ʻಲಕ್ಷ ಲಕ್ಷ ಹಣ ಕೊಡ್ತೀವಿ, ರಾಜಕಾರಣಿಗಳು, ವಿಐಪಿಗಳ ಜತೆ ಗೌಪ್ಯ ಡೇಟಿಂಗ್‌ ಬರ್ತೀರಾ?ʼ ನಮ್ರತಾ ಗೌಡಗೆ ಮಧ್ಯವರ್ತಿಯ ಕಾಟ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ʻಲಕ್ಷ ಲಕ್ಷ ಹಣ ಕೊಡ್ತೀವಿ, ರಾಜಕಾರಣಿಗಳು, ವಿಐಪಿಗಳ ಜತೆ ಗೌಪ್ಯ ಡೇಟಿಂಗ್‌ ಬರ್ತೀರಾ?ʼ ನಮ್ರತಾ ಗೌಡಗೆ ಮಧ್ಯವರ್ತಿಯ ಕಾಟ

ʻಲಕ್ಷ ಲಕ್ಷ ಹಣ ಕೊಡ್ತೀವಿ, ರಾಜಕಾರಣಿಗಳು, ವಿಐಪಿಗಳ ಜತೆ ಗೌಪ್ಯ ಡೇಟಿಂಗ್‌ ಬರ್ತೀರಾ?ʼ ನಮ್ರತಾ ಗೌಡಗೆ ಮಧ್ಯವರ್ತಿಯ ಕಾಟ

ನಟಿ, ಬಿಗ್‌ ಬಾಸ್‌ ಖ್ಯಾತಿಯ ನಮ್ರತಾ ಗೌಡ ಆನ್‌ಲೈನ್‌ ಕಿರುಕುಳ ಎದುರಿಸಿದ್ದಾರೆ. ವಿಐಪಿ ಮತ್ತು ರಾಜಕಾರಣಿಗಳ ಜತೆಗೆ ಡೇಟಿಂಗ್‌ ಹೋದರೆ ಲಕ್ಷ ಲಕ್ಷ ಹಣ ನೀಡುವುದಾಗಿ ರೋಷನ್‌ ಎಂಬುವವರು ಇನ್‌ಸ್ಟಾಗ್ರಾಂ ಮೆಸೇಜ್‌ ಮೂಲಕ ಕಳೆದ ಒಂದು ವರ್ಷದಿಂದ ದುಂಬಾಲು ಬಿದ್ದಿದ್ದಾನೆ. ಇದೀಗ ರೋಸಿಹೋದ ನಮ್ರತಾ ಆತನಿಗೆ ಖಡಕ್‌ ಉತ್ತರ ನೀಡಿದ್ದಾರೆ.

ಕನ್ನಡ ಕಿರುತೆರೆ ಮತ್ತು ಸಿನಿಮಾಗಳಲ್ಲಿ ನಟಿಯಾಗಿ ಗುರುತಿಸಿಕೊಂಡು ಬಿಗ್‌ ಬಾಸ್‌ ಮೂಲಕ ಹೆಚ್ಚು ಮುನ್ನೆಲೆಗೆ ಬಂದವರು ನಟಿ ನಮ್ರತಾ ಗೌಡ.
icon

(1 / 9)

(Instagram\ Namratha gowda)

ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಿರುವ ನಟಿ ನಮ್ರತಾ, ಆಗಾಗ ಕಲರ್‌ಫಿಲ್‌ ಫೋಟೋಗಳ ಗೊಂಚಲನ್ನು ಶೇರ್‌ ಮಾಡುತ್ತ ಸುದ್ದಿಯಲ್ಲಿರುತ್ತಾರೆ.
icon

(2 / 9)

ಇದೆಲ್ಲದರ ನಡುವೆ ಇದೇ ಸೋಷಿಯಲ್‌ ಮೀಡಿಯಾದಲ್ಲ ಕೆಲವೊಮ್ಮೆ ನಿಂದನೆಗೊಳಗಾದ ಉದಾಹರಣೆಗಳೂ ಇವೆ. ಈಗ ಅಂಥದ್ದೇ ಒಂದು ವಿಚಾರವನ್ನು ಬಹಿರಂಗವಾಗಿ ಎಲ್ಲರೆದುರು ತೆರೆದಿಟ್ಟಿದ್ದಾರೆ.
icon

(3 / 9)

ಅದೇನಪ್ಪ ಅಂದರೆ, ನಟಿ ನಮ್ರತಾಗೆ ರಾಜಕಾರಣಿಗಳು ಮತ್ತು ವಿಐಪಿಗಳ ಜೊತೆಗೆ ಡೇಟಿಂಗ್‌ ಹೋಗುವಂತೆ ವ್ಯಕ್ತಿಯೊಬ್ಬ ದುಂಬಾಲು ಬಿದ್ದಿದ್ದಾನೆ. ಡೇಟಿಂಗ್‌ ಹೋದರೆ ಲಕ್ಷ ಲಕ್ಷ ಹಣ ನೀಡುವುದಾಗಿಯೂ ಹೇಳಿದ್ದಾನೆ.
icon

(4 / 9)

ಇನ್‌ಸ್ಟಾಗ್ರಾಂನಲ್ಲಿ ರೋಷನ್‌ (rocky.g43) ಎಂಬ ಇನ್‌ಸ್ಟಾಗ್ರಾಂ ಖಾತೆಯಿಂದ ಪರ್ಸನಲ್‌ ಸಂದೇಶಗಳು ನಮ್ರತಾ ಅವರಿಗೆ ಕಳೆದ ವರ್ಷದಿಂದ ಬರುತ್ತಲೇ ಇವೆ. ಇದೀಗ ಆ ಸಂದೇಶಕ್ಕೆ ಫುಲ್‌ ಸ್ಟಾಪ್‌ ಇಟ್ಟಿದ್ದಾರೆ.
icon

(5 / 9)

ಹಾಗಾದರೆ ಏನಿದೆ ರೋಷನ್‌ ಮಾಡಿದ ಮೆಸೆಜ್‌ನಲ್ಲಿ? “ ಇದು ನನ್ನ ಕೊನೇ ರಿಮೈಂಡರ್‌..  ಹಾಯ್‌  ನಾನು ಕೆಲವು ನನಗೆ ರಾಜಕಾರಣಿಗಳು, ವಿಐಪಿಗಳೊಟ್ಟಿಗೆ ಸಂಪರ್ಕದಲ್ಲಿದ್ದೇನೆ. ನಾನು ಅವರೆಲ್ಲರಿಗಾಗಿ ಪೇಯ್ಡ್ ಡೇಟಿಂಗ್ ಅರೇಂಜ್ ಮಾಡುತ್ತಿರುತ್ತೇನೆ”
icon

(6 / 9)

"ಇದು ಸಂಪೂರ್ಣ ಖಾಸಗಿ ಮತ್ತು ಅಷ್ಟೇ ಗೌಪ್ಯವಾಗಿರಲಿದೆ. ನಿಮ್ಮ ಫೋನ್‌ ನಂಬರ್‌ ಸೇರಿ ಯಾವುದೇ ಫೋಟೋಗಳನ್ನು ಶೇರ್‌ ಮಾಡುವ ಅಗತ್ಯವಿಲ್ಲ. ಡೇಟಿಂಗ್‌ ಬರಲು ಒಪ್ಪಿದರೆ ದೊಡ್ಡ ಮೊತ್ತವನ್ನೇ ಕೊಡಲಿದ್ದೇವೆ. 200% ಇದು ಪ್ರೈವೇಟ್‌ ಆಗಿರಲಿದೆ. ನಿಮಗೆ ಆಸಕ್ತಿ ಇದ್ದರೆ ಸಂದೇಶ ಕಳಿಸಿ" ಎಂದಿದ್ದಾನೆ ರೋಷನ್.‌
icon

(7 / 9)

ಆತನ ಸಂದೇಶಗಳ ಸ್ಕ್ರೀನ್‌ ಶಾಟ್‌ಅನ್ನು ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ರೂಪದಲ್ಲಿ ಶೇರ್‌ ಮಾಡಿರುವ ನಮ್ರತಾ, ಮಿಸ್ಟರ್‌ ರೋಷನ್‌, ತುಂಬ ಗೌರವಪೂರ್ವಕವಾಗಿ ಹೇಳುತ್ತಿದ್ದೇನೆ, ಇದನ್ನು ಇಲ್ಲಿಗೆ ಕೈಬಿಡಿ ಎಂದಿದ್ದಾರೆ.
icon

(8 / 9)

ಇನ್ನು ಸೀರಿಯಲ್‌ ವಿಚಾರಕ್ಕೆ ಬಂದರೆ, ಜೀ ಕನ್ನಡದ ಕರ್ಣ ಧಾರಾವಾಹಿಯಲ್ಲಿ ನಟಿ ನಮ್ರತಾ ಗೌಡ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
icon

(9 / 9)

ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು