ಲಕ್ಷ್ಮೀ ನಿವಾಸ ಧಾರಾವಾಹಿ ಚಿನ್ನುಮರಿ ಚಂದನಾ ಅನಂತಕೃಷ್ಣ ಮದುವೆ ನಿಶ್ಚಯ; ಇದೇ ತಿಂಗಳಾಂತ್ಯಕ್ಕೆ ಉದ್ಯಮಿ ಜತೆ ಅದ್ಧೂರಿ ಕಲ್ಯಾಣ
- ಲಕ್ಷ್ಮೀ ನಿವಾಸ ಸೀರಿಯಲ್ ಮೂಲಕ ಸದ್ಯ ಕರುನಾಡಿನ ಕಿರುತೆರೆ ವೀಕ್ಷಕರ ಗಮನ ಸೆಳೆದವರು ಚಿನ್ನುಮರಿ ಜಾಹ್ನವಿ ಅಲಿಯಾಸ್ ನಟಿ ಚಂದನಾ ಅನಂತಕೃಷ್ಣ. ರಿಯಾಲಿಟಿ ಶೋ, ಸೀರಿಯಲ್, ಸಿನಿಮಾ ಹೀಗೆ ಎಲ್ಲ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿರುವ, ಚಂದನಾ ಬದುಕಿನ ಬಹುದೊಡ್ಡ ಘಟ್ಟಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ. ಇದೇ ಮಾಸಾಂತ್ಯಕ್ಕೆ ಚಂದನಾ ಅವರ ಮದುವೆ ನಡೆಯಲಿದೆ.

(1 / 6)
ಕನ್ನಡ ಕಿರುತೆರೆಯಲ್ಲಿ ಹೆಚ್ಚು ಜನರ ಪ್ರೀತಿಗೆ ಪಾತ್ರವಾದವರು ಲಕ್ಷ್ಮೀ ನಿವಾಸ ಸೀರಿಯಲ್ ಖ್ಯಾತಿಯ ಚಿನ್ನುಮರಿ ಜಾನು ಅಲಿಯಾಸ್ ಚಂದನಾ ಅನಂತಕೃಷ್ಣ.(instagram)
(2 / 6)
ಲಕ್ಷ್ಮೀ ನಿವಾಸ ಧಾರಾವಾಹಿ ಖ್ಯಾತಿಯ ನಟಿ ಚಂದನಾ ಅನಂತಕೃಷ್ಣ ಇದೀಗ ದಾಂಪತ್ಯ ಜೀವನಕ್ಕೆ ಕಾಲಿರಿಸಲು ಸಜ್ಜಾಗಿದ್ದಾರೆ.
(3 / 6)
ಈ ಸೀರಿಯಲ್‌ಗೂ ಮೊದಲು ಭರ್ಜರಿ ಬ್ಯಾಚುಲರ್ಸ್ ಶೋನಲ್ಲಿಯೂ ಒಂದಷ್ಟು ಸಂಚಿಕೆ ಕಾಣಿಸಿಕೊಂಡಿದ್ದ ಚಂದನಾ, ಅದಾದ ಬಳಿಕ ಸೀರಿಯಲ್‌ಗೆ ಆಗಮಿಸಿದ್ದರು.
(4 / 6)
ಬಿಗ್ ಬಾಸ್ ಕನ್ನಡ ಸೀಸನ್ 7ರಲ್ಲಿಯೂ ಸ್ಪರ್ಧಿಯಾಗಿದ್ದ ಚಂದನಾ, ಡಾನ್ಸಿಂಗ್ ಚಾಂಪಿಯನ್‌ನಲ್ಲಿಯೂ ಕಾಣಿಸಿಕೊಂಡಿದ್ದರು. ಜತೆಗೆ ಹಲವು ಸೀರಿಯಲ್ ಮತ್ತು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.
(5 / 6)
ಈಗ ಇದೇ ನಟಿ ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ. ಉದ್ಯಮಿ ಪ್ರತ್ಯಕ್ಷ ಎಂಬುವವರ ಜತೆಗೆ ಇದೇ ಮಾಸಾಂತ್ಯಕ್ಕೆ ಹೊಸ ಬಾಳಿಗೆ ಬಲಗಾಲಿಡಲಿದ್ದಾರೆ.
ಇತರ ಗ್ಯಾಲರಿಗಳು