ʻಆ ವ್ಯಕ್ತಿ ಸೂಟ್‌ಕೇಸ್ ತುಂಬ ಹಣ ತಂದು, ಒಂದು ರಾತ್ರಿ ಬಾ ಅಂದಿದ್ದʼ ಕಾಮಿಡಿ ಕಿಲಾಡಿ ಸಂಜು ಬಸಯ್ಯ ಪತ್ನಿ ಪಲ್ಲವಿಗಾದ ಕೆಟ್ಟ ಅನುಭವ
ಜೀ ಕನ್ನಡದ ಕಾಮಿಡಿ ಕಿಲಾಡಿಗಳು ಶೋ ಮೂಲಕ ನಾಡಿನ ತುಂಬ ಗುರುತಿಸಿಕೊಂಡವರು ಉತ್ತರ ಕರ್ನಾಟಕ ಮೂಲದ ಹಾಸ್ಯ ಕಲಾವಿದ ಸಂಜು ಬಸಯ್ಯ. ಇದೀಗ ಇದೇ ಸಂಜು ಅವರ ಪತ್ನಿ ಪಲ್ಲವಿ ಬಳ್ಳಾರಿ, ತಮ್ಮ ಜೀವನದಲ್ಲಾದ ಒಂದು ಕೆಟ್ಟ ಘಟನೆ ಬಗ್ಗೆ ಮಾತನಾಡಿದ್ದಾರೆ.
(1 / 12)
ಕಾಮಿಡಿ ಕಾರ್ಯಕ್ರಮಗಳ ಮೂಲಕ ನಾಡಿನ ತುಂಬ ಗುರುತಿಸಿಕೊಂಡವರು ಉತ್ತರ ಕರ್ನಾಟಕ ಮೂಲದ ಹಾಸ್ಯ ಕಲಾವಿದ ಸಂಜು ಬಸಯ್ಯ. ಇದೀಗ ಇದೇ ಸಂಜು ಅವರ ಪತ್ನಿ ಪಲ್ಲವಿ ಬಳ್ಳಾರಿ, ತಮ್ಮ ಜೀವನದಲ್ಲಾದ ಒಂದು ಕೆಟ್ಟ ಘಟನೆ ಬಗ್ಗೆ ಮಾತನಾಡಿದ್ದಾರೆ.
(Instagram\ Sanju Basayya )(2 / 12)
ಇದೀಗ ಇಬ್ಬರೂ ಸುಖ ಸಂಸಾರ ನಡೆಸುತ್ತಿದ್ದಾರೆ. ದೊಡ್ಡ ದೊಡ್ಡ ಜಾತ್ರೆಗಳಲ್ಲಿ ನಾಟಕ ಮಾಡುತ್ತ, ವೇದಿಕೆ ಕಾರ್ಯಕ್ರಮಗಳಲ್ಲಿ ಕಾಣಿಸುತ್ತ, ರಿಯಾಲಿಟಿ ಶೋಗಳಲ್ಲಿಯೂ ಮಿಂಚುತ್ತಿದ್ದಾರೆ ಸಂಜು ಬಸಯ್ಯ ಮತ್ತು ಪಲ್ಲವಿ.
(3 / 12)
ಇದೀಗ ಇದೇ ಸಂಜು ಬಸಯ್ಯ ಅವರ ಪತ್ನಿ ಪಲ್ಲವಿ ಬಳ್ಳಾರಿ, ತಮ್ಮ ಜೀವನದಲ್ಲಿನ ಕಹಿ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. ಕೆಲ ವರ್ಷಗಳ ಹಿಂದಿನ ಆ ಘಟನೆ ಇಂದಿಗೂ ಅವರ ಕಣ್ಣಲ್ಲಿ ನೀರು ತರಿಸಿದೆ. ಅಷ್ಟಕ್ಕೂ ಏನದು? ಇಲ್ಲಿದೆ ವಿವರ.
(4 / 12)
ನಾಟಕಗಳಲ್ಲಿ ಡಾನ್ಸ್ ಮಾಡುವ ಕೆಲಸಕ್ಕೆ ಪಲ್ಲವಿ ಸೇರಿದ್ದರು. ಮಗಳಿಗೆ ಸಾಥ್ ನೀಡಲು ಅವರ ತಾಯಿ ಸಹ ಬೆಳಗಾವಿ ಜಿಲ್ಲೆಯ ಯರಗಟ್ಟಿಗೆ ತೆರಳಿದ್ದರು. ಒಂದು ವಾರ ಎಂದು ಹೇಳಿ, ಒಂದು ತಿಂಗಳು ಅಲ್ಲಿಯೇ ಇರುವಂತಾಗಿತ್ತು.
(5 / 12)
“ಹೀಗಿರುವಾಗಲೇ ನನ್ನ ಡಾನ್ಸ್ ನೋಡಿದ ಅಲ್ಲಿನ ಕೆಲವರು, ನಾನಿದ್ದ ಲಾಡ್ಜ್‌ಗೆ ಬಂದು, ಮನಬಂದಂತೆ ಮಾತನಾಡುತ್ತಿದ್ದರು. ಲಾಡ್ಜ್ ಮಾಲೀಕರ ಬಳಿಯೂ ನನ್ನ ಬಗ್ಗೆ ವಿಚಾರಿಸುತ್ತಿದ್ದರು”
(6 / 12)
“ಎಷ್ಟೊತ್ತಿದ್ದರೂ ಆ ಹುಡುಗಿ ನಮಗೆ ಬೇಕು, ಏನು ಮಾಡ್ತಿರೋ ನನಗೆ ಗೊತ್ತಿಲ್ಲ. ಆ ಹುಡುಗಿ ಯಾವ ಸಮಯಕ್ಕೆ ಬರ್ತಾಳೆ ಆ ಸಮಯಕ್ಕೆ ನಮಗೆ ಫೋನ್ ಮಾಡಬೇಕು ಎಂದು ಲಾಡ್ಜ್ ಓನರ್‌ಗೆ ಅಲ್ಲಿನ ಕೆಲವರು ಬೆದರಿಕೆ ಹಾಕಿದ್ದರು”
(7 / 12)
“ಆ ಲಾಡ್ಜ್ ಓನರ್ ನಮ್ಮ ಪಾಲಿಗೆ ದೇವರು. ಇನ್ನೂ ಅವರನ್ನು ನೆನಪಿಸಿಕೊಳ್ಳುತ್ತೇವೆ. ನಾವು ಲಾಡ್ಜ್‌ಗೆ ಬಂದರೂ, ನಮ್ಮ ಕೋಣೆಯ ಕೀಲಿ ಹಾಕಿ, ಅವರಿನ್ನು ಬಂದಿಲ್ಲ. ಅಲ್ಲಿಯೇ ಥಿಯೇಟರ್‌ನಲ್ಲಿ ಇರಬೇಕು ಎಂದು ಹೇಳಿ ಕಳಿಸುತ್ತಿದ್ದರು”
(8 / 12)
ಸತತವಾಗಿ ಮೂರು ದಿನ ಲಾಡ್ಜ್‌ಗೆ ಬಂದು ಕಾಟ ಕೊಟ್ರು. ರಾತ್ರಿ ಬಂದು ಗೇಟ್ ಬಡಿಯೋರು. ಇತ್ತ ಅಮ್ಮ ನಾನು ಇಬ್ಬರೂ ಭಯದಲ್ಲಿಯೇ ರಾತ್ರಿ ಕಳೆಯುತ್ತಿದ್ದವು. ಇದೇ ವಿಚಾರವನ್ನು ನಾವು ಕೆಲಸ ಮಾಡುತ್ತಿದ್ದವರ ಬಳಿಯೂ ಹೇಳಿದವು"
(9 / 12)
"ಇದೆಲ್ಲ ಆದ ಬಳಿ, ರಾತ್ರಿ ಬಂದು ಕಾಟ ಕೊಟ್ಟವರೇ, ಅಮ್ಮನ ಬಳಿ ಬಂದು ಒಂದು ಸೂಟ್‌ಕೇಸ್ ತುಂಬ ಹಣ ತಂದು, ನಿನ್ನ ಮಗಳು ನನಗೆ ಬೇಕು. ಈ ಹಣ ತಗೊಂಡು, ನಿನ್ನ ಮಗಳನ್ನ ಬರೀ ಒಂದೇ ರಾತ್ರಿಗೆ ಕಳಿಸು ಎಂದು ಪಟ್ಟು ಹಿಡಿದಿದ್ದ"
(10 / 12)
"ಹೇಗೋ ಆತನನ್ನು ಪುಸಲಾಯಿಸಿ, ನನ್ನ ಮಗಳ ಕೈಯಲ್ಲಿಯೇ ಈ ಹಣ ಕೊಟ್ಟು ಕಳಿಸಿ. ಅವಳನ್ನೇ ಕಳಿಸ್ತಿನಿ ಅಂತ ಸುಳ್ಳು ಹೇಳಿ, ಅವನ ಕೈಯಿಂದ ತಪ್ಪಿಸಿಕೊಂಡು ಬಂದಳು ನಮ್ಮ ಅಮ್ಮ"
(11 / 12)
"ಆವತ್ತು ರಾತ್ರಿಯೇ ನಾಟಕ ಮುಗಿಸಿಕೊಂಡು, ಗೋಕಾಕ್‌ಗೆ ಬಂದ್ವಿ. ಕೊನೆಗೆ ಅಲ್ಲಿಯೇ ಸೆಟಲ್ ಆಗಿಬಿಟ್ಟೆವು" ಎಂದು ಗ್ರಾಮೀಣ ಭಾಗದಲ್ಲಿನ ನಾಟಕಗಳಲ್ಲಿ ಮಹಿಳಾ ಕಲಾವಿದರ ಗೋಳು ವಿವರಿಸಿದ್ದಾರೆ ಪಲ್ಲವಿ ಸಂಜು.
ಇತರ ಗ್ಯಾಲರಿಗಳು