Seetha Rama Serial: ಸಿಹಿ ರೂಪದಲ್ಲಿ ಸೀತಮ್ಮನ ಮಡಿಲು ಸೇರಿದ ಸುಬ್ಬಿ, ಹೌಹಾರಿದ ಭಾರ್ಗವಿ; ರೋಚಕ ಘಟ್ಟದತ್ತ ಸೀತಾ ರಾಮ ಧಾರಾವಾಹಿ
- Seetha Rama Serial Feb 11th 2025 Episode: ಸೀತಾ ರಾಮ ಸೀರಿಯಲ್ ರೋಚಕ ಘಟ್ಟದತ್ತ ಸಾಗುತ್ತಿದೆ. ಇಲ್ಲಿಯವರೆಗೂ ಸಿಹಿ ಇಲ್ಲದೆ, ಕಂಗಾಲಾಗಿದ್ದ ಸೀತಾ ಮಡಿಲಿಗೆ ಸಿಹಿಯ ಆಗಮನವಾಗಿದೆ. ಇತ್ತ ಭಾರ್ಗವಿಗೂ ಬಿಸಿ ಮುಟ್ಟಿಸಿದ್ದಾಳೆ ಸೀತಾ.
- Seetha Rama Serial Feb 11th 2025 Episode: ಸೀತಾ ರಾಮ ಸೀರಿಯಲ್ ರೋಚಕ ಘಟ್ಟದತ್ತ ಸಾಗುತ್ತಿದೆ. ಇಲ್ಲಿಯವರೆಗೂ ಸಿಹಿ ಇಲ್ಲದೆ, ಕಂಗಾಲಾಗಿದ್ದ ಸೀತಾ ಮಡಿಲಿಗೆ ಸಿಹಿಯ ಆಗಮನವಾಗಿದೆ. ಇತ್ತ ಭಾರ್ಗವಿಗೂ ಬಿಸಿ ಮುಟ್ಟಿಸಿದ್ದಾಳೆ ಸೀತಾ.
(1 / 10)
ಸೀತಾ ರಾಮ ಸೀರಿಯಲ್‌ನಲ್ಲಿ ಒಂದಷ್ಟು ರೋಚಕ ಸನ್ನಿವೇಶಗಳು ವೀಕ್ಷಕರನ್ನು ನಿಬ್ಬೆರಗು ಮಾಡಿವೆ. ಅದರಂತೆ ಇಂದಿನ ಸಂಚಿಕೆಯಲ್ಲಿ (ಫೆ. 11) ಏನೆಲ್ಲ ಹೈಲೈಟ್ ಇರಬಹುದು ಎಂಬುದಕ್ಕೆ, ಪ್ರೋಮೋ ರಿಲೀಸ್ ಮಾಡಿದೆ ಜೀ ಕನ್ನಡ ವಾಹಿನಿ.
(Image\ Zee Kannada Facebook)(2 / 10)
ಸಿಹಿ ಇಲ್ಲ ಅನ್ನೋ ನೋವಿನಲ್ಲಿ ಸೀತಾ ಮಾನಸಿಕವಾಗಿ ಸಾಕಷ್ಟು ಬಳಲಿದ್ದಾಳೆ. ಹೀಗಿರುವಾಗಲೇ ಭಾರ್ಗವಿಯ ಕಟು ಮಾತುಗಳು ಸೀತಾಳ ಕೋಪವನ್ನು ನೆತ್ತಿಗೇರುವಂತೆ ಮಾಡಿದೆ. ಸಿಹಿ ಆವತ್ತೇ ಆಕ್ಸಿಡೆಂಟ್ ಸತ್ತಿದ್ದರೆ ಚೆನ್ನಾಗಿತ್ತು ಎಂದು ಭಾರ್ಗವಿ ಹೇಳಿದ್ದಾಳೆ.
(3 / 10)
ಆವತ್ತೇ ನಿನ್ನ ಮಗಳು ಸತ್ತಿದ್ದಿದ್ದರೆ, ಈ ತಲೆ ನೋವೇ ಇರುತ್ತಿರಲಿಲ್ಲ ಎಂದು ತನ್ನೊಳಗಿನ ಕೋಪ ತಾಪವನ್ನು ಭಾರ್ಗವಿ ಸೀತಾಳ ಮುಂದೆಯೇ ಹೊರಗೆಡವಿದ್ದಾಳೆ.
(4 / 10)
ಭಾರ್ಗವಿ ಮಾತಿಗೆ ಕಡು ಕೋಪದಲ್ಲಿಯೇ ಟೇಬಲ್ ಮೇಲಿದ್ದ ಚಾಕುವನ್ನು ಹಿಡಿದು, ಭಾರ್ಗವಿಯ ಕೊರಳಿನ ಬಳಿ ಚಾಕು ಹಿಡಿದಿದ್ದಾಳೆ. ಅಷ್ಟರಲ್ಲಿ ಸೂರ್ಯಪ್ರಕಾಶ್ ಮತ್ತು ವಿಶ್ವನ ಆಗಮನವಾಗಿದೆ.
(5 / 10)
ಸೀತಾ ಮಾನಸಿಕವಾಗಿ ತುಂಬ ನೋವಲ್ಲಿದ್ದಾಳೆ. ಅವಳನ್ನು ಹೇಗಾದರೂ ಮಾಡಿ, ಆಸ್ಪತ್ರೆಗೆ ಕಳಿಸಿಕೊಡಿ ಅಪ್ಪಾಜಿ ಎಂದು ಸೂರ್ಯಪ್ರಕಾಶ್ ಬಳಿ ಬೇಡಿದ್ದಾನೆ ವಿಶ್ವ. ಸೀತಾಳ ವರ್ತನೆ ಕಂಡು ಮನೆ ಮಂದಿಯೂ ಕೊಂಚ ಶಾಕ್‌ಗೆ ಒಳಗಾಗಿದ್ದಾರೆ.
(6 / 10)
ಸೀತಾಳನ್ನು ಹುಚ್ಚಾಸ್ಪತ್ರೆಗೆ ಸೇರಿಸುವ ಸಮಯಕ್ಕೆ ಸರಿಯಾಗಿ ರಾಮನ ಎಂಟ್ರಿಯಾಗಿದೆ. ಜತೆಯಲ್ಲಿ ಸಿಹಿಯ ರೂಪದಲ್ಲಿನ ಸುಬ್ಬಿಯನ್ನೂ ಆತ ಕರೆತಂದಿದ್ದಾನೆ.
(7 / 10)
ಆಸ್ಪತ್ರೆಗೆ ಕರೆದೊಯ್ತಿದ್ದ ಸಿಬ್ಬಂದಿಯಿಂದ ಸೀತಾಳನ್ನು ಬಿಡಿಸಿದ ರಾಮ್, ಎಲ್ಲರನ್ನು ಹಿಂದಕ್ಕೆ ಸರಿಸಿದ್ದಾನೆ. ಅಷ್ಟರಲ್ಲಿ ನಿನಗೆ ಸೀತಮ್ಮ ಬೇಕೋ ಬೇಡ್ವೋ ಎಂದು ಸುಬ್ಬಿಯನ್ನು ಕೇಳಿದ್ದಾಳೆ ಸಿಹಿ. ತಕ್ಷಣ ಕಾರ್‌ನಿಂದ ಇಳಿದು ಸೀತಮ್ಮ ಎಂದು ಜೋರಾಗಿ ಕೂಗಿದ್ದಾಳೆ ಸಿಹಿ ವೇಷದಲ್ಲಿರುವ ಸುಬ್ಬಿ.
(8 / 10)
ಸೀತಮ್ಮ ಎಂದು ಕೂಗುತ್ತಿದ್ದಂತೆ, ಸೀತಾಳ ಕಣ್ಣು ಅರಳಿವೆ, ಕಿವಿ ನಿಮಿರಿವೆ. ಸಿಹಿಯನ್ನೇ ಹೋಲುವ ಹುಡುಗಿ ಮತ್ತೆ ದೇಸಾಯಿ ಕುಟುಂಬಕ್ಕೆ ಎಂಟ್ರಿಯಾಗುತ್ತಿದ್ದಂತೆ, ಭಾರ್ಗವಿ, ತಾತ, ವಿಶ್ವ, ಸಾಧನಾ ಅಚ್ಚರಿಗೊಂಡಿದ್ದಾರೆ.
(9 / 10)
ಭಾರ್ಗವಿಯಂತೂ ಸಿಹಿಯನ್ನ ನೋಡುತ್ತಿದ್ದಂತೆ, ಶಾಕ್‌ಗೆ ಒಳಗಾಗಿದ್ದಾಳೆ. ಅದ್ಹೇಗೆ ಈ ಸಿಹಿ ಬದುಕಿ ಬರಲು ಸಾಧ್ಯ ಎಂದೇ ಯೋಚನೆ ಮಾಡುತ್ತಿದ್ದಾಳೆ ಭಾರ್ಗವಿ.
ಇತರ ಗ್ಯಾಲರಿಗಳು