ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Trpಯಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಟಾಪ್; ಸೀತಾ ರಾಮ‌ ಸೀರಿಯಲ್‌ಗೆ ಶ್ರಾವಣಿ ಸುಬ್ರಮಣ್ಯ ಪೈಪೋಟಿ

TRPಯಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಟಾಪ್; ಸೀತಾ ರಾಮ‌ ಸೀರಿಯಲ್‌ಗೆ ಶ್ರಾವಣಿ ಸುಬ್ರಮಣ್ಯ ಪೈಪೋಟಿ

Kannada Serial TRP: ಕನ್ನಡ ಕಿರುತೆರೆಯಲ್ಲಿ ಸೀರಿಯಲ್‌ಗಳ ನಡುವೆ ದೊಡ್ಡ ಮಟ್ಟದ ಸ್ಪರ್ಧೆ ಏರ್ಪಟ್ಟಿದೆ. ಟಿಆರ್‌ಪಿ ವಿಚಾರದಲ್ಲಿ ಪ್ರಬಲ ಪೈಪೂಟಿ ಏರ್ಪಟ್ಟಿದೆ. ಹಾಗಾದರೆ, ಈ ವಾರ ಯಾವ ಸೀರಿಯಲ್‌ ಟಾಪ್‌ ಸ್ಥಾನದಲ್ಲಿದೆ? 

 ಹಳೇ ಧಾರಾವಾಹಿಗಳ ಜತೆಗೆ ಹೊಸ ಸೀರಿಯಲ್‌ಗಳೂ ಪೈಪೋಟಿಗಳಿದಿವೆ. ಇತ್ತೀಚೆಗೆ ಬಂದವರೂ ಹಳಬರಿಗೆ ಸ್ಪರ್ಧೆಯೊಡ್ಡುತ್ತಿದ್ದಾರೆ. ಆ ಪೈಕಿ ಈ ವಾರದ ಟಿಆರ್‌ಪಿಯನ್ನು ಗಮನಿಸುವುದಾದರೆ, ಯಾವ ಧಾರಾವಾಹಿಗಳಿಗೆ ಯಾವ ಸ್ಥಾನ ಸಿಕ್ಕಿದೆ? ಇಲ್ಲಿದೆ ಮಾಹಿತಿ. 
icon

(1 / 7)

ಎಂದಿನಂತೆ ಜೀ ಕನ್ನಡದಲ್ಲಿ ಪ್ರಸಾರ ಕಾಣುವ ಪುಟ್ಟಕ್ಕನ ಮಕ್ಕಳು ಸೀರಿಯಲ್‌, ಈ ಸಲವೂ ಮೊದಲ ಸ್ಥಾನದಲ್ಲಿ ಗಟ್ಟಿಯಾಗಿ ನೆಲೆನಿಂತಿದೆ. ಇತ್ತೀಚಿನ ಕೆಲ ವಾರ ಕೊಂಚ ಏರಿಳಿತ ಕಂಡರೂ ಮತ್ತೆ ಯಥಾಸ್ಥಿತಿಗೆ ಮರಳಿದೆ. 
icon

(2 / 7)

ಜೀ ಕನ್ನಡದಲ್ಲಿನ ಲಕ್ಷ್ಮೀ ನಿವಾಸ, ಪುಟ್ಟಕ್ಕನ ಮಕ್ಕಳು ಸೀರಿಯಲ್‌ಗೆ ಟಕ್ಕರ್‌ ಕೊಟ್ಟು ಮೊದಲ ಸ್ಥಾನ ಪಡೆದಿತ್ತು. ಆದರೆ, ಅದ್ಯಾಕೋ ಇತ್ತೀಚಿನ ಕೆಲ ವಾರಗಳಿಂದ ಎರಡನೇ ಸ್ಥಾನದಲ್ಲಿ ಮುಂದುವರಿದಿತ್ತು. 
icon

(3 / 7)

ಸೀತಾ ರಾಮ ಸೀರಿಯಲ್‌ನಲ್ಲಿ ಸೀತಾ, ರಾಮನ ಮನೆಗೆ ಬಂದಿದ್ದಾಳೆ. ಕಂಠಿ ಹಾರವೂ ಆಕೆಯ ಕೊರಳಿಗೆ ಬಿದ್ದಿದೆ. ಇತ್ತ ಭಾರ್ಗವಿ ನಿಗಿ ನಿಗಿ ಕೆಂಡದಂತಾಗಿದ್ದಾಳೆ. ಹೀಗೆ ಸೀರಿಯಲ್‌ನ ರೋಚಕ ಸಂಚಿಕೆಗಳು ವೀಕ್ಷಕರನ್ನು ಆಕರ್ಷಿಸಿವೆ. ಈ ವಾರದ ಟಿಆರ್‌ಪಿ ಪಟ್ಟಿಯಲ್ಲಿ ಸೀತಾರಾಮ ಮೂರನೇ ಸ್ಥಾನದಲ್ಲಿದೆ ಈ ಸೀರಿಯಲ್‌. 
icon

(4 / 7)

ಕಳೆದ ಬಾಲಿ ನಾಲ್ಕನೇ ಸ್ಥಾನದಲ್ಲಿದ್ದ ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ ಎಲ್ಲರ ಮೆಚ್ಚುಗೆ ಪಡೆದು ಮುಂದುವರಿದಿದೆ. ಈ ಧಾರಾವಾಹಿ ಈ ವಾರ ಮೂರನೇ ಸ್ಥಾನ ಅಲಂಕರಿಸಿದೆ. ಈ ಮೂಲಕ ಸೀತಾ ರಾಮನಿಗೆ ಪೈಪೋಟಿ ನೀಡುತ್ತಿದೆ. 
icon

(5 / 7)

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿ ಈ ವಾರ ನಾಲ್ಕನೇ ಸ್ಥಾನಕ್ಕೆ ಏರಿಕೆ ಕಂಡಿದೆ. ಕಳೆದ ವಾರ ಟಾಪ್‌ ಐದರಲ್ಲಿ ಈ ಸೀರಿಯಲ್‌ ಸ್ಥಾನ ಕಳೆದುಕೊಂಡಿತ್ತು. 
icon

(6 / 7)

ಕಲರ್ಸ್‌ ಕನ್ನಡದಲ್ಲಿನ ರಾಮಾಚಾರಿ ಸೀರಿಯಲ್‌ ಐದನೇ ಸ್ಥಾನದಲ್ಲಿದೆ. ಟಾಪ್‌ ಐದರಲ್ಲಿ ಕಲರ್ಸ್‌ ಕನ್ನಡದ ಒಂದೇ ಒಂದು ಧಾರಾವಾಹಿ ಇದೆ. ರಿತ್ವಿಕ್‌ ಕೃಪಾಕರ್‌, ಮೌನಾ ಗುಡ್ಡೇಮನೆ ಈ ಸೀರಿಯಲ್‌ನ ಮುಖ್ಯ ಭೂಮಿಕೆಯಲ್ಲಿದ್ದಾರೆ.  
icon

(7 / 7)

IPL_Entry_Point

ಇತರ ಗ್ಯಾಲರಿಗಳು