ಮೈ ಮೇಲೆ ಸುಡುವ ಮೇಣದ ಹನಿ ಸುರಿದುಕೊಂಡು ವಿಚಿತ್ರ ಫೋಟೋಶೂಟ್ ಮಾಡಿಸಿದ ಕಿಶನ್ ಬಿಳಗಲಿ
- ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಚಿತ್ರ ವಿಚಿತ್ರ ಫೋಟೋಶೂಟ್‌ಗಳಿಂದಲೇ ಸದ್ದು ಜತೆಗೆ ಸುದ್ದಿಯಲ್ಲಿ ಇರುತ್ತಾರೆ ಕಿಶನ್ ಬಿಳಗಲಿ. ಇದೀಗ ಅಂಥದ್ದೇ ಯುನಿಕ್ ಪೋಟೋಶೂಟ್ ಜತೆಗೆ ಆಗಮಿಸಿದ್ದಾರೆ. ಮೈಮೇಲೆ ಸುಡುವ ಮೇಣದ ಹನಿ ಸುರಿದುಕೊಂಡು ನೋವಲ್ಲಿಯೇ ಫೋಟೋಗಳಿಗೆ ಪೋಸ್ ನೀಡಿದ್ದಾರೆ.

(1 / 8)
ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಿರುವ ಕಿಶನ್ ಬಿಳಗಲಿ, ತರಹೇವಾರಿ ಫೋಟೋಶೂಟ್‌ಗಳ ಮೂಲಕ ಸುದ್ದಿಯಲ್ಲಿರುತ್ತಾರೆ.
(3 / 8)
ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಮೂಲಕ ಹೆಚ್ಚು ಜನಪ್ರಿಯತೆ ಪಡೆದ ಕಿಶನ್, ತಮ್ಮ ಸಖತ್ ಡಾನ್ಸ್ ಮೂಲಕವೂ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
(4 / 8)
ಇದೀಗ ಇದೇ ಕಿಶನ್ ವಿಚಿತ್ರ ಮತ್ತು ಯುನಿಕ್ ಎನಿಸುವಂಥ ಫೋಟೋಶೂಟ್‌ವೊಂದರಲ್ಲಿ ಕಂಡಿದ್ದಾರೆ. ಅಷ್ಟಕ್ಕೂ ಈ ವಿಚಿತ್ರ ಕಾನ್ಸೆಪ್ಟ್ ಸೂತ್ರಧಾರ ಬೇರಾರೂ ಅಲ್ಲ ಕಿಶನ್ ಅವರೇ.
(5 / 8)
ಬರೀ ಮೈ ಭುಜದ ಮೇಲೆ ಸುಡುವ ಮೇಣದ ಹನಿಗಳನ್ನು ಸುರಿದುಕೊಂಡು, ಅದೇ ಹನಿಗಳ ರಾಶಿಯ ಮೇಲೆಯೇ ಕ್ಯಾಂಡಲ್ ಸಿಕ್ಕಿಸಿಕೊಂಡು ಪೋಟೋಕ್ಕೆ ಪೋಸ್ ನೀಡಿದ್ದಾರೆ.
(6 / 8)
ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋ ಶೂಟ್‌ನ ಮೇಕಿಂಗ್ ವಿಡಿಯೋ ಝಲಕ್ ಮತ್ತು ಒಂದಷ್ಟು ಫೋಟೋಗಳನ್ನೂ ಹಂಚಿಕೊಂಡಿದ್ದಾರೆ.
(7 / 8)
ಹೀಗೆ ಫೋಟೋ ಶೇರ್ ಮಾಡಿದ್ದೇ ತಡ ನೆಟ್ಟಿಗ ವಲಯದಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. "ಕಲೆಯನ್ನ ಪ್ರೀತ್ಸೋದು ಒಂದು ಹಂತ. ಆರಾಧಿಸೋದು ಇನ್ನೊಂದು ಹಂತ. ನೀವು ಆರಾಧಕರು" ಎಂದು ಬೆನ್ನು ತಟ್ಟಿದ್ದಾರೆ.
ಇತರ ಗ್ಯಾಲರಿಗಳು