ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sangita Madhavan Nair: ಶಾಂತಿ ಕ್ರಾಂತಿಯ ಬಾಲನಟಿ, ಯಾರೇ ನೀನು ಚೆಲುವೆಯ ಕಮಲಿ ಈಗ ಹೇಗಿದ್ದಾರೆ? ಸಿನಿಮಾಕ್ಷೇತ್ರ ಬಿಟ್ಟಿದ್ಯಾಕೆ?

Sangita Madhavan Nair: ಶಾಂತಿ ಕ್ರಾಂತಿಯ ಬಾಲನಟಿ, ಯಾರೇ ನೀನು ಚೆಲುವೆಯ ಕಮಲಿ ಈಗ ಹೇಗಿದ್ದಾರೆ? ಸಿನಿಮಾಕ್ಷೇತ್ರ ಬಿಟ್ಟಿದ್ಯಾಕೆ?

  • Sangita Madhavan Nair: ಸಂಗೀತಾ ಮಾಧವನ್‌ ನಾಯರ್.‌ ಈ ಹೆಸರು ಎಷ್ಟು ಜನಕ್ಕೆ ನೆನಪಿದೆಯೋ ಗೊತ್ತಿಲ್ಲ. ಆದರೆ, ರವಿಚಂದ್ರನ್‌ ಅವರ ಶಾಂತಿ ಕ್ರಾಂತಿ ಸಿನಿಮಾದಲ್ಲಿನ ಬಾಲನಟಿ, ಯಾರೇ ನೀನು ಚೆಲುವೆ ಚಿತ್ರದ ನಾಯಕಿ ನೆನಪಿರಬಹುದು. ಮಲಯಾಳಿ ಮೂಲದ ಸಂಗೀತಾ, ಕನ್ನಡದಲ್ಲಿ ಕಾಣಿಸಿಕೊಂಡಿದ್ದು ಕೇವಲ 3 ಸಿನಿಮಾಗಳಲ್ಲಿ. ಹಾಗಾದ್ರೆ ಸದ್ಯ ಈ ನಟಿ ಏನ್‌ ಮಾಡುತ್ತಿದ್ದಾರೆ.

ಕೇರಳದ ಮಲ್ಲಾಪುರಂನ ಕೊಟ್ಟಕಾಳದಲ್ಲಿ ಹುಟ್ಟಿದ ಸಂಗೀತಾ ಮಾಧವನ್‌ ನಾಯರ್‌, ನಾಲ್ಕು ಮಂದಿ ಮಕ್ಕಳಲ್ಲಿ ಸಂಗೀತಾ ಚಿಕ್ಕವರು. ಮನೆಯಲ್ಲಿ ಅಪ್ಪನದ್ದು ಹಣ್ಣಿನ ಬಿಜಿನೆಸ್‌. ಮುಂದಿನ ದಿನಗಳಲ್ಲಿ ಈ ಇಡೀ ಕುಟುಂಬ ಚೆನ್ನೈನಲ್ಲಿಯೇ ನೆಲೆಯೂರಿತು.
icon

(1 / 8)

ಚಿಕ್ಕಂದಿನಿಂದಲೂ ನಟನೆ ಬಗ್ಗೆ ಸಂಗೀತಾಗೆ ಆಸಕ್ತಿ. ಆ ಕಾರಣಕ್ಕೆ ಮಲಯಾಳಂ, ತೆಲುಗು, ಕನ್ನಡ ಮತ್ತು ತಮಿಳು ಸಿನಿಮಾಗಳಲ್ಲಿ ಬಾಲನಟಿಯಾಗಿ ನಟಿಸಿದರು. ಆರಂಭದಲ್ಲಿ ಮಲಯಾಳಂನಲ್ಲಿಯೇ 5 ಸಿನಿಮಾಗಳಲ್ಲಿ ಚೈಲ್ಡ್‌ ಆಕ್ಟರ್‌ ಆದರು. 
icon

(2 / 8)

1991ರಲ್ಲಿ ತೆರೆಗೆ ಬಂದ ಶಾಂತಿ ಕ್ರಾಂತಿ ಚಿತ್ರದ ಮೂಲಕ ಕನ್ನಡಕ್ಕೂ ಬಾಲ ನಟಿಯಾಗಿ ಬಂದ ಸಂಗೀತಾ, ರವಿಚಂದ್ರನ್‌ ಜತೆಗೆ ನಟಿಸಿದರು. ಅದೇ ಸಿನಿಮಾ, ಹಿಂದಿ, ತೆಲುಗು ಮತ್ತು ತಮಿಳಿನಲ್ಲಿಯೂ ಬಿಡುಗಡೆ ಆಗಿತ್ತು. ಆ ಸಿನಿಮಾಗಳಲ್ಲಿಯೂ ಸಂಗೀತಾ ಬಾಲನಟಿಯಾಗಿ ಗಮನ ಸೆಳೆದರು. 
icon

(3 / 8)

ಹೀಗಿರುವಾಗ ಅದೇ ವರ್ಷ ತಮಿಳಿನಲ್ಲಿ ಚಂದ್ರಕಾಂತ್‌ ನಿರ್ದೇಶನದಲ್ಲಿ ಮೂಡಿ ಬಂದ ಇಧಯ ವಾಸಲ್‌ ಚಿತ್ರದಲ್ಲಿಯೂ ಸಂಗೀತಾ ನಟಿಸಿದರು. ಈ ಚಿತ್ರದಲ್ಲಿ ರಮೇಶ್‌ ಅರವಿಂದ್‌ ನಾಯಕರಾಗಿ ನಟಿಸಿದರೆ, ಮೀನಾ ನಾಯಕಿಯಾಗಿದ್ದರು.(Youtube/ Photo/ Kairali TV)
icon

(4 / 8)

ಹೀಗೆ ಬಾಲನಟಿಯಾಗಿ ಗುರುತಿಸಿಕೊಂಡ ಸಂಗೀತಾ, ನಾಯಕಿಯಾಗುವುದಕ್ಕೆ ಹೆಚ್ಚು ದಿನ ಹಿಡಿಯಲಿಲ್ಲ. 1995ಲ್ಲಿ ಪಾರ್ಥಿಬನ್‌ ನಿರ್ದೇಶನದಲ್ಲಿ ಪುಲ್ಲಕುಟ್ಟಿಕಾರನ್‌ ತಮಿಳು ಸಿನಿಮಾ ಮೂಲಕ ನಾಯಕಿಯಾಗಿ ಬಣ್ಣ ಹಚ್ಚಿದರು. (Photo/ Youtube/ Cinema Vikatan)
icon

(5 / 8)

ಹೀಗೆ ಮುಂದುವರಿದು 1998ರಲ್ಲಿ ರವಿಚಂದ್ರನ್‌ ನಟನೆಯ ಯಾರೇ ನೀನು ಚೆಲುವೆ ಸಿನಿಮಾಕ್ಕೆ ನಾಯಕಿಯಾಗಿ ಮತ್ತೆ ಕನ್ನಡಕ್ಕೆ ಮರಳಿದರು. 1991ರಲ್ಲಿ ಶಾಂತಿ ಕ್ರಾಂತಿಯ ಬಾಲನಟಿ ರವಿಮಾಮನಿಗೆ ಜೋಡಿಯಾಗಿದ್ದರು. ಕಮಲಿ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದರು. 
icon

(6 / 8)

ಅದಾದ ಮೇಲೆ ಅಂದರೆ 2000ರಲ್ಲಿ ಶಿವರಾಜ್‌ಕುಮಾರ್‌ ಜತೆಗೆ ಯಾರೇ ನೀನು ಅಭಿಮಾನಿ ಸಿನಿಮಾದಲ್ಲಿ ನಟಿಸಿದರು. ಕನ್ನಡದಲ್ಲಿ ನಟಿಸಿದ ಅದೇ ಅವರ ಕೊನೆಯ ಸಿನಿಮಾ. ಅದೇ ವರ್ಷದಲ್ಲಿ ಕ್ಯಾಮರಾಮನ್‌ ಎಸ್‌ ಸರವಣನ್‌ ಅವರನ್ನು ವಿವಾಹವಾದರು. (Photo/ Youtube/ Cinema Vikatan)
icon

(7 / 8)

2002ರಲ್ಲಿ ಹೆಣ್ಣು ಮಗುವೂ ಇವರ ಮಡಿಲು ತುಂಬಿತು. ಅಂದಿನಿಂದ ಸಿನಿಮಾದಿಂದ ದೂರವೇ ಸರಿದ ಸಂಗೀತಾ, 2014ರಲ್ಲಿ ನಗರ ವಾರಿಧಿ ನಡುವಿಲ್‌ ನ್ಯಾನ್‌ ಎಂಬ ಮಲಯಾಳಂ ಸಿನಿಮಾ ಮೂಲಕ ಕಂಬ್ಯಾಕ್‌ ಮಾಡಿದರೂ, ಮತ್ತೆ ನಟನೆಯತ್ತ ಮುಂದುವರಿಯಲಿಲ್ಲ. (Photo/ Youtube/ Cinema Vikatan)
icon

(8 / 8)

ಇತರ ಗ್ಯಾಲರಿಗಳು