Rachana Dashrath: ನನ್ನ ತಾಯ್ತನ ಇಲ್ಲಿಂದ ಶುರು, ಮೊದಲ ಮಗುವಿನ ನಿರೀಕ್ಷೆಯಲ್ಲಿ ರಚನಾ ದಶರತ್‌; ಖುಷಿಯ ಅಲೆಯಲ್ಲಿ ನಟ ಲೋಕೇಶ್‌ ಬಸವಟ್ಟಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rachana Dashrath: ನನ್ನ ತಾಯ್ತನ ಇಲ್ಲಿಂದ ಶುರು, ಮೊದಲ ಮಗುವಿನ ನಿರೀಕ್ಷೆಯಲ್ಲಿ ರಚನಾ ದಶರತ್‌; ಖುಷಿಯ ಅಲೆಯಲ್ಲಿ ನಟ ಲೋಕೇಶ್‌ ಬಸವಟ್ಟಿ

Rachana Dashrath: ನನ್ನ ತಾಯ್ತನ ಇಲ್ಲಿಂದ ಶುರು, ಮೊದಲ ಮಗುವಿನ ನಿರೀಕ್ಷೆಯಲ್ಲಿ ರಚನಾ ದಶರತ್‌; ಖುಷಿಯ ಅಲೆಯಲ್ಲಿ ನಟ ಲೋಕೇಶ್‌ ಬಸವಟ್ಟಿ

  • Rachana Dashrath: ಕನ್ನಡದ ಸಿನಿಮಾ ಮತ್ತು ಕಿರುತೆರೆಯಲ್ಲಿ ಗುರುತಿಸಿಕೊಂಡ ಲೋಕೇಶ್‌ ಬಸವಟ್ಟಿ ಮತ್ತು ರಚನಾ ದಶರಥ್‌ ದಂಪತಿ, ಇದೀಗ ಖುಷಿಯ ಅಲೆಯಲ್ಲಿ ತೇಲುತ್ತಿದ್ದಾರೆ. ಇಬ್ಬರಿದ್ದವರೀಗ ಮೂವರಾಗುವ ಕಾತರದಲ್ಲಿದ್ದಾರೆ. ಈ ಸಂಭ್ರಮದ ಕ್ಷಣವನ್ನು ರಚನಾ ಹೇಳಿಕೊಂಡಿದ್ದಾರೆ.

ಕಿರುತೆರೆಯಲ್ಲಿ ಹಾಸ್ಯನಟನಾಗಿ ಗುರುತಿಸಿಕೊಂಡಿದ್ದಾರೆ ಲೋಕೇಶ್‌ ಬಸವಟ್ಟಿ. ಪತ್ನಿ ರಚನಾ ದಶರಥ್‌ ಸಹ ಸಿನಿಮಾ ಮತ್ತು ಸೀರಿಯಲ್‌ ಎರಡರಲ್ಲೂ ಗುರುತಿಸಿಕೊಂಡಿದ್ದಾರೆ.
icon

(1 / 8)

ಕಿರುತೆರೆಯಲ್ಲಿ ಹಾಸ್ಯನಟನಾಗಿ ಗುರುತಿಸಿಕೊಂಡಿದ್ದಾರೆ ಲೋಕೇಶ್‌ ಬಸವಟ್ಟಿ. ಪತ್ನಿ ರಚನಾ ದಶರಥ್‌ ಸಹ ಸಿನಿಮಾ ಮತ್ತು ಸೀರಿಯಲ್‌ ಎರಡರಲ್ಲೂ ಗುರುತಿಸಿಕೊಂಡಿದ್ದಾರೆ.(Instagram/ Rachana Dashrath)

ಹೀಗೆ ಬಣ್ಣದ ಲೋಕದಲ್ಲಿ ಸಕ್ರಿಯರಾಗಿರುವ ಈ ಜೋಡಿ ಇದೇ ವರ್ಷದ ಜನವರಿಯಲ್ಲಿ ಎರಡೂ ಕುಟುಂಬಗಳ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದರು. 
icon

(2 / 8)

ಇದೀಗ ಈ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ. ನಟಿ ರಚನಾ ದಶರಥ್‌ ಗರ್ಭಿಣಿಯಾಗಿದ್ದು, ಮಗುವಿನ ಆಗಮನಕ್ಕೆ ದಿನ ಎಣಿಸುತ್ತಿದ್ದಾರೆ.
icon

(3 / 8)

ಈ ವಿಚಾರವನ್ನು ಸೋಷಿಯಲ್‌ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ರಚನಾ, ತಾಯ್ತನ ಇಲ್ಲಿಂದ ಶುರುವಾಗಲಿ ಎಂದು ಬರೆದುಕೊಂಡಿದ್ದಾರೆ. 
icon

(4 / 8)

"ಈ ಖುಷಿಯನ್ನು ನಾನು ಹೇಗೆ ವರ್ಣಿಸಲಿ ಮತ್ತು ಪದಗಳ ಮೂಲಕ ಹೇಗೆ ಅಭಿವ್ಯಕ್ತಪಡಿಸಲಿ ಎಂದು ತುಂಬ ಯೋಚಿಸಿದೆ. ಆ ಪೈಕಿ ತಾಯ್ತನ ಅನ್ನೋ ಪದವನ್ನು ಮೀರಿಸುವ ಯಾವ ಒದವೂ ನನಗೆ ಸಿಗಲಿಲ್ಲ. ಇದೀಗ ನನ್ನ ತಾಯ್ತನದ ಪಯಣವನ್ನು ಆರಂಭಿಸಿದ್ದೇನೆ" ಎಂದಿದ್ದಾರೆ. 
icon

(5 / 8)

ಇದೇ ವರ್ಷದ ಜನವರಿ 27ರ ಶುಕ್ರವಾರದಂದು ಲೋಕೇಶ್‌ ಬಸವಟ್ಟಿ ಮತ್ತು ರಚನಾ ಇಲ್ಲಿನ ಅನುಭವ ಮಂಟಪದಲ್ಲಿ ಎರಡೂ ಕುಟುಂಬಗಳ ಸಮ್ಮುಖದಲ್ಲಿ ವಿವಾಹ ಕಾರ್ಯ ನೆರವೇರಿತ್ತು. 
icon

(6 / 8)

ಅಂದಹಾಗೆ ಈ ಜೋಡಿಯದ್ದು ಮನೆಯವರು ನಿಶ್ಚಯಿಸಿದ ಮದುವೆಯಲ್ಲ. ಒಟ್ಟಿಗೆ ಒಂದೇ ಧಾರಾವಾಹಿಯಲ್ಲಿ ಕೆಲಸ ಮಾಡುವ ವೇಳೆ, ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಯಾಗಿ, ಪ್ರೀತಿ ಮದುವೆಯವರೆಗೂ ಬಂದಿತ್ತು. ಇದೀಗ ಆ ಪ್ರೀತಿಯ ಪ್ರತೀಕವಾಗಿ ಕಂದಮ್ಮನ ನಿರೀಕ್ಷೆಯಲ್ಲಿದೆ ಈ ಜೋಡಿ. 
icon

(7 / 8)

ಇದೀಗ ತುಂಬು ಗರ್ಭಿಣಿಯಾಗಿರುವ ರಚನಾ, ಪತಿ ಮತ್ತವರ ಕುಟುಂಬದ ಆರೈಕೆಯಲ್ಲಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿಯೂ ಸಕ್ರಿಯರಿರುವ ಈ ಜೋಡಿ ರೀಲ್ಸ್‌ ಮೂಲಕವೂ ಆಗಮಿಸುತ್ತಿರುತ್ತಾರೆ.   
icon

(8 / 8)

ಇತರ ಗ್ಯಾಲರಿಗಳು