ಕನ್ನಡ ಕಿರುತೆರೆ ಮನೆ ಮಾತಾದ ಬ್ಲ್ಯಾಕ್ ರೋಸ್ ನಿಜವಾದ ಹೆಸರು, ಹಿನ್ನೆಲೆಯೇನು; ಕರಿಮಣಿ ಧಾರಾವಾಹಿಯ ಅರುಂಧತಿ ಪರಿಚಯ
- ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕರಿಮಣಿ ಧಾರಾವಾಹಿಯ ಬ್ಲ್ಯಾಕ್ ರೋಸ್ ಈಗ ಸಖತ್ ಫೇಮಸ್. ಕರ್ಣನ ಮಲತಾಯಿ ಅರುಂಧತಿಯೇ ಬ್ಲ್ಯಾಕ್ ರೋಸ್ ಅನ್ನೋದು ರಿವಿಲ್ ಆಗಿದೆ. ಈ ಬ್ಲ್ಯಾಕ್ ರೋಸ್ ಪಾತ್ರ ಮಾಡುತ್ತಿರುವವರ ನಿಜವಾದ ಹೆಸರೇನು, ಅವರ ಹಿನ್ನೆಲೆಯೇನು?
- ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕರಿಮಣಿ ಧಾರಾವಾಹಿಯ ಬ್ಲ್ಯಾಕ್ ರೋಸ್ ಈಗ ಸಖತ್ ಫೇಮಸ್. ಕರ್ಣನ ಮಲತಾಯಿ ಅರುಂಧತಿಯೇ ಬ್ಲ್ಯಾಕ್ ರೋಸ್ ಅನ್ನೋದು ರಿವಿಲ್ ಆಗಿದೆ. ಈ ಬ್ಲ್ಯಾಕ್ ರೋಸ್ ಪಾತ್ರ ಮಾಡುತ್ತಿರುವವರ ನಿಜವಾದ ಹೆಸರೇನು, ಅವರ ಹಿನ್ನೆಲೆಯೇನು?
(1 / 7)
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಪ್ರಸಿದ್ಧ ಧಾರಾವಾಹಿ ‘ಕರಿಮಣಿ‘ಯ ಬ್ಲ್ಯಾಕ್ ರೋಸ್ ಕನ್ನಡ ಕಿರುತೆರೆ ಪ್ರೇಕ್ಷಕ ಬಳಗದಲ್ಲಿ ಸಖತ್ ಫೇಮಸ್. ಒಂದಿಷ್ಟು ತಿಂಗಳುಗಳ ಕಾಲ ಮರೆಯಲ್ಲಿದ್ದ ಬ್ಲ್ಯಾಕ್ ರೋಸ್ ಯಾರು ಅನ್ನೋದು ರಿವೀಲ್ ಆಗಿ ಕೆಲವು ದಿನಗಳು ಕಳೆದಿವೆ. ಕರಿಮಣಿ ಧಾರಾವಾಹಿಯ ಕರ್ಣನ ಮಲತಾಯಿ ಅರುಂಧತಿಯೇ ಬ್ಲ್ಯಾಕ್ ರೋಸ್. ಬ್ಲ್ಯಾಕ್ ರೋಸ್ ಎಂಬ ಖಳನಾಯಕಿ, ಅರುಂಧತಿ ಎಂಬ ಮುಗ್ಧ ತಾಯಿ ಈ ಎರಡೂ ಪಾತ್ರಕ್ಕೆ ಜೀವ ತುಂಬುತ್ತಿರುವ ನಟಿಯ ನಿಜವಾದ ಹೆಸರೇನು ಅವರ ಹಿನ್ನೆಲೆ ಏನು ಎಂಬ ಕುತೂಹಲ ನಿಮಗೂ ಇರಬಹುದು. ಅವರ ಕುರಿತ ವಿವರ ಇಲ್ಲಿದೆ.
(2 / 7)
ನೃತ್ಯಕ್ಕೆ ಆಡಿಷನ್ ಕೊಡಲು ಹೋದ ಇವರು ಧಾರಾವಾಹಿಗೆ ಆಯ್ಕೆಯಾಗುತ್ತಾರೆ. ಸುವರ್ಣ ವಾಹಿನಿಯ ದುರ್ಗಾ ಧಾರಾವಾಹಿಯಲ್ಲಿ ಇವರು ಮೊದಲ ಬಾರಿಗೆ ನಟಿಸುತ್ತಾರೆ. ನಂತರ ಕಲರ್ಸ್ ಕನ್ನಡದ ಅಗ್ನಿಸಾಕ್ಷಿಯ ರಾಧಿಕಾ ಪಾತ್ರ ಇವರಿಗೆ ಸಾಕಷ್ಟು ಹೆಸರು ತಂದುಕೊಡುತ್ತದೆ. ಸುಬ್ಬಲಕ್ಷ್ಮೀ ಸಂಸಾರ, ದೊಡ್ಮನೆ ಸೊಸೆ ಧಾರಾವಾಹಿಗಳಲ್ಲೂ ನಟಿಸಿದ್ದಾರೆ ಅನುಷಾರಾವ್.
(3 / 7)
ಕಿರುತೆರೆ ಮಾತ್ರವಲ್ಲದೇ ಸಿನಿಮಾಗಳಲ್ಲೂ ಬಣ್ಣ ಹಚ್ಚಿ ಸೈ ಎನ್ನಿಸಿಕೊಂಡಿರುವ ಅನುಷಾ ರಾವ್ ಮನರೂಪ ಹಾಗೂ ಚಿತ್ರಕಥಾ ಎಂಬ 2 ಸಿನಿಮಾಗಳಲ್ಲೂ ನಟಿಸಿದ್ದಾರೆ.
(4 / 7)
ಕನ್ನಡ ಮಾತ್ರವಲ್ಲದೇ ತೆಲುಗು ಧಾರಾವಾಹಿಗಳಲ್ಲೂ ನಟಿಸಿರುವ ಇವರಿಗೆ ಅಲ್ಲೂ ಸಾಕಷ್ಟು ಅಭಿಮಾನಿಗಳಿದ್ದಾರೆ. ಈ ನಡುವೆ ಕನ್ನಡದಲ್ಲಿ ಇವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿದ್ದು ಕರಿಮಣಿ ಧಾರಾವಾಹಿ.
(5 / 7)
ಮಲತಾಯಿಯೊಬ್ಬಳು ಹೀಗೂ ಇರಲು ಸಾಧ್ಯವೇ ಎನ್ನುವಷ್ಟು ಚೆನ್ನಾಗಿರುವ ಅರುಂಧತಿ ಪಾತ್ರದಲ್ಲಿ ನಟಿಸಿರುವ ಇವರು, ಬ್ಲ್ಯಾಕ್ ರೋಸ್‌ನಂತಹ ಖಳನಾಯಕಿ ಪಾತ್ರಕ್ಕೂ ಸಹಿ ಎನ್ನಿಸಿಕೊಂಡಿದ್ದಾರೆ. ಒಂದೇ ಧಾರಾವಾಹಿಯಲ್ಲಿ 2 ಪಾತ್ರಗಳನ್ನು ನಿರ್ವಹಿಸುತ್ತಿರುವ ಇವರ ನಟನೆಗೆ ಜನ ಫಿದಾ ಆಗಿದ್ದಾರೆ.
(6 / 7)
ಬ್ಲ್ಯಾಕ್ ರೋಸ್ ಯಾರು ಎಂಬುದು ರಿವೀಲ್ ಆದ ಮೇಲೆ ಜನರು ಅನುಷಾ ರಾವ್ ನಟನೆಗೆ ಬಹುಪರಾಕ್ ಹೇಳುತ್ತಿದ್ದಾರೆ. ಈ ಅದ್ಭುತ ನಟಿಯ ಗಂಡ ಕೂಡ ಸಿನಿಮಾರಂಗದಲ್ಲೇ ಕೆಲಸ ಮಾಡುತ್ತಾರೆ. ಅವರ ಹೆಸರು ಮನೋಹರ್. ಅವರು ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ.
ಇತರ ಗ್ಯಾಲರಿಗಳು