ಮನೆಯಲ್ಲಿ ಕೂತಿದ್ದರೆ ದೈವಿಕ ಅನುಭವ ಸಿಗ್ತಿರ್ಲಿಲ್ಲ; ಮಹಾಕುಂಭ ಮೇಳದಲ್ಲಿ ಮಿಂದೆದ್ದ ಆಂಕರ್ ಅನುಶ್ರೀ, ರಾಜ್ ಬಿ ಶೆಟ್ಟಿ
- Maha Kumbh Mela 2025: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಮಹಾಕುಂಭ ಮೇಳದ ಸಂಭ್ರಮ ಶುರುವಾಗಿದೆ. ಈಗಅದೇ ಕುಂಭಮೇಳದಲ್ಲಿ ಸ್ಯಾಂಡಲ್‌ವುಡ್ ನಟ ರಾಜ್ ಬಿ ಶೆಟ್ಟಿ, ನಿರೂಪಕಿ ಅನುಶ್ರೀ ಸಹ ಭಾಗವಹಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ.

(1 / 6)
144 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭ ಮೇಳದಲ್ಲಿ ಕೋಟಿ ಕೋಟಿ ಜನ ಪುಣ್ಯ ಸ್ನಾನ ಮಾಡಿ ಪುನೀತರಾಗಿದ್ದಾರೆ.
(instagram)(2 / 6)
ದೇಶದ ಹತ್ತಾರು ರಾಜ್ಯಗಳಿಂದ ಕೋಟಿ ಕೋಟಿ ಭಕ್ತರು ಪ್ರಯಾಗ್ ರಾಜ್‌ನತ್ತ ತೆರಳುತ್ತಿದೆ. ಕರ್ನಾಟಕದಿಂದಲೂ ಲಕ್ಷ ಲಕ್ಷ ಮಂದಿ ತೆರಳಿದ್ದಾರೆ
(3 / 6)
ಹೀಗಿರುವಾಗಲೇ ಇದೇ ಕುಂಭ ಮೇಳಕ್ಕೆ ಸ್ಯಾಂಡಲ್‌ವುಡ್‌ನ ಸೆಲೆಬ್ರಿಟಿಗಳೂ ತೆರಳಿ, ಸಂಗಮದಲ್ಲಿ ಮಿಂದೆದ್ದು ಬಂದಿದ್ದಾರೆ.
(4 / 6)
ಇದೀಗ ನಟಿ, ನಿರೂಪಕಿ ಆಂಕರ್ ಅನುಶ್ರೀ ಮತ್ತು ನಟ ರಾಜ್ ಬಿ ಶೆಟ್ಟಿ, ನಿರ್ದೇಶಕ ಕಿರಣ್ ರಾಜ್ ಸಹ ಪ್ರಯಾಗ್ ರಾಜ್‌ಗೆ ಭೇಟಿ ನೀಡಿದ್ದಾರೆ.
(5 / 6)
ಕುಂಭಮೇಳದಲ್ಲಿ ಮಿಂದೆದ್ದು ಅಲ್ಲಿನ ಒಂದಷ್ಟು ನೆನಪುಗಳನ್ನು ಫೋಟೋ ಸಮೇತ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
(6 / 6)
ಈ ಬಗ್ಗೆ ಪೋಸ್ಟ್ ಹಂಚಿಕೊಂಡ ಅನುಶ್ರೀ, "ಸಂಗಮದಲ್ಲಿ ಮಿಂದು... ಕಣ್ಣುಗಳು ನೆಂದು .. ಭಗವಂತ ನೀನೆ ನಮಗೆಲ್ಲ ಅಂದು ಇಂದು ಇನ್ನೆಂದೆಂದು ಎಂದು ... ಬಂದು ಕೂತಾಗ ಮನಸ್ಸಿಗೆ ಸಿಕ್ಕ ನೆಮ್ಮದಿ ಸಿಗದು ಎಂದೆಂದು !!! ಕೋಟಿ ಜನ ಸೇರೋ ಜಾಗ ..ಸಿಕ್ಕಾಪಟ್ಟೆ ಕಷ್ಟ ಯಾಕೆ ಬೇಕು ನಮಗೆ ಅಂತ ಮನೆಯಲ್ಲಿ ಕೂತಿದ್ದ್ರೆ ಈ ದೈವಿಕ ಅನುಭವ ಸಿಗ್ತಿರ್ಲಿಲ್ಲ !!!! 29/01/2025 ಮೌನಿ ಅಮಾವಾಸ್ಯ .... ಹರ ಹರ ಮಹದೇವ್ !!!!"
ಇತರ ಗ್ಯಾಲರಿಗಳು