ಸಿನಿಮಾಗಳಲ್ಲಿ ದಕ್ಕದ ಯಶಸ್ಸು, ಕಿರುತೆರೆಗೆ ಮರಳಿದ ಮೇಘಾ ಶೆಟ್ಟಿ; ಸೀರಿಯಲ್‌ ನಿರ್ಮಾಣದ ಜೊತೆ, ವಿಶೇಷ ಪಾತ್ರದಲ್ಲಿಯೂ ಮಿಂಚು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸಿನಿಮಾಗಳಲ್ಲಿ ದಕ್ಕದ ಯಶಸ್ಸು, ಕಿರುತೆರೆಗೆ ಮರಳಿದ ಮೇಘಾ ಶೆಟ್ಟಿ; ಸೀರಿಯಲ್‌ ನಿರ್ಮಾಣದ ಜೊತೆ, ವಿಶೇಷ ಪಾತ್ರದಲ್ಲಿಯೂ ಮಿಂಚು

ಸಿನಿಮಾಗಳಲ್ಲಿ ದಕ್ಕದ ಯಶಸ್ಸು, ಕಿರುತೆರೆಗೆ ಮರಳಿದ ಮೇಘಾ ಶೆಟ್ಟಿ; ಸೀರಿಯಲ್‌ ನಿರ್ಮಾಣದ ಜೊತೆ, ವಿಶೇಷ ಪಾತ್ರದಲ್ಲಿಯೂ ಮಿಂಚು

  • Megha Shetty: ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ಮತ್ತೆ ಕಿರುತೆರೆಯತ್ತ ಮುಖ ಮಾಡಿದ್ದಾರೆ. ಸಿನಿಮಾಗಳಲ್ಲಿ ಹೇಳಿಕೊಳ್ಳದ ಯಶಸ್ಸು ಸಿಗದ ಕಾರಣ, ಇದೀಗ ಧಾರಾವಾಹಿ ನಿರ್ಮಾಣದತ್ತ ಮನಸ್ಸು ಮಾಡಿದ್ದಾರೆ. ಜೊತೆಗೆ ಅತಿಥಿ ಪಾತ್ರದಲ್ಲಿ ನಟನೆ ಕೂಡ ಮಾಡಲಿದ್ದಾರೆ.

ನಟಿ ಮೇಘಾ ಶೆಟ್ಟಿ ಜೀ ಕನ್ನಡದ ‘ಜೊತೆ ಜೊತೆಯಲಿ‘ ಧಾರಾವಾಹಿ ಮೂಲಕ ಖ್ಯಾತಿ ಪಡೆದವರು. ನಂತರ ಹಿರಿತೆರೆಯತ್ತ ಮುಖ ಮಾಡುವ ಅವರು ‘ತ್ರಿಪಲ್ ರೈಡಿಂಗ್‘ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶ ಮಾಡುತ್ತಾರೆ. ಈಗಾಗಲೇ 3 ಸಿನಿಮಾಗಳಲ್ಲಿ ನಟಿಸಿದ್ದು, ಇನ್ನೂ 3 ಚಿತ್ರಗಳು ಅವರ ಕೈಯಲ್ಲಿವೆ. ಆದರೆ ಇವರಿಗೆ ಸಿನಿಮಾಗಳಿಂದ ಹೇಳಿಕೊಳ್ಳುವ ಯಶಸ್ಸು ಸಿಕ್ಕಿಲ್ಲ ಅನ್ನೋದು ಸತ್ಯ. ಇದೀಗ ಮೇಘಾ ಪುನಃ ಕಿರುತೆರೆಯತ್ತ ಮುಖ ಮಾಡಿದ್ದಾರೆ.
icon

(1 / 8)

ಈ ಬಾರಿ ಮೇಘಾ ಶೆಟ್ಟಿ ನಟಿಸುವುದರ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿ‌ದ್ದಾರೆ. ಮೇಘಾ ಶೆಟ್ಟಿ ನಿರ್ಮಾಣದ ಧಾರಾವಾಹಿ ಇಂದಿನಿಂದಲೇ (ಏಪ್ರಿಲ್ 14)ಪ್ರಸಾರವಾಗಲಿದೆ. ಯಾವುದು ಅಂತ ಈಗ ನಿಮಗೆ ಗೊತ್ತಾಗಿರಬಹುದು ಅಲ್ವಾ? ಹೌದು ನಟಿ ಮೇಘಾ ಶೆಟ್ಟಿ ನಿರ್ಮಾಣದ ಧಾರಾವಾಹಿ ಮುದ್ದು ಸೊಸೆ. ಇದು ಕಲರ್ಸ್‌ ಕನ್ನಡದಲ್ಲಿ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.
icon

(2 / 8)

ಮುದ್ದು ಸೊಸೆ ನಿರ್ಮಾಣದ ಜೊತೆ ಇದರಲ್ಲಿ ನಟಿಸುತ್ತಿದ್ದಾರೆ ಮೇಘಾ ಶೆಟ್ಟಿ. ಈ ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಮಿಂಚಲಿದ್ದಾರೆ ಕರಾವಳಿ ಬೆಡಗಿ. ಹಾಗಂತ ಇವರೇನು ಸಂಪೂರ್ಣ ಧಾರಾವಾಹಿಯಲ್ಲಿ ಇರುವುದಿಲ್ಲ. ಧಾರಾವಾಹಿ ಆರಂಭದಲ್ಲಿ ಮೇಘಾ ಶೆಟ್ಟಿ ಮುಂದು ಹೋಗಲಿದ್ದಾರೆ ಎನ್ನಲಾಗುತ್ತಿದೆ.
icon

(3 / 8)

ಒಂದೇ ಒಂದು ಧಾರಾವಾಹಿಯಲ್ಲಿ ನಟಿಸಿ ಸಖತ್ ಫೇಮಸ್ ಆದ ಮೇಘಾ ಶೆಟ್ಟಿ ಈಗ ಬಹು ಬೇಡಿಕೆಯ ನಟಿ. ಇದೀಗ ಆಕೆ ಧಾರಾವಾಹಿ ನಿರ್ಮಾಣದ ಹೊಣೆಯನ್ನು ಹೊತ್ತಿದ್ದು, ಮುದ್ದು ಸೊಸೆ ಧಾರಾವಾಹಿ ಮೇಲೆ ನಿರೀಕ್ಷೆ ಹೆಚ್ಚುವಂತೆ ಮಾಡಿದ್ದಾರೆ.
icon

(4 / 8)

ಅಷ್ಟೇ ಅಲ್ಲದೇ ಈ ಸುಂದರಿ ಮರಾಠಿ ಹಾಗೂ ಕನ್ನಡದಲ್ಲಿ ನಿರ್ಮಾಣವಾಗುತ್ತಿರುವ ಆಫ್ಟರ್ ಆಪರೇಷನ್ ಲಂಡನ್ ಕೆಫೆ ಎನ್ನುವ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಆ ಮೂಲಕ ಅವರು ಮರಾಠಿ ಚಿತ್ರರಂಗಕ್ಕೂ ಕಾಲಿರಿಸುತ್ತಿದ್ದಾರೆ. ಇದರ ಜೊತೆ ಚೀತಾ ಹಾಗೂ ಗ್ರಾಮಾಯಣ ಎಂಬ 2 ಕನ್ನಡ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ.
icon

(5 / 8)

ಮಂಗಳೂರು ಮೂಲದ ಮೇಘಾ ಶೆಟ್ಟಿ ಬೆಂಗಳೂರಿನಲ್ಲಿ ನೆಲೆಸಿದವರು. ಜೊತೆ ಜೊತೆಯಲಿ ಧಾರಾವಾಹಿ ಅನು ಪಾತ್ರದ ಮೂಲಕ ಸಾಕಷ್ಟು ಖ್ಯಾತಿ ಗಳಿಸಿದ ಇವರು ಕನ್ನಡ ಜನತೆಗೆ ಮನೆಮಗಳಂತಾಗುತ್ತಾರೆ.
icon

(6 / 8)

ಧಾರಾವಾಹಿ ನಿರ್ಮಾಣದ ಮೂಲಕ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಮೇಘಾ ಶೆಟ್ಟಿಗೆ ಯಶಸ್ಸು ಸಿಗುತ್ತಾ, ಮುದ್ದು ಸೊಸೆಯನ್ನು ಕನ್ನಡ ಜನತೆ ಮೆಚ್ಚುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಮೇಘಾ ಈಗಾಗಲೇ ಗೌರಿಶಂಕರ, ಕೆಂಡಸಂಪಿಗೆ ಸೀರಿಯಲ್‌ ನಿರ್ಮಾಣ ಮಾಡಿದ್ದಾರೆ.
icon

(7 / 8)

ಮುದ್ದು ಸೊಸೆ ಧಾರಾವಾಹಿಯಲ್ಲಿ ಬಿಗ್‌ಬಾಸ್ ಖ್ಯಾತಿ ತ್ರಿವಿಕ್ರಮ್ ನಾಯಕನಾಗಿ ನಟಿಸುತ್ತಿದ್ದಾರೆ. ಅಂತರಪಟ, ದೊರೆಸಾನಿ ಸೀರಿಯಲ್‌ಗಳಲ್ಲಿ ನಟಿಸಿರುವ ಪ್ರತಿಮಾ ಈ ಧಾರಾವಾಹಿಗೆ ನಾಯಕಿ. ಪ್ರತಿಮಾ ಅಮ್ಮನ ಪಾತ್ರದಲ್ಲಿ ಹರಿಣಿ ಶ್ರೀಕಾಂತ್‌ ನಟಿಸುತ್ತಿದ್ದಾರೆ.
icon

(8 / 8)

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು