Lakshmi Baramma: ಲಕ್ಷ್ಮೀ ಬಾರಮ್ಮ ಧಾರಾವಾಹಿ ಅಂತ್ಯವಾದ್ರೂ ವೀಕ್ಷಕರನ್ನು ಕಾಡುತ್ತಿದೆ ಆ ಒಂದು ಕಟ್ಟ ಕಡೆಯ ಪ್ರಶ್ನೆ
- Lakshmi Baramma Serial: ಕಲರ್ಸ್ ಕನ್ನಡದ ಟಾಪ್ ಧಾರಾವಾಹಿ ಲಕ್ಷ್ಮೀ ಬಾರಮ್ಮ ಅಂತ್ಯವಾಗಿ ಕೆಲವು ದಿನ ಕಳೆದರೂ ಆ ಒಂದು ಡೌಟ್ ಮಾತ್ರ ವೀಕ್ಷಕರ ಮನದಲ್ಲಿ ಹಾಗೆ ಉಳಿದು ಹೋಗಿದೆ. ಈಗಲೂ ಪ್ರೇಕ್ಷಕರ ಮನದಲ್ಲಿ ಆ ಪ್ರಶ್ನೆ ಕಾಡುತ್ತಲೇ ಇದೆ.
- Lakshmi Baramma Serial: ಕಲರ್ಸ್ ಕನ್ನಡದ ಟಾಪ್ ಧಾರಾವಾಹಿ ಲಕ್ಷ್ಮೀ ಬಾರಮ್ಮ ಅಂತ್ಯವಾಗಿ ಕೆಲವು ದಿನ ಕಳೆದರೂ ಆ ಒಂದು ಡೌಟ್ ಮಾತ್ರ ವೀಕ್ಷಕರ ಮನದಲ್ಲಿ ಹಾಗೆ ಉಳಿದು ಹೋಗಿದೆ. ಈಗಲೂ ಪ್ರೇಕ್ಷಕರ ಮನದಲ್ಲಿ ಆ ಪ್ರಶ್ನೆ ಕಾಡುತ್ತಲೇ ಇದೆ.
(1 / 8)
ಸುಮಾರು 2 ವರ್ಷಗಳ ಕಾಲ ಪ್ರಸಾರವಾಗಿ ಪ್ರೇಕ್ಷಕರನ್ನು ರಂಜಿಸಿದ್ದ ಲಕ್ಷ್ಮೀ ಬಾರಮ್ಮ ಧಾರಾವಾಹಿ ಏಪ್ರಿಲ್ 11ಕ್ಕೆ ಮುಕ್ತಾಯಗೊಂಡಿದೆ. ಕಾವೇರಿಯ ಅಂತ್ಯದ ಜೊತೆಗೆ ಲಕ್ಷ್ಮೀ ಸೀಮಂತ ಕೂಡ ನೆರವೇರುವ ಮೂಲಕ ಧಾರಾವಾಹಿಗೆ ಅಂತ್ಯ ಹಾಡಲಾಗಿತ್ತು.
(2 / 8)
ಕಲರ್ಸ್ ಕನ್ನಡದ ಟಾಪ್ ಧಾರಾವಾಹಿಗಳಲ್ಲಿ ಒಂದಾಗಿದ್ದ ಲಕ್ಷ್ಮೀ ಬಾರಮ್ಮ ಟಿಆರ್‌ಪಿಯಲ್ಲಿ ಸದಾ ಟಾಪ್‌ನಲ್ಲಿ ಇರುತ್ತಿತ್ತು. ಲಕ್ಷ್ಮೀ–ವೈಷ್ಣವ್ ಜೋಡಿಯ ಜೊತೆಗೆ ಕೀರ್ತಿಯ ಅಭಿನಯವು ಕಿರುತೆರೆ ಪ್ರೇಕ್ಷಕರ ಮೇಲೆ ಮೋಡಿ ಮಾಡಿತ್ತು.
(3 / 8)
ಟಿಆರ್‌ಪಿ ಚೆನ್ನಾಗಿ ಇದ್ದರೂ ಕೂಡ ಇದ್ದಕ್ಕಿದ್ದ ಹಾಗೆ ಧಾರಾವಾಹಿ ಮುಗಿಸುವ ನಿರ್ಧಾರ ಮಾಡಿತ್ತು ವಾಹಿನಿ. ಕಾವೇರಿ ಅಟ್ಟಹಾಸ ನೋಡಲಾಗದ ವೀಕ್ಷಕರಿಗೆ ಅವಳ ಅಂತ್ಯವನ್ನು ತೋರಿಸಲಾಗಿತ್ತು. ಇದರೊಂದಿಗೆ ಟ್ವಿಸ್ಟ್ ಎಂಬಂತೆ ಲಕ್ಷ್ಮೀ ಗರ್ಭಿಣಿಯಾಗಿದ್ದು ಸೀಮಂತ ಕಾರ್ಯಕ್ರಮ ಕೂಡ ನೆರವೇರಿತ್ತು.
(4 / 8)
ಲಕ್ಷ್ಮೀ ಬಾರಮ್ಮ ಮುಗಿದು, ಆ ಹೊತ್ತಿಗೆ ಮುದ್ದು ಸೊಸೆ ಧಾರಾವಾಹಿ ಪ್ರಸಾರವಾಗಲು ಆರಂಭವಾದರೂ ಕೂಡ ಕಿರುತೆರೆ ವೀಕ್ಷಕರಿಗೆ ಆ ಒಂದು ಅನುಮಾನ ಇನ್ನೂ ಕಾಡುತ್ತಿದೆ. ಈ ಪ್ರಶ್ನೆಗೆ ಉತ್ತರ ಸಿಗದೇ ಜನರು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ. ಹಾಗಾದರೆ ಅಂಥದೇನು ಡೌಟ್ ಅಂತೀರಾ.
(5 / 8)
ವೀಕ್ಷಕರಿಗಿರುವ ಪ್ರಶ್ನೆ ಏನಂದ್ರೆ ‘ಸುಪ್ರಿತಾ ಗಂಡ ಯಾರು?‘ ಅನ್ನೋದು. ಧಾರಾವಾಹಿ ಮುಗಿದ್ರು ಸುಪ್ರಿತಾ ಗಂಡ ಯಾರಿರಬಹುದು ಎಂದು ಜನ ತಲೆ ಕೆಡಿಸಿಕೊಳ್ಳೋದು ನಿಲ್ಲಿಸಿಲ್ಲ. ಮಾತ್ರವಲ್ಲ ಧಾರಾವಾಹಿ ಅಂತ್ಯವಾಗುವವರೆಗೂ ಸುಪ್ರಿತಾ ಗಂಡ ಯಾರು ಎಂದು ತೋರಿಸದೇ ಇರುವುದಕ್ಕೆ ಲಕ್ಷ್ನೀ ಬಾರಮ್ಮ ನಿರ್ದೇಶಕರ ಮೇಲೆ ಅಭಿಮಾನಿಗಳು ಬೇಸರ ಹೊರ ಹಾಕುತ್ತಿದ್ದಾರೆ.
(6 / 8)
‘ವೀಕ್ಷಕರ ಮನದಲ್ಲಿ ಉಳಿದ ಕಟ್ಟ ಕಡೆಯ ಪ್ರಶ್ನೆ, ಸುಪ್ರಿತಾ ಗಂಡ ಯಾರು? ಎಂದಿಗೂ ಉತ್ತರ ಸಿಗದ ಪ್ರಶ್ನೆಯನ್ನು ಉಳಿಸಿಹೋದ ಲಕ್ಷ್ಮೀ ಬಾರಮ್ಮ ಸೀರಿಯಲ್‘ ಎಂಬ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
(7 / 8)
ಈ ಪೋಸ್ಟ್‌ಗೆ ಕ್ಲೈಮ್ಯಾಕ್ಸ್ ಸರಿಯಾಗಿಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ರೆ, ಇನ್ನೂ ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಸುಪ್ರಿತಾ ಗಂಡ ಮಾತ್ರವಲ್ಲ ಕೀರ್ತಿ ಅಪ್ಪ ರಘುವೀರ್ ಯಾರು ಅನ್ನೋದು ಕೂಡ ಗೊತ್ತಾಗಿಲ್ಲ ಎಂದು ಕಾಮೆಂಟ್ ಹಾಕಿದ್ದಾರೆ.
ಇತರ ಗ್ಯಾಲರಿಗಳು