ಪುಟ್ಟಕ್ಕನಿಗೆ ಪುಟ್ಟಕ್ಕನೇ ಸಾಟಿ, ಅಗ್ರಸ್ಥಾನ ಬಿಟ್ಟುಕೊಡದ ಉಮಾಶ್ರೀ; TRP ಪಟ್ಟಿಯಲ್ಲಿ ಟಾಪ್ ಐದರಲ್ಲಿ ಇರುವ ಸೀರಿಯಲ್ಸ್ ಯಾವುವು?
- Kannada Serial TRP: ಕನ್ನಡ ಕಿರುತೆರೆಯಲ್ಲಿ ಸೀರಿಯಲ್‌ಗಳ ನಡುವೆ ದೊಡ್ಡ ಮಟ್ಟದ ಸ್ಪರ್ಧೆ ಏರ್ಪಟ್ಟಿದೆ. ಟಿಆರ್‌ಪಿ ವಿಚಾರದಲ್ಲಿ ಬಿರುಸಿನ ಸೆಣಸಾಟ ನಡೆಯುತ್ತಿದೆ. ಹಾಗಾದರೆ, ಈ ವಾರ ಯಾವ ಸೀರಿಯಲ್ ಎಷ್ಟನೇ ಸ್ಥಾನದಲ್ಲಿದೆ ಎಂಬುದನ್ನು ನೋಡೋಣ.
- Kannada Serial TRP: ಕನ್ನಡ ಕಿರುತೆರೆಯಲ್ಲಿ ಸೀರಿಯಲ್‌ಗಳ ನಡುವೆ ದೊಡ್ಡ ಮಟ್ಟದ ಸ್ಪರ್ಧೆ ಏರ್ಪಟ್ಟಿದೆ. ಟಿಆರ್‌ಪಿ ವಿಚಾರದಲ್ಲಿ ಬಿರುಸಿನ ಸೆಣಸಾಟ ನಡೆಯುತ್ತಿದೆ. ಹಾಗಾದರೆ, ಈ ವಾರ ಯಾವ ಸೀರಿಯಲ್ ಎಷ್ಟನೇ ಸ್ಥಾನದಲ್ಲಿದೆ ಎಂಬುದನ್ನು ನೋಡೋಣ.
(1 / 6)
ಕಿರುತೆರೆಯಲ್ಲೀಗ ಹಳೇ ಧಾರಾವಾಹಿಗಳ ಜತೆಗೆ ಹೊಸ ಸೀರಿಯಲ್‌ಗಳೂ ಪೈಪೋಟಿಗಳಿದಿವೆ. ಇತ್ತೀಚೆಗೆ ಬಂದವರೂ ಸ್ಪರ್ಧಾ ಕಣದಲ್ಲಿದ್ದಾರೆ. ಆ ಪೈಕಿ ಈ ವಾರದ ಟಿಆರ್‌ಪಿಯನ್ನು ಗಮನಿಸುವುದಾದರೆ, ಯಾವ ಧಾರಾವಾಹಿಗಳಿಗೆ ಯಾವ ಸ್ಥಾನ ಸಿಕ್ಕಿದೆ? ಇಲ್ಲಿದೆ ಮಾಹಿತಿ. (Images\ jio cinema and Zee5)
(2 / 6)
ಎಂದಿನಂತೆ ಜೀ ಕನ್ನಡದಲ್ಲಿ ಪ್ರಸಾರ ಕಾಣುವ ಪುಟ್ಟಕ್ಕನ ಮಕ್ಕಳು ಸೀರಿಯಲ್, ಈ ಸಲವೂ ಮೊದಲ ಸ್ಥಾನದಲ್ಲಿ ಗಟ್ಟಿಯಾಗಿ ನೆಲೆನಿಂತಿದೆ. ಇತ್ತೀಚಿನ ಕೆಲ ವಾರ ಕೊಂಚ ಏರಿಳಿತ ಕಂಡರೂ ಮತ್ತೆ ಯಥಾಸ್ಥಿತಿಗೆ ಮರಳಿದೆ.
(3 / 6)
ಅದೇ ರೀತಿ ಜೀ ಕನ್ನಡದಲ್ಲಿನ ಲಕ್ಷ್ಮೀ ನಿವಾಸ ಧಾರಾವಾಹಿ ಪುಟ್ಟಕ್ಕನ ಮಕ್ಕಳು ಸೀರಿಯಲ್‌ಗೆ ಟಕ್ಕರ್ ಕೊಟ್ಟು ಮೊದಲ ಸ್ಥಾನ ಪಡೆದಿತ್ತು. ಆದರೆ, ಅದ್ಯಾಕೋ ಇತ್ತೀಚಿನ ಕೆಲ ವಾರಗಳಿಂದ ಎರಡನೇ ಸ್ಥಾನದಲ್ಲಿ ಮುಂದುವರಿದಿತ್ತು. ಈಗಲೂ ಅಲ್ಲಿಯೇ ಉಳಿದುಕೊಂಡಿದೆ.
(4 / 6)
ಸೀತಾ ರಾಮ ಸೀರಿಯಲ್‌ನಲ್ಲಿನ ಒಂದಷ್ಟು ರೋಚಕ ಸಂಚಿಕೆಗಳು ನೋಡುಗರನ್ನು ಆಕರ್ಷಿಸಿವೆ. ಆ ಕಾರಣಕ್ಕೆ ಈ ವಾರದ ಟಿಆರ್‌ಪಿ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ ಈ ಸೀರಿಯಲ್. ಈ ಧಾರಾವಾಹಿಯಲ್ಲಿ ವೈಷ್ಣವಿ ಗೌಡ, ಗಗನ್ ಚಿನ್ನಪ್ಪ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.
(5 / 6)
ನಾಲ್ಕನೇ ಸ್ಥಾನದಲ್ಲಿ ಶ್ರಾವಣಿ ಸುಬ್ರಮಣ್ಯ ಸೀರಿಯಲ್ ಎಲ್ಲರ ಮೆಚ್ಚುಗೆ ಪಡೆದು ಮುಂದುವರಿದಿದೆ. ಈ ಧಾರಾವಾಹಿ ಇತ್ತೀಚೆಗಷ್ಟೇ ಪ್ರಸಾರ ಆರಂಭಿಸಿದರೂ, ಇದಕ್ಕೂ ಮೊದಲು ಬಂದ ಸೀರಿಯಲ್‌ಗೆ ಪ್ರಬಲ ಸ್ಪರ್ಧೆಯೊಡ್ಡುತ್ತಿದೆ.
ಇತರ ಗ್ಯಾಲರಿಗಳು