ಬ್ರಹ್ಮಗಂಟು ಧಾರಾವಾಹಿ ಸೌಂದರ್ಯ, ನಿಜ ಜೀವನದಲ್ಲೂ ಅಪ್ಸರೆ; ಓದಿದ್ದೊಂದು, ಆಗಿದ್ದು ಇನ್ನೊಂದು, ಹೀಗಿದೆ ಇವರ ಕ್ಯೂಟ್ ಫ್ಯಾಮಿಲಿ
- ಜೀ ಕನ್ನಡದ ಬ್ರಹ್ಮಗಂಟು ಸೀರಿಯಲ್‌ನಲ್ಲಿ ಸೌಂದರ್ಯ ಅನ್ನೋ ನೆಗೆಟಿವ್ ಪಾತ್ರದಲ್ಲಿ ಅಬ್ಬರಿಸುತ್ತಿದ್ದಾರೆ ನಟಿ ಪ್ರೀತಿ ಶ್ರೀನಿವಾಸ್. ಇದೀಗ ಬರ್ತ್‌ಡೇ ಖುಷಿಯಲ್ಲಿರುವ ಪ್ರೀತಿ, ನಿಜ ಜೀವನದಲ್ಲೂ ಸಖತ್ ಮಾಡರ್ನ್ ಮತ್ತು ಅಷ್ಟೇ ಬೋಲ್ಡ್. ಓದಿದ್ದು ಒಂದಾದರೆ, ಆರಿಸಿಕೊಂಡ ವೃತ್ತಿ ಇನ್ನೊಂದು. ಹೀಗಿದೆ ಇವರ ಕ್ಯೂಟ್ ಫ್ಯಾಮಿಲಿ.
- ಜೀ ಕನ್ನಡದ ಬ್ರಹ್ಮಗಂಟು ಸೀರಿಯಲ್‌ನಲ್ಲಿ ಸೌಂದರ್ಯ ಅನ್ನೋ ನೆಗೆಟಿವ್ ಪಾತ್ರದಲ್ಲಿ ಅಬ್ಬರಿಸುತ್ತಿದ್ದಾರೆ ನಟಿ ಪ್ರೀತಿ ಶ್ರೀನಿವಾಸ್. ಇದೀಗ ಬರ್ತ್‌ಡೇ ಖುಷಿಯಲ್ಲಿರುವ ಪ್ರೀತಿ, ನಿಜ ಜೀವನದಲ್ಲೂ ಸಖತ್ ಮಾಡರ್ನ್ ಮತ್ತು ಅಷ್ಟೇ ಬೋಲ್ಡ್. ಓದಿದ್ದು ಒಂದಾದರೆ, ಆರಿಸಿಕೊಂಡ ವೃತ್ತಿ ಇನ್ನೊಂದು. ಹೀಗಿದೆ ಇವರ ಕ್ಯೂಟ್ ಫ್ಯಾಮಿಲಿ.
(1 / 8)
ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 10 ಗಂಟೆಗೆ ಬ್ರಹ್ಮಗಂಟು ಸೀರಿಯಲ್ ಪ್ರಸಾರ ಕಾಣುತ್ತಿದೆ. ಇದೇ ಧಾರಾವಾಹಿಯಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ ಸೌಂದರ್ಯ ಅನ್ನೋ ನೆಗೆಟಿವ್ ಶೇಡ್‌ನ ಪಾತ್ರ.
(Instagram\ Preethi Srinivas)(2 / 8)
ಬ್ರಹ್ಮಗಂಟು ಸೀರಿಯಲ್‌ನಲ್ಲಿ ಆಗರ್ಭ ಶ್ರೀಮಂತ ಮನೆಯ ಸೊಸೆಯಾಗಿರುವ ಸೌಂದರ್ಯಗೆ ಇನ್ನಿಲ್ಲದ ಸೊಕ್ಕು. ಮನೆಗೆ ಬಂದ ಸೊಸೆಯನ್ನೇ ಕೆಲಸದಾಳಾಗಿ ಕಾಣುತ್ತಿದ್ದಾಳೆ. ಈಗ ಅದೇ ಸೌಂದರ್ಯ ವಿರುದ್ಧವೇ ಸೊಸೆ ದೀಪಾ ತಿರುಗಿ ಬಿದ್ದಿದ್ದಾಳೆ.
(3 / 8)
ಇಂತಿಪ್ಪ ಸೀರಿಯಲ್‌ನಲ್ಲಿ ಸೌಂದರ್ಯ ಪಾತ್ರದಲ್ಲಿ ನಟಿಸುತ್ತಿರುವವರ ನಿಜವಾದ ಹೆಸರು ಪ್ರೀತಿ ಶ್ರೀನಿವಾಸ್. ಪ್ರೀತಿ ಅವರಿಗೆ ಇದೇ ಮೊದಲ ಸೀರಿಯಲ್ ಅಲ್ಲ. ಸಿನಿಮಾ ಸೇರಿ ಧಾರಾವಾಹಿಗಳಲ್ಲೂ ನಟಿಸಿದ್ದಾರೆ.
(4 / 8)
ಈ ಹಿಂದೆ ಹಲವು ಧಾರಾವಾಹಿಗಳಲ್ಲಿ ನಟಿಸಿದ ಅನುಭವ ಇವರಿಗಿದೆ. ಸ್ಟಾರ್ ಸುವರ್ಣದಲ್ಲಿ ವರಲಕ್ಷ್ಮೀ ಸ್ಟೋರ್ಸ್ ಸೀರಿಯಲ್‌ನಲ್ಲಿಯೂ ನಟಿಸಿದ್ದರು. ಇದರ ಜತೆಗೆ ಪಕ್ಕದ ತೆಲುಗಿನ ಅನ್ನಪೂರ್ಣ, ರಾಮ ಸೀತಾ ಎಕ್ಕಡ ಸೇರಿ ಹಲವು ಧಾರಾವಾಹಿಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.
(5 / 8)
ಸರಸ್ವತಿ-ಲಕ್ಷ್ಮಿ ಪ್ರಿಯೆ ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಬಂದ ಪ್ರೀತಿ, ಸ್ಯಾಂಡಲ್‌ವುಡ್ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಗಣೇಶ ಮತ್ತೆ ಬಂದ, ನೆನಪಿರಲಿ ಪ್ರೇಮ್ ಜತೆಗೆ ಚಂದ್ರ ಸಿನಿಮಾದಲ್ಲಿಯೂ ನಟಿಸಿದ್ದಾರೆ.
(6 / 8)
ಅಷ್ಟಕ್ಕೂ ನಟಿಯಾಗುವುದಕ್ಕೂ ಮುನ್ನ ಸೈಕ್ಯಾಟ್ರಿಸ್ಟ್ ಆಗಬೇಕೆನ್ನುವ ಕನಸಿನೊಂದಿಗೆ, ಮನಶಾಸ್ತ್ರ ಓದಿ ಸೈಕಾಲಜಿಸ್ಟ್ ಆಗಿದ್ದರು. ಇಂದಿಗೂ ಎರಡೂ ಕ್ಷೇತ್ರವನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಾರೆ ಪ್ರೀತಿ.
(7 / 8)
ಪ್ರೀತಿ ಅವರಿಗೆ ಕೆಲ ವರ್ಷಗಳ ಹಿಂದೆಯೇ ಮದುವೆ ಆಗಿದ್ದು, ಪತಿ ಮತ್ತು ಹೃದಯ್ ಎಂಬ ಮುದ್ದಾದ ಮಗನ ಜತೆಗೆ ಚೆಂದದ ಫ್ಯಾಮಿಲಿ ಇವರದ್ದು.
ಇತರ ಗ್ಯಾಲರಿಗಳು