ಕನ್ನಡದ ಜನಪ್ರಿಯ ಧಾರಾವಾಹಿ ಮರಾಠಿ ಬಳಿಕ ಹಿಂದಿ ಭಾಷೆಗೂ ರಿಮೇಕ್‌, ಕಿರುತೆರೆಯಲ್ಲಿ ಸಾಂಗ್‌ ಹೂನ್‌ ತೇರೆ ಪ್ರಸಾರ ಆರಂಭ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕನ್ನಡದ ಜನಪ್ರಿಯ ಧಾರಾವಾಹಿ ಮರಾಠಿ ಬಳಿಕ ಹಿಂದಿ ಭಾಷೆಗೂ ರಿಮೇಕ್‌, ಕಿರುತೆರೆಯಲ್ಲಿ ಸಾಂಗ್‌ ಹೂನ್‌ ತೇರೆ ಪ್ರಸಾರ ಆರಂಭ

ಕನ್ನಡದ ಜನಪ್ರಿಯ ಧಾರಾವಾಹಿ ಮರಾಠಿ ಬಳಿಕ ಹಿಂದಿ ಭಾಷೆಗೂ ರಿಮೇಕ್‌, ಕಿರುತೆರೆಯಲ್ಲಿ ಸಾಂಗ್‌ ಹೂನ್‌ ತೇರೆ ಪ್ರಸಾರ ಆರಂಭ

ಜೀ ಕನ್ನಡ ಮತ್ತು ಕಲರ್ಸ್‌ ಕನ್ನಡ ಸೇರಿದಂತೆ ಕನ್ನಡದಲ್ಲಿ ಕೆಲವೊಂದು ಸೀರಿಯಲ್‌ಗಳು ಅತ್ಯುತ್ತಮ ಗುಣಮಟ್ಟ, ಗ್ರಾಫಿಕ್ಸ್‌, ಕಥೆಗಳಿಂದ ಜನರ ಗಮನ ಸೆಳೆಯುತ್ತಿದೆ. ಜೀ ಕನ್ನಡದ ಸೀರಿಯಲ್‌ವೊಂದು ಈ ಹಿಂದೆ ಮರಾಠಿ ಭಾಷೆಗೆ ರಿಮೇಕ್‌ ಆಗಿತ್ತು. ಇದೀಗ ಈ ಸೀರಿಯಲ್‌ ಹಿಂದಿಗೂ ರಿಮೇಕ್‌ ಆಗಿದೆ.

ಹಿಂದಿಯಲ್ಲಿ ಸಾಂಗ್‌ ಹೂನ್‌ ತೇರೆ ಎಂಬ ಸೀರಿಯಲ್‌ ನಿನ್ನೆಯಿಂದ (ಮೇ 26) ಆರಂಭವಾಗಿದೆ. ಇದು ಕನ್ನಡ ಸೀರಿಯಲ್‌ನ ರಿಮೇಕ್‌. ಈ ಸೀರಿಯಲ್‌ನಲ್ಲಿ ಹಿಂದಿಯಲ್ಲೂ ಕನ್ನಡ ಕಲಾವಿದರೇ ಇದ್ದಾರೆ. ದೃಶ್ಯ ಸೇಮ್‌ ಇದೆ. ಆದರೆ, ಧ್ವನಿ ಮಾತ್ರ ಹಿಂದಿಯಲ್ಲಿ ಇದೆ.
icon

(1 / 9)

ಜೀ ಕನ್ನಡದ ಹಾರರ್‌ ಸೀರಿಯಲ್‌ ನಾ ನಿನ್ನ ಬಿಡಲಾರೆ ಹಿಂದಿಯಲ್ಲಿ ಸಾಂಗ್‌ ಹೂನ್‌ ತೇರೆ  ಹೆಸರಿನಲ್ಲಿ ಪ್ರಸಾರ ಆರಂಭಿಸಿದೆ. ಈ ಧಾರವಾಹಿಯ ಗುಣಮಟ್ಟ, ಮೇಕಿಂಗ್‌, ಗ್ರಾಫಿಕ್ಸ್‌ ಮತ್ತು ಪುಟಾಣಿ ಹಿತಾ ಹಿಂದಿ ಸೀರಿಯಲ್‌ ವೀಕ್ಷಕರಿಗೂ ಮೋಡಿ ಮಾಡಲಿದೆ.
icon

(2 / 9)

ಜೀ ಕನ್ನಡ ವಾಹಿನಿಯ ನಾ ನಿನ್ನ ಬಿಡಲಾರೆ ಸೀರಿಯಲ್‌ ಸಾಂಗ್‌ಹೂನ್‌ ತೇರೆ ಹೆಸರಿನಲ್ಲಿ ರಿಮೇಕ್‌ ಆಗಿದೆ. ಮೇ 26ರಿಂದ ಪ್ರಸಾರ ಆರಂಭಿಸಿದೆ. ಈ ಸೀರಿಯಲ್‌ ಕನ್ನಡದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿದ್ದು, ಇದೀಗ ಪ್ಯಾನ್‌ ಇಂಡಿಯಾ ಸೀರಿಯಲ್‌ ಆಗುವತ್ತ ಮುನ್ನುಗ್ಗುತ್ತಿದೆ ಎನ್ನಬಹುದು.
icon

(3 / 9)

ಈ ಸೀರಿಯಲ್‌ನಲ್ಲಿ ಹಿರಿಯ ಮತ್ತು ಕಿರಿಯ ಕಲಾವಿದರು ನಟಿಸಿದ್ದಾರೆ. ಪಾರು ಸೀರಿಯಲ್‌ ಮೂಲಕ ಜನಪ್ರಿಯತೆ ಪಡೆದಿರುವ ಶರತ್‌ ಪದ್ಮನಾಭ್‌ ಇದ್ದಾರೆ. ಇವರು ಸೀರಿಯಲ್‌ನಲ್ಲಿ ಶರತ್‌ ಪಾತ್ರದಲ್ಲಿ ನಟಿಸಿದ್ದಾರೆ.
icon

(4 / 9)

ನಾಯಕಿಯಾಗಿ ನೀತಾ ಅಶೋಕ್‌ ನಟಿಸಿದ್ದಾರೆ. ಇವರು ಅಂಬಿಕಾ ಪಾತ್ರದಲ್ಲಿ ಶರತ್‌ಗೆ ಜೋಡಿಯಾಗಿದ್ದು, ವೀಕ್ಷಕರಿಗೆ ಹತ್ತಿರವಾಗಿದ್ದಾರೆ.
icon

(5 / 9)

ನಾ ನಿನ್ನ ಬಿಡಲಾರೆ ಸೀರಿಯಲ್‌ನಲ್ಲಿ ರಂಗಭೂಮಿ ಕಲಾವಿದರಾದ ಬಾಬು ಹಿರಣ್ಯ ಕೂಡ ನಟಿಸಿದ್ದಾರೆ. ರುಹಾನಿ ಶೆಟ್ಟಿ  ಮತ್ತು ವೀಣಾ ಸುಂದರ್‌ ಅವರು ಈ ಸೀರಿಯಲ್‌ನ ವಿಲನ್‌ ಆಗಿದ್ದಾರೆ.
icon

(6 / 9)

ಅಂಬಿಕಾ ಸತ್ತ ಬಳಿಕ ಆಕೆಯು ಮಾಯಾ ರೂಪದಲ್ಲಿ ಹಿತಾಳ ರಕ್ಷಣೆಗೆ ನಿಲ್ಲುವ ಕಥೆ ಈ ಸೀರಿಯಲ್‌ನದು. ಅಂದಹಾಗೆ ಹಿತಾ ಎಂಬ ಪುಟಾಣಿಯು ಶರತ್‌ ಮತ್ತು ಅಂಬಿಕಾ  ದಂಪತಿಯ ಮಗಳು.
icon

(7 / 9)

ಈ ಸೀರಿಯಲ್‌ ಹಿಂದಿಗೆ ರಿಮೇಕ್‌ ಆಗಿದೆ. ಈ ಹಿಂದೆ ಇದು ಮರಾಠಿಗೆ ರಿಮೇಕ್‌ ಆಗಿತ್ತು. ಮರಾಠಿಯಲ್ಲಿ ತುಲಾ ಜಪ್ನಾರ್‌ ಆಚೆ ಹೆಸರಿನಲ್ಲಿ ರಿಮೇಕ್‌ ಆಗಿತ್ತು.
icon

(8 / 9)

ಜೀ ವಾಹಿನಿಯು ಈ ಸೀರಿಯಲ್‌ ಅನ್ನು ಕನ್ನಡ ಮಾತ್ರವಲ್ಲದೆ ಮರಾಠಿ ಮತ್ತು ಹಿಂದಿಗೆ ರಿಮೇಕ್‌ ಮಾಡಿರುವುದರಿಂದ ಕನ್ನಡ ಸೀರಿಯಲ್‌ ಕಲಾವಿದರು ಅಲ್ಲಿನ ಪ್ರೇಕ್ಷಕಿಗೂ ತಲುಪಲಿದ್ದಾರೆ. ತೆಲುಗು, ತಮಿಳು ಸೇರಿದಂತೆ ಇತರೆ ಭಾಷೆಗಳಿಗೆ ಇದು ರಿಮೇಕ್‌ ಆಗಲಿದೆಯೋ ಎಂದು ತಿಳಿದುಬಂದಿಲ್ಲ.
icon

(9 / 9)

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು