ಮೊದಲ ಸ್ಥಾನಕ್ಕೆ ಮೂರು ಧಾರಾವಾಹಿಗಳ ಪೈಪೋಟಿ; ಲಕ್ಷ್ಮೀ ನಿವಾಸ, ಅಮೃತಧಾರೆಯನ್ನು ಹಿಮ್ಮೆಟ್ಟಿಸಿ ನಂ. 1 ಸ್ಥಾನಕ್ಕೆ ಬಂದ ಈ ಸೀರಿಯಲ್
- ಕನ್ನಡ ಕಿರುತೆರೆಯ ಮೂರನೇ ವಾರದ ಟಿಆರ್‌ಪಿ ಡೇಟಾ ಹೊರಬಿದ್ದಿದೆ. ಮೊದಲ ವಾರ ಲಕ್ಷ್ಮೀ ನಿವಾಸ ಟಾಪ್ 1 ಧಾರಾವಾಹಿಯಾಗಿತ್ತು. ಅದಾದ ಮೇಲೆ ಎರಡನೇ ವೀಕ್‌ನಲ್ಲಿ ಅಣ್ಣಯ್ಯ ಆ ಸ್ಥಾನ ಪಡೆಯಿತು. ಇದೀಗ ಮೂರನೇ ವಾರ ಶ್ರಾವಣಿ ಸುಬ್ರಮಣ್ಯ ಹೆಚ್ಚು ಟಿಆರ್‌ಪಿ ಪಡೆದು ಮೊದಲ ಸ್ಥಾನಕ್ಕೆ ಬಂದಿದೆ. ಹಾಗಾದರೆ, ಟಾಪ್ 10 ಸೀರಿಯಲ್‌ಗಳು ಯಾವವು? ಇಲ್ಲಿದೆ ಮಾಹಿತಿ.
- ಕನ್ನಡ ಕಿರುತೆರೆಯ ಮೂರನೇ ವಾರದ ಟಿಆರ್‌ಪಿ ಡೇಟಾ ಹೊರಬಿದ್ದಿದೆ. ಮೊದಲ ವಾರ ಲಕ್ಷ್ಮೀ ನಿವಾಸ ಟಾಪ್ 1 ಧಾರಾವಾಹಿಯಾಗಿತ್ತು. ಅದಾದ ಮೇಲೆ ಎರಡನೇ ವೀಕ್‌ನಲ್ಲಿ ಅಣ್ಣಯ್ಯ ಆ ಸ್ಥಾನ ಪಡೆಯಿತು. ಇದೀಗ ಮೂರನೇ ವಾರ ಶ್ರಾವಣಿ ಸುಬ್ರಮಣ್ಯ ಹೆಚ್ಚು ಟಿಆರ್‌ಪಿ ಪಡೆದು ಮೊದಲ ಸ್ಥಾನಕ್ಕೆ ಬಂದಿದೆ. ಹಾಗಾದರೆ, ಟಾಪ್ 10 ಸೀರಿಯಲ್‌ಗಳು ಯಾವವು? ಇಲ್ಲಿದೆ ಮಾಹಿತಿ.
(1 / 11)
Kannada Serial TRP Week 3: ಟಿಆರ್‌ಪಿ ಲೆಕ್ಕಾಚಾರದಲ್ಲಿ ಕನ್ನಡದ ಟಾಪ್ ಹತ್ತು ಸೀರಿಯಲ್‌ಗಳು ಯಾವವು? ಜೀ ಕನ್ನಡದ ಧಾರಾವಾಹಿಗಳೆಷ್ಟು, ಕಲರ್ಸ್ ಕನ್ನಡದ ಧಾರಾವಾಹಿಗಳೆಷ್ಟು? ಇಲ್ಲಿದೆ ವಿವರ.
(2 / 11)
ಶ್ರಾವಣಿ ಸುಬ್ರಮಣ್ಯ: ಜೀ ಕನ್ನಡದ ಯುವ ಜೋಡಿಯ ನವಿರು ಕಥೆ ಶ್ರಾವಣಿ ಸುಬ್ರಮಣ್ಯ. ಮದುವೆ ವಿಚಾರವಾಗಿ ಸುದ್ದಿಯಲ್ಲಿರುವ ಈ ಸೀರಿಯಲ್ ಇದೀಗ ಮೂರನೇ ವಾರದ ಟಿಆರ್‌ಪಿಯಲ್ಲಿ ಟಾಪ್ ಬಂದಿದೆ. 8.8 ರೇಟಿಂಗ್ ಪಡೆದು ಮೊದಲ ಸ್ಥಾನದಲ್ಲಿದೆ.
(3 / 11)
ಲಕ್ಷ್ಮೀ ನಿವಾಸ: ಜೀ ಕನ್ನಡದಲ್ಲಿ ಒಂದು ಗಂಟೆಯ ಅವಧಿಯ ಹಿಟ್ ಸೀರಿಯಲ್ ಲಕ್ಷ್ಮೀ ನಿವಾಸ, ಸದಾ ಮೊದಲ ಸ್ಥಾನದಲ್ಲಿಯೇ ಇರುತ್ತಿತ್ತು. ಇದೀಗ ಇತ್ತೀಚಿನ ಕೆಲ ವಾರಗಳಿಂದ ಅದೇ ಸೀರಿಯಲ್‌ಗೆ ಟಫ್ ಕಾಂಪಿಟೇಷನ್ ನೀಡುತ್ತಿವೆ ಹಲವು ಸೀರಿಯಲ್. ಅದರಂತೆ ಮೂರನೇ ವಾರ ಈ ಸೀರಿಯಲ್‌ಗೆ 8.4 ರೇಟಿಂಗ್ ಸಿಕ್ಕಿದ್ದು ಎರಡನೇ ಸ್ಥಾನದಲ್ಲಿದೆ.
(4 / 11)
ಅಣ್ಣಯ್ಯ : ಜೀ ಕನ್ನಡದ ಪ್ರಮುಖ ಧಾರಾವಾಹಿ ಎನಿಸಿಕೊಂಡಿರುವ ಅಣ್ಣಯ್ಯ, ಎರಡನೇ ವಾರದ ಟಾಪ್ ಸೀರಿಯಲ್ ಆಗಿತ್ತು. ಇದೀಗ ಮೂರನೇ ವಾರ ಈ ಸೀರಿಯಲ್ 8.2 ಟಿಆರ್‌ಪಿ ರೇಟಿಂಗ್ ಪಡೆದು ಮೂರನೇ ಸ್ಥಾನಕ್ಕೆ ಕುಸಿದಿದೆ.
(5 / 11)
ಅಮೃತಧಾರೆ: ಅಮೃತಧಾರೆ ಸೀರಿಯಲ್ ಸದ್ಯ ಕಿರುತೆರೆ ವೀಕ್ಷಕರ ಸೆನ್ಸೆಷನ್ ಆಗಿ ಬದಲಾಗಿದೆ. ಅಚ್ಚರಿಯ ಕಥೆ, ಬೆರಗುಗೊಳಿಸುವ ಟ್ವಿಸ್ಟ್‌ಗಳಿಂದ ನೋಡುಗರ ಗಮನ ಸೆಳೆದಿದೆ. ಈಗ ಇದೇ ಸೀರಿಯಲ್ 7.9 ಟಿಆರ್‌ಪಿ ಪಡೆದು, ನಾಲ್ಕನೇ ಸ್ಥಾನದಲ್ಲಿದೆ.
(6 / 11)
ಪುಟ್ಟಕ್ಕನ ಮಕ್ಕಳು; ಜೀ ಕನ್ನಡದ ಹಳೇ ಸೀರಿಯಲ್ ಪುಟ್ಟಕ್ಕನ ಮಕ್ಕಳು, ಹೊಸ ಸೀರಿಯಲ್‌ಗಳ ಜತೆಗೆ ಸ್ಪರ್ಧೆಗೆ ಇಳಿದಿದೆ. ಆದರೂ, ಮೊದಲಿನಂತೆ ಟಿಆರ್‌ಪಿ ಏರಿಕೆಯಾಗುತ್ತಿಲ್ಲ. ಅಂದಹಾಗೆ ಎರಡನೇ ವಾರ ಈ ಸೀರಿಯಲ್ 6.0 ಟಿಆಆರ್‌ಪಿ ಪಡೆದು ಐದನೇ ಸ್ಥಾನದಲ್ಲಿದೆ.
(7 / 11)
ಸೀತಾ ರಾಮ; ಜೀ ಕನ್ನಡದ ಸೀತಾ ರಾಮ ಸೀರಿಯಲ್ ಮೂರನೇ ವಾರದ ಟಿಆರ್‌ಪಿಯಲ್ಲಿ 5.9 ರೇಟಿಂಗ್ ಪಡೆವ ಮೂಲಕ ಆರನೇ ಸ್ಥಾನದಲ್ಲಿದೆ. ಎರಡನೇ ವಾರದ ಟಿಆರ್‌ಪಿಯಲ್ಲೂ ಇಷ್ಟೇ ಟಿಆರ್‌ಪಿ ಪಡೆದಿತ್ತು ಈ ಸೀರಿಯಲ್.
(8 / 11)
ರಾಮಾಚಾರಿ: ಟಾಪ್ ಐದರಲ್ಲಿ ಕಲರ್ಸ್ ಕನ್ನಡದ ರಾಮಾಚಾರಿ ಸೀರಿಯಲ್ ಸ್ಥಾನ ಪಡೆದುಕೊಂಡಿದೆ. ಈ ಸೀರಿಯಲ್ 5.4 ರೇಟಿಂಗ್ ಪಡೆದು ಏಳನೇ ಸ್ಥಾನದಲ್ಲಿದೆ.
(9 / 11)
ಭಾಗ್ಯಲಕ್ಷ್ಮೀ: ಕಲರ್ಸ್ ಕನ್ನಡದ ಭಾಗ್ಯಲಕ್ಷ್ಮೀ ಸೀರಿಯಲ್ ಟಿಆರ್‌ಪಿಯಲ್ಲಿ ಕುಸಿತ ಕಂಡಿದೆ. ಈ ಸೀರಿಯಲ್ 5.3 ರೇಟಿಂಗ್ ಪಡೆದು ಎಂಟನೇ ಸ್ಥಾನದಲ್ಲಿದೆ.
(10 / 11)
ಲಕ್ಷ್ಮೀ ಬಾರಮ್ಮ: ಕಲರ್ಸ್ ಕನ್ನಡದ ಲಕ್ಷ್ಮೀ ಬಾರಮ್ಮ ಧಾರಾವಾಹಿ ಈ ತಿಂಗಳ ಎರಡನೇ ವಾರದಲ್ಲಿ 5.1 ಟಿಆರ್‌ಪಿ ಪಡೆವ ಮೂಲಕ ಒಂಭತ್ತನೇ ಸ್ಥಾನದಲ್ಲಿದೆ.
ಇತರ ಗ್ಯಾಲರಿಗಳು