲ್ಲಿ ಅವಕಾಶ ಇಲ್ಲದೆ ಪರಭಾಷೆ ಸಿನಿಮಾಗಳ ಮೊರೆ ಹೋಗುತ್ತಾರೆ್

ಇಲ್ಲಿರುವ ಅನೇಕ ನಟಿಯರು ನಿಮಗೆ ಪರಿಚಯ ಇಲ್ಲದೆ ಇರಬಹುದು. ಕೆಲವರು ಒಂದೋ ಎರಡೋ ಕನ್ನಡ ಧಾರಾವಾಹಿ , ಸಿನಿಮಾಗಳಲ್ಲಿ ನಟಿಸಿ, ಪರಭಾಷೆಗೆ ಕಾಲಿಟ್ಟಿದ್ದರೆ, ಇನ್ನೂ ಕೆಲವರು ನೇರವಾಗಿ ಪರಭಾಷೆಗೆ ಹೋಗಿದ್ದಾರೆ. ಆದರೆ ಅವರಿಗೆ ಕನ್ನಡದಲ್ಲಿ ನಟಿಸಬೇಕೆಂಬ ಆಸೆ ಇದ್ದರೂ ಇಲ್ಲಿ ಅವಕಾಶ ದೊರೆಯುತ್ತಿಲ್ಲ ಎಂಬ ಬೇಸರ ಇದೆ.
icon

(1 / 13)

ಇಲ್ಲಿರುವ ಅನೇಕ ನಟಿಯರು ನಿಮಗೆ ಪರಿಚಯ ಇಲ್ಲದೆ ಇರಬಹುದು. ಕೆಲವರು ಒಂದೋ ಎರಡೋ ಕನ್ನಡ ಧಾರಾವಾಹಿ , ಸಿನಿಮಾಗಳಲ್ಲಿ ನಟಿಸಿ, ಪರಭಾಷೆಗೆ ಕಾಲಿಟ್ಟಿದ್ದರೆ, ಇನ್ನೂ ಕೆಲವರು ನೇರವಾಗಿ ಪರಭಾಷೆಗೆ ಹೋಗಿದ್ದಾರೆ. ಆದರೆ ಅವರಿಗೆ ಕನ್ನಡದಲ್ಲಿ ನಟಿಸಬೇಕೆಂಬ ಆಸೆ ಇದ್ದರೂ ಇಲ್ಲಿ ಅವಕಾಶ ದೊರೆಯುತ್ತಿಲ್ಲ ಎಂಬ ಬೇಸರ ಇದೆ.

ಧನ್ಯಾ ಬಾಲಕೃಷ್ಣ: ಇವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ಶಾಲಾ ಕಾಲೇಜಿನಲ್ಲೇ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂದಿದ್ದ ಧನ್ಯಾ ಮಾಡೆಲ್‌ ಆಗಿ ಕೂಡಾ ಗುರುತಿಸಿಕೊಂಡಿದ್ದಾರೆ. ಸದ್ಯಕ್ಕೆ ತಮಿಳು ಹಾಗೂ ತೆಲುಗಿನಲ್ಲಿ ಬ್ಯುಸಿಯಾಗಿರುವ ಧನ್ಯಾ ಸಾವರ್ಜನಿಕರಿಗೆ ಸುವರ್ಣಾವಕಾಶ ಎಂಬ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಇವರಿಗೆ ಹೆಚ್ಚು ಅವಕಾಶಗಳು ದೊರೆಯುತ್ತಿಲ್ಲದಿರುವುದು ವಿಪರ್ಯಾಸ. 
icon

(2 / 13)

ಧನ್ಯಾ ಬಾಲಕೃಷ್ಣ: ಇವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ಶಾಲಾ ಕಾಲೇಜಿನಲ್ಲೇ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮುಂದಿದ್ದ ಧನ್ಯಾ ಮಾಡೆಲ್‌ ಆಗಿ ಕೂಡಾ ಗುರುತಿಸಿಕೊಂಡಿದ್ದಾರೆ. ಸದ್ಯಕ್ಕೆ ತಮಿಳು ಹಾಗೂ ತೆಲುಗಿನಲ್ಲಿ ಬ್ಯುಸಿಯಾಗಿರುವ ಧನ್ಯಾ ಸಾವರ್ಜನಿಕರಿಗೆ ಸುವರ್ಣಾವಕಾಶ ಎಂಬ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಇವರಿಗೆ ಹೆಚ್ಚು ಅವಕಾಶಗಳು ದೊರೆಯುತ್ತಿಲ್ಲದಿರುವುದು ವಿಪರ್ಯಾಸ. (PC: Dhanya Balakrishna Facebook)

ಹರಿತೇಜ : ಇವರು ಕೂಡಾ ಬೆಂಗಳೂರಿನ ಹುಡುಗಿ, ಕನ್ನಡ ಚೆನ್ನಾಗಿ ತಿಳಿದಿರುವ ಹರಿತೇಜ ತೆಲುಗು ಸಿನಿಮಾ, ರಿಯಾಲಿಟಿ ಶೋಗಳಲ್ಲಿ ಸಕ್ರಿಯರಾಗಿದ್ದಾರೆ. ಸರಿಲೇರು ನೀಕೆವ್ವರು ಚಿತ್ರದಲ್ಲಿ ಹರಿತೇಜ ರಶ್ಮಿಕಾ ಸಹೋದರಿಯಾಗಿ ನಟಿಸಿದ್ದಾರೆ. ಆದರೆ ಇದುವರೆಗೂ ಹರಿತೇಜಗೆ ಕನ್ನಡದಲ್ಲಿ ಅವಕಾಶಗಳು ಬಂದಿಲ್ಲ.
icon

(3 / 13)

ಹರಿತೇಜ : ಇವರು ಕೂಡಾ ಬೆಂಗಳೂರಿನ ಹುಡುಗಿ, ಕನ್ನಡ ಚೆನ್ನಾಗಿ ತಿಳಿದಿರುವ ಹರಿತೇಜ ತೆಲುಗು ಸಿನಿಮಾ, ರಿಯಾಲಿಟಿ ಶೋಗಳಲ್ಲಿ ಸಕ್ರಿಯರಾಗಿದ್ದಾರೆ. ಸರಿಲೇರು ನೀಕೆವ್ವರು ಚಿತ್ರದಲ್ಲಿ ಹರಿತೇಜ ರಶ್ಮಿಕಾ ಸಹೋದರಿಯಾಗಿ ನಟಿಸಿದ್ದಾರೆ. ಆದರೆ ಇದುವರೆಗೂ ಹರಿತೇಜಗೆ ಕನ್ನಡದಲ್ಲಿ ಅವಕಾಶಗಳು ಬಂದಿಲ್ಲ.(PC: Hari Teja Facebook)

ನವ್ಯಾ ಸ್ವಾಮಿ: ಈಕೆಯನ್ನು ಕನ್ನಡಿಗರು ಮರೆತಿದ್ದಾರೋ ಏನೋ..? ನಿರೂಪಕಿಯಾಗಿ ಬಣ್ಣದ ಬದುಕಿಗೆ ಬಂದ ನವ್ಯಾ ಸ್ವಾಮಿ ಮೈಸೂರು ಮೂಲದವರು. ಕೆಲವೊಂದು ಧಾರಾವಾಹಿಗಳಲ್ಲಿ ನಟಿಸಿದ ನಂತರ ಕನ್ನಡದಲ್ಲಿ ಅವಕಾಶ ಕಡಿಮೆ ಆದ ಕಾರಣ ನವ್ಯಾ ತೆಲುಗಿನತ್ತೆ ಮುಖ ಮಾಡಿದರು. ಈಗ ನವ್ಯಾ ತೆಲುಗಿನಲ್ಲಿ ಫೇಮಸ್‌ ನಟಿ. 
icon

(4 / 13)

ನವ್ಯಾ ಸ್ವಾಮಿ: ಈಕೆಯನ್ನು ಕನ್ನಡಿಗರು ಮರೆತಿದ್ದಾರೋ ಏನೋ..? ನಿರೂಪಕಿಯಾಗಿ ಬಣ್ಣದ ಬದುಕಿಗೆ ಬಂದ ನವ್ಯಾ ಸ್ವಾಮಿ ಮೈಸೂರು ಮೂಲದವರು. ಕೆಲವೊಂದು ಧಾರಾವಾಹಿಗಳಲ್ಲಿ ನಟಿಸಿದ ನಂತರ ಕನ್ನಡದಲ್ಲಿ ಅವಕಾಶ ಕಡಿಮೆ ಆದ ಕಾರಣ ನವ್ಯಾ ತೆಲುಗಿನತ್ತೆ ಮುಖ ಮಾಡಿದರು. ಈಗ ನವ್ಯಾ ತೆಲುಗಿನಲ್ಲಿ ಫೇಮಸ್‌ ನಟಿ. (Navya Swamy social media: )

ಸಂಚಿತಾ ಶೆಟ್ಟಿ: 2006 ರಲ್ಲಿ ಬಿಡುಗಡೆಯಾದ ಯೋಗರಾಜ ಭಟ್ ನಿರ್ದೇಶನದ ‘ಮುಂಗಾರು ಮಳೆ’ ಚಿತ್ರದ ಮೂಲಕ  ಚಿತ್ರರಂಗಕ್ಕೆ ಬಂದರು. ನಂತರ ಮಿಲನ, ಉಡ, ಭಯ ಡಾಟ್​ ಕಾಂ ಚಿತ್ರಗಳಲ್ಲಿ ನಟಿಸಿದರು. ಇದಾದ ನಂತರ ಆಕೆಗೆ ಕನ್ನಡದಲ್ಲಿ ಹೇಳಿಕೊಳ್ಳುವಂತ ಅವಕಾಶಗಳು ದೊರೆಯಲಿಲ್ಲ. ಈಗ ಅವರು ತಮಿಳು ಚಿತ್ರರಂಗದಲ್ಲಿ ಬ್ಯುಸಿ ನಟಿ
icon

(5 / 13)

ಸಂಚಿತಾ ಶೆಟ್ಟಿ: 2006 ರಲ್ಲಿ ಬಿಡುಗಡೆಯಾದ ಯೋಗರಾಜ ಭಟ್ ನಿರ್ದೇಶನದ ‘ಮುಂಗಾರು ಮಳೆ’ ಚಿತ್ರದ ಮೂಲಕ  ಚಿತ್ರರಂಗಕ್ಕೆ ಬಂದರು. ನಂತರ ಮಿಲನ, ಉಡ, ಭಯ ಡಾಟ್​ ಕಾಂ ಚಿತ್ರಗಳಲ್ಲಿ ನಟಿಸಿದರು. ಇದಾದ ನಂತರ ಆಕೆಗೆ ಕನ್ನಡದಲ್ಲಿ ಹೇಳಿಕೊಳ್ಳುವಂತ ಅವಕಾಶಗಳು ದೊರೆಯಲಿಲ್ಲ. ಈಗ ಅವರು ತಮಿಳು ಚಿತ್ರರಂಗದಲ್ಲಿ ಬ್ಯುಸಿ ನಟಿ(PC: Sanchita Shetty social media)

ತೇಜಸ್ವಿನಿ ಗೌಡ: ಬಿಳಿ ಹೆಂಡ್ತಿ ಧಾರಾವಾಹಿ ನಂತರ ತೇಜಸ್ವಿನಿಗೆ ತೆಲುಗಿನಲ್ಲಿ ಅವಕಾಶ ದೊರೆಯಿತು. ಆದರೆ ಅಲ್ಲಿಗೆ ಹೋಗುವ ಮುನ್ನ, ಹೋದ ನಂತರ ಕೂಡಾ ಕನ್ನಡದಲ್ಲಿ ಅವರಿಗೆ ಹೇಳಿಕೊಳ್ಳುವಂತೆ ಅವಕಾಶಗಳು ದೊರೆಯಲಿಲ್ಲ
icon

(6 / 13)

ತೇಜಸ್ವಿನಿ ಗೌಡ: ಬಿಳಿ ಹೆಂಡ್ತಿ ಧಾರಾವಾಹಿ ನಂತರ ತೇಜಸ್ವಿನಿಗೆ ತೆಲುಗಿನಲ್ಲಿ ಅವಕಾಶ ದೊರೆಯಿತು. ಆದರೆ ಅಲ್ಲಿಗೆ ಹೋಗುವ ಮುನ್ನ, ಹೋದ ನಂತರ ಕೂಡಾ ಕನ್ನಡದಲ್ಲಿ ಅವರಿಗೆ ಹೇಳಿಕೊಳ್ಳುವಂತೆ ಅವಕಾಶಗಳು ದೊರೆಯಲಿಲ್ಲ(PC: Tejaswini Gowda Facebook)

ನಿಖಿತಾ ನಾರಾಯಣ್:‌ ಮಡಮಕ್ಕಿ, ಮುಗಳುನಗೆ ಬಿಟ್ಟರೆ ಈ ಚೆಲುವೆ ನಟಿಸಿರುವ ಉಳಿದ ಸಿನಿಮಾಗಳು ತೆಲುಗು ಭಾಷೆಯವು. ಈ ಪ್ರತಿಭಾನ್ವಿತ ಕನ್ನಡತಿಗೆ ಕನ್ನಡದಲ್ಲೇ ಹೆಚ್ಚು ಅವಕಾಶಗಳಿಲ್ಲ. 
icon

(7 / 13)

ನಿಖಿತಾ ನಾರಾಯಣ್:‌ ಮಡಮಕ್ಕಿ, ಮುಗಳುನಗೆ ಬಿಟ್ಟರೆ ಈ ಚೆಲುವೆ ನಟಿಸಿರುವ ಉಳಿದ ಸಿನಿಮಾಗಳು ತೆಲುಗು ಭಾಷೆಯವು. ಈ ಪ್ರತಿಭಾನ್ವಿತ ಕನ್ನಡತಿಗೆ ಕನ್ನಡದಲ್ಲೇ ಹೆಚ್ಚು ಅವಕಾಶಗಳಿಲ್ಲ. (PC: Nikhita Narayan Facebook)

ನಂದಿತ ಶ್ವೇತ: ನಂದ ಲವ್ಸ್‌ ನಂದಿತ ಚಿತ್ರದ ಮೂಲಕ ಕನ್ನಡಕ್ಕೆ ಬಂದ ಈ ಜಿಂಕೆ ಮರಿ ಈಗ ತಮಿಳಿ ಹಾಗೂ ತೆಲುಗಿನಲ್ಲಿ ಬೇಡಿಕೆಯ ನಟಿ. ಆದರೆ ಕನ್ನಡ ಚಿತ್ರರಂಗ ಈ ಪ್ರತಿಭೆಯನ್ನು ಉಪಯೋಗಿಸಿಕೊಳ್ಳುತ್ತಿಲ್ಲ. 
icon

(8 / 13)

ನಂದಿತ ಶ್ವೇತ: ನಂದ ಲವ್ಸ್‌ ನಂದಿತ ಚಿತ್ರದ ಮೂಲಕ ಕನ್ನಡಕ್ಕೆ ಬಂದ ಈ ಜಿಂಕೆ ಮರಿ ಈಗ ತಮಿಳಿ ಹಾಗೂ ತೆಲುಗಿನಲ್ಲಿ ಬೇಡಿಕೆಯ ನಟಿ. ಆದರೆ ಕನ್ನಡ ಚಿತ್ರರಂಗ ಈ ಪ್ರತಿಭೆಯನ್ನು ಉಪಯೋಗಿಸಿಕೊಳ್ಳುತ್ತಿಲ್ಲ. (PC: Nandita Swetha Facebook)

ರಚಿತಾ ಮಹಾಲಕ್ಷ್ಮಿ:  ರಚಿತಾ ಕನ್ನಡದಲ್ಲಿ 'ಮೇಘ ಮಂದಾರ' ಧಾರಾವಾಹಿ ಮೂಲಕ ಆಕ್ಟಿಂಗ್‌ ಕರಿಯರ್‌ ಆರಂಭಿಸಿದರು. ನಂತರ ಗೀತಾಂಜಲಿ, ಸೂರ್ಯಕಾಂತಿ, ಸುಪ್ರಭಾತ, ಸವಿಗನಸು ಸೇರಿ ಅನೇಕ ಧಾರಾವಾಹಿಗಳಲ್ಲಿ ನಟಿಸಿದರು. ನಂತರ ತೆಲುಗು ಹಾಗೂ ತಮಿಳು ಕಿರುತೆರೆಯಲ್ಲಿ ಕೂಡಾ ಅವಕಾಶ ಗಳಿಸಿದರು. ಕನ್ನಡದಲ್ಲಿ ಸದ್ಯಕ್ಕೆ ಜಗ್ಗೇಶ್‌ ಜೊತೆ ರಂಗನಾಯಕ ಸಿನಿಮಾದಲ್ಲಿ ನಟಿಸುತ್ತಿರುವುದು ಬಿಟ್ಟರೆ ಇವರು ಸಕ್ರಿಯರಾಗಿರುವುದು ತಮಿಳು ಕಿರುತೆರೆಯಲ್ಲಿ. 
icon

(9 / 13)

ರಚಿತಾ ಮಹಾಲಕ್ಷ್ಮಿ:  ರಚಿತಾ ಕನ್ನಡದಲ್ಲಿ 'ಮೇಘ ಮಂದಾರ' ಧಾರಾವಾಹಿ ಮೂಲಕ ಆಕ್ಟಿಂಗ್‌ ಕರಿಯರ್‌ ಆರಂಭಿಸಿದರು. ನಂತರ ಗೀತಾಂಜಲಿ, ಸೂರ್ಯಕಾಂತಿ, ಸುಪ್ರಭಾತ, ಸವಿಗನಸು ಸೇರಿ ಅನೇಕ ಧಾರಾವಾಹಿಗಳಲ್ಲಿ ನಟಿಸಿದರು. ನಂತರ ತೆಲುಗು ಹಾಗೂ ತಮಿಳು ಕಿರುತೆರೆಯಲ್ಲಿ ಕೂಡಾ ಅವಕಾಶ ಗಳಿಸಿದರು. ಕನ್ನಡದಲ್ಲಿ ಸದ್ಯಕ್ಕೆ ಜಗ್ಗೇಶ್‌ ಜೊತೆ ರಂಗನಾಯಕ ಸಿನಿಮಾದಲ್ಲಿ ನಟಿಸುತ್ತಿರುವುದು ಬಿಟ್ಟರೆ ಇವರು ಸಕ್ರಿಯರಾಗಿರುವುದು ತಮಿಳು ಕಿರುತೆರೆಯಲ್ಲಿ. (PC: Rachitha Mahalakshmi Facebook)

ಸಂಯುಕ್ತ ಹೆಗ್ಡೆ: ಕಿರಿಕ್‌ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಸಂಯುಕ್ತಗೆ ಕೂಡಾ ಕನ್ನಡದಲ್ಲಿ ಹೆಚ್ಚು ಅವಕಾಶಗಳಿಲ್ಲ. ಇತ್ತೀಚೆಗೆ ರಾಣಾ ಚಿತ್ರದ ಪ್ರೆಸ್‌ಮೀಟ್‌ನಲ್ಲಿ ಕೂಡಾ ಸಂಯುಕ್ತ ಇದೇ ವಿಚಾರವಾಗಿ ಬೇಸರ ವ್ಯಕ್ತಪಡಿಸಿದ್ದರು. 
icon

(10 / 13)

ಸಂಯುಕ್ತ ಹೆಗ್ಡೆ: ಕಿರಿಕ್‌ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಸಂಯುಕ್ತಗೆ ಕೂಡಾ ಕನ್ನಡದಲ್ಲಿ ಹೆಚ್ಚು ಅವಕಾಶಗಳಿಲ್ಲ. ಇತ್ತೀಚೆಗೆ ರಾಣಾ ಚಿತ್ರದ ಪ್ರೆಸ್‌ಮೀಟ್‌ನಲ್ಲಿ ಕೂಡಾ ಸಂಯುಕ್ತ ಇದೇ ವಿಚಾರವಾಗಿ ಬೇಸರ ವ್ಯಕ್ತಪಡಿಸಿದ್ದರು. (Samyuktha Hegde: Facebook)

ಮಂಜುಳ: ಪ್ರೇಮ ಪಿಶಾಚಿಗಳು ಧಾರಾವಾಹಿ ನಂತರ ಬೆರಳೆಣಿಕೆಯಷ್ಟು ಕನ್ನಡ ಧಾರಾವಾಹಿಗಳಲ್ಲಿ ನಟಿಸಿದ ಮಂಜುಳ ನೋಡಲು ಬಹಳ ಸೌಂದರ್ಯವತಿ. ಪ್ರತಿಭಾವಂತೆ ಕೂಡಾ. ಆದರೆ ಈಕೆಗೆ ಕನ್ನಡದಲ್ಲಿ ಹೇಳಿಕೊಳ್ಳುವಂತ ಅವಕಾಶಗಳು ಇಲ್ಲದೆ ತೆಲುಗಿಗೆ ಬಂದರು. ಈಗ ತೆಲುಗು ಕಿರುತೆರೆಯಲ್ಲೇ ಸಂಪೂರ್ಣ ತೊಡಗಿಸಿಕೊಂಡಿದ್ದಾರೆ. ತೆಲುಗು ನಟನನ್ನೇ ಪ್ರೀತಿಸಿ ಮದುವೆಯಾಗಿದ್ದಾರೆ. 
icon

(11 / 13)

ಮಂಜುಳ: ಪ್ರೇಮ ಪಿಶಾಚಿಗಳು ಧಾರಾವಾಹಿ ನಂತರ ಬೆರಳೆಣಿಕೆಯಷ್ಟು ಕನ್ನಡ ಧಾರಾವಾಹಿಗಳಲ್ಲಿ ನಟಿಸಿದ ಮಂಜುಳ ನೋಡಲು ಬಹಳ ಸೌಂದರ್ಯವತಿ. ಪ್ರತಿಭಾವಂತೆ ಕೂಡಾ. ಆದರೆ ಈಕೆಗೆ ಕನ್ನಡದಲ್ಲಿ ಹೇಳಿಕೊಳ್ಳುವಂತ ಅವಕಾಶಗಳು ಇಲ್ಲದೆ ತೆಲುಗಿಗೆ ಬಂದರು. ಈಗ ತೆಲುಗು ಕಿರುತೆರೆಯಲ್ಲೇ ಸಂಪೂರ್ಣ ತೊಡಗಿಸಿಕೊಂಡಿದ್ದಾರೆ. ತೆಲುಗು ನಟನನ್ನೇ ಪ್ರೀತಿಸಿ ಮದುವೆಯಾಗಿದ್ದಾರೆ. (PC: Manjula Paritala Facebook)

ಮೇಘನಾ ಲೊಕೇಶ್:‌ ಮೇಘನಾ ಮೈಸೂರು ಹುಡುಗಿ. ದೇವಿ ಧಾರಾವಾಹಿ ಮೂಲಕ ಬಣ್ಣದ ಬದುಕಿಗೆ ಬಂದ ಈಕೆ ನಂತರ ಪವಿತ್ರ ಬಂಧನ ಹಾಗೂ ಪುರುಷೋತ್ತಮ ಧಾರಾವಾಹಿಗಳಲ್ಲಿ ನಟಿಸಿದರು. ಆದರೆ ಇವರಿಗೆ ಬ್ರೇಕ್‌ ನೀಡಿದ್ದು ಮಾತ್ರ ತೆಲುಗು ಕಿರುತೆರೆ. ಶಶಿರೇಖ ಪರಿಣಯಂ ಧಾರಾವಾಹಿ ಮೂಲಕ ತೆಲುಗಿಗೆ ಹೋದ ಈ ಚೆಲುವೆ ಈಗ ತೆಲುಗು ಕಿರುತೆರೆಯಲ್ಲಿ ಬ್ಯುಸಿ. 
icon

(12 / 13)

ಮೇಘನಾ ಲೊಕೇಶ್:‌ ಮೇಘನಾ ಮೈಸೂರು ಹುಡುಗಿ. ದೇವಿ ಧಾರಾವಾಹಿ ಮೂಲಕ ಬಣ್ಣದ ಬದುಕಿಗೆ ಬಂದ ಈಕೆ ನಂತರ ಪವಿತ್ರ ಬಂಧನ ಹಾಗೂ ಪುರುಷೋತ್ತಮ ಧಾರಾವಾಹಿಗಳಲ್ಲಿ ನಟಿಸಿದರು. ಆದರೆ ಇವರಿಗೆ ಬ್ರೇಕ್‌ ನೀಡಿದ್ದು ಮಾತ್ರ ತೆಲುಗು ಕಿರುತೆರೆ. ಶಶಿರೇಖ ಪರಿಣಯಂ ಧಾರಾವಾಹಿ ಮೂಲಕ ತೆಲುಗಿಗೆ ಹೋದ ಈ ಚೆಲುವೆ ಈಗ ತೆಲುಗು ಕಿರುತೆರೆಯಲ್ಲಿ ಬ್ಯುಸಿ. (PC: Meghana Lokesh Facebook)

ಆಶಿಕಾ ಗೋಪಾಲ್‌ ಪಡುಕೋಣೆ: ಉಡುಪಿಗೆ ಸೇರಿದ ಈ ಚೆಲುವೆ ಕನ್ನಡದವರಿಗೆ ಅಷ್ಟು ಪರಿಚಯ ಇಲ್ಲ. ಈಕೆ ಬಣ್ಣದ ಬದುಕು ಆರಂಭಿಸಿದ್ದೇ ನಿಹಾರಿಕಾ ಧಾರಾವಾಹಿ ಮೂಲಕ. ನಂತರ ತ್ರಿವೇಣಿ ಸಂಗಮದಲ್ಲಿ ನಟಿಸಿದ ಇವರಿಗೆ ಉತ್ತಮ ಅವಕಾಶಗಳು ದೊರೆತಿದ್ದು ತೆಲುಗು ಹಾಗೂ ತಮಿಳಿನಲ್ಲಿ. ಈಗ ಪರಭಾಷೆಯಲ್ಲಿ ಆಶಿಕಾ ಫೇಮಸ್‌ ನಟಿ. 
icon

(13 / 13)

ಆಶಿಕಾ ಗೋಪಾಲ್‌ ಪಡುಕೋಣೆ: ಉಡುಪಿಗೆ ಸೇರಿದ ಈ ಚೆಲುವೆ ಕನ್ನಡದವರಿಗೆ ಅಷ್ಟು ಪರಿಚಯ ಇಲ್ಲ. ಈಕೆ ಬಣ್ಣದ ಬದುಕು ಆರಂಭಿಸಿದ್ದೇ ನಿಹಾರಿಕಾ ಧಾರಾವಾಹಿ ಮೂಲಕ. ನಂತರ ತ್ರಿವೇಣಿ ಸಂಗಮದಲ್ಲಿ ನಟಿಸಿದ ಇವರಿಗೆ ಉತ್ತಮ ಅವಕಾಶಗಳು ದೊರೆತಿದ್ದು ತೆಲುಗು ಹಾಗೂ ತಮಿಳಿನಲ್ಲಿ. ಈಗ ಪರಭಾಷೆಯಲ್ಲಿ ಆಶಿಕಾ ಫೇಮಸ್‌ ನಟಿ. (PC: Ashika Gopal Padukone Facebook)


IPL_Entry_Point

ಇತರ ಗ್ಯಾಲರಿಗಳು