ಕನ್ನಡ ಒಗಟುಗಳು: ಬಿಂಕದ ಸಿಂಗಾರಿಗೆ ಮೈಯೆಲ್ಲ ಉರಿ, ಏನಿದು? ಇಲ್ಲಿರುವ 8 ಒಗಟುಗಳಿಗೆ ಉತ್ತರಿಸಿದ್ರೆ ನೀವು ಜಾಣರು
- ಕನ್ನಡ ಒಗಟುಗಳು: ನಿಮ್ಮಲ್ಲಿ ಯಾರಾದರೂ ಕನ್ನಡ ಒಗಟು ತಿಳಿಸಿ ಇದಕ್ಕೆ ಉತ್ತರ ಹೇಳಿ ಎಂದು ಹೇಳಬಹುದು. ನೀವು ಕೂಡ ಇತರರಿಗೆ ಒಗಟುಗಳನ್ನು ತಿಳಿಸಿ ಉತ್ತರ ಪಡೆಯಬಹುದು. ನಿಮ್ಮ ಮಿದುಳಿಗೆ ಮೇವು ಒದಗಿಸುವ, ಜ್ಞಾನಕ್ಕೆ ಸವಾಲು ಒಡ್ಡುವ ಎಂಟು ಕನ್ನಡ ಒಗಟುಗಳನ್ನು ಇಲ್ಲಿ ನೀಡಲಾಗಿದೆ. ಸರಿ ಉತ್ತರಗಳನ್ನು ಕೊನೆಗೆ ನೀಡಲಾಗಿದೆ.
- ಕನ್ನಡ ಒಗಟುಗಳು: ನಿಮ್ಮಲ್ಲಿ ಯಾರಾದರೂ ಕನ್ನಡ ಒಗಟು ತಿಳಿಸಿ ಇದಕ್ಕೆ ಉತ್ತರ ಹೇಳಿ ಎಂದು ಹೇಳಬಹುದು. ನೀವು ಕೂಡ ಇತರರಿಗೆ ಒಗಟುಗಳನ್ನು ತಿಳಿಸಿ ಉತ್ತರ ಪಡೆಯಬಹುದು. ನಿಮ್ಮ ಮಿದುಳಿಗೆ ಮೇವು ಒದಗಿಸುವ, ಜ್ಞಾನಕ್ಕೆ ಸವಾಲು ಒಡ್ಡುವ ಎಂಟು ಕನ್ನಡ ಒಗಟುಗಳನ್ನು ಇಲ್ಲಿ ನೀಡಲಾಗಿದೆ. ಸರಿ ಉತ್ತರಗಳನ್ನು ಕೊನೆಗೆ ನೀಡಲಾಗಿದೆ.
(1 / 10)
ಕನ್ನಡ ಒಗಟುಗಳು: ನಿಮ್ಮಲ್ಲಿ ಯಾರಾದರೂ ಕನ್ನಡ ಒಗಟು ತಿಳಿಸಿ ಇದಕ್ಕೆ ಉತ್ತರ ಹೇಳಿ ಎಂದು ಹೇಳಬಹುದು. ನೀವು ಕೂಡ ಇತರರಿಗೆ ಒಗಟುಗಳನ್ನು ತಿಳಿಸಿ ಉತ್ತರ ಪಡೆಯಬಹುದು. ನಿಮ್ಮ ಮಿದುಳಿಗೆ ಮೇವು ಒದಗಿಸುವ, ಜ್ಞಾನಕ್ಕೆ ಸವಾಲು ಒಡ್ಡುವ ಎಂಟು ಕನ್ನಡ ಒಗಟುಗಳನ್ನು ಇಲ್ಲಿ ನೀಡಲಾಗಿದೆ. ಇವುಗಳಿಗೆ ಸರಿಯಾದ ಒತ್ತರಗಳನ್ನು ಕೊನೆಗೆ ನೀಡಲಾಗಿದೆ. ಸರಿ ಉತ್ತರ ನೋಡದೇ ನೀವೇ ಈ ಒಗಟುಗಳಿಗೆ ಉತ್ತರ ನೀಡಲು ಪ್ರಯತ್ನಿಸಿ.
(canva)(5 / 10)
ಕನ್ನಡ ಒಗಟುಗಳು: ಜುಟ್ಟು ಇದೆ ಮುನಿಯಲ್ಲ, ಮೂರು ಕಣ್ಣಿದೆ ಈಶ್ವರನಲ್ಲ. ಹಾಲಿದ್ದರೂ ಆಕಳಲ್ಲ. ದೇಹ ಇಬ್ಬಾಗವಾದರೂ ತಿರುಳು ನೀಡುವ ದೇವಪ್ರಿಯನೀತ.
(6 / 10)
ಕನ್ನಡ ಒಗಟುಗಳು: ಆರು ಗೆರೆಯಿದ್ದರೂ ಹೀರೆಕಾಯಲ್ಲ, ಹುಳಿಯಿದ್ದರೂ ಲಿಂಬಿಕಾಯಲ್ಲ, ಹಸಿರಿದ್ದರೂ ನಿಂಬೆಕಾಯಲ್ಲ, ಏನಿದು?
(9 / 10)
ಕನ್ನಡ ಒಗಟುಗಳು: ಮುಳ್ಳಿದ್ದರೂ ಮರವಲ್ಲ, ಅಂಕೆಯಿದ್ದರೂ ಪುಸ್ತಕವಲ್ಲ, ಚಕ್ರವಿದ್ದರೂ ಗಾಡಿಯಲ್ಲ, ಗಂಟೆಯಿದ್ದರೂ ಗುಡಿಯಲ್ಲ, ನಾನು ಯಾರು?
(10 / 10)
ಗಾದೆಗಳಿಗೆ ಉತ್ತರಗಳು- ಜುಟ್ಟು ಇದೆ ಮುನಿಯಲ್ಲ, ಮೂರು ಕಣ್ಣಿದೆ ಈಶ್ವರನಲ್ಲ. ಹಾಲಿದ್ದರೂ ಆಕಳಲ್ಲ. ದೇಹ ಇಬ್ಬಾಗವಾದರೂ ತಿರುಳು ನೀಡುವ ದೇವಪ್ರಿಯನೀತ- ಉತ್ತರ: ತೆಂಗಿನಕಾಯಿ- ನೀರಲ್ಲೇ ಹುಟ್ಟೋದು, ನೀರಲ್ಲೇ ಬೆಳೆಯೋದು, ನೀರು ತಾಕಿದರೆ ಮಟಮಾಯ! ಏನಿದು? - ಉಪ್ಪು- ಗಿರಗಿರ ತಿರುಗುತ್ತದೆ. ಸುಸ್ತಾಗಿ ಬೀಳುತ್ತದೆ. ಏನಿದು? - ಬುಗರಿ- ಬಿಂಕದ ಸಿಂಗಾರಿಗೆ ಮೈಯೆಲ್ಲ ಉರಿ! ಯಾರಿದು?- ಮೆಣಸಿನಕಾಯಿ- ರೆಕ್ಕೆ ಇಲ್ಲ, ಪುಕ್ಕ ಇಲ್ಲ, ಎಲ್ಲೆಂದರಲ್ಲಿ ಹಾರಾಡುತ್ತದೆ. ಏನಿದು?- ಗಾಳಿ- ಆರು ಗೆರೆಯಿದ್ದರೂ ಹೀರೆಕಾಯಲ್ಲ, ಹುಳಿಯಿದ್ದರೂ ಲಿಂಬಿಕಾಯಲ್ಲ, ಹಸಿರಿದ್ದರೂ ನಿಂಬೆಕಾಯಲ್ಲ, ಏನಿದು?- ನೆಲ್ಲಿಕಾಯಿ- ಸೂಜಿಗಿಂತ ಸಣ್ಣ, ಕಾಗೆಗಿಂತಲೂ ಕಪ್ಪು, ಏನಿದು? - ಕೂದಲು- ಮುಳ್ಳಿದ್ದರೂ ಮರವಲ್ಲ, ಅಂಕೆಯಿದ್ದರೂ ಪುಸ್ತಕವಲ್ಲ, ಚಕ್ರವಿದ್ದರೂ ಗಾಡಿಯಲ್ಲ, ಗಂಟೆಯಿದ್ದರೂ ಗುಡಿಯಲ್ಲ, ನಾನು ಯಾರು?- ಗಡಿಯಾರ
ಇತರ ಗ್ಯಾಲರಿಗಳು