Suryavamsha Serial: ಮರಳಿದೆ ಭವ್ಯ ಪರಂಪರೆ, ಮಾರ್ಚ್‌ 11ರಿಂದ ಅನಿರುದ್ಧ್‌ ಜತ್ಕರ್‌ ಸೂರ್ಯವಂಶ ಧಾರಾವಾಹಿ ಶುರು-kannada television news aniruddh jatkar suryavamsha kannada serial telecast date and timing locked uday tv serials mnk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Suryavamsha Serial: ಮರಳಿದೆ ಭವ್ಯ ಪರಂಪರೆ, ಮಾರ್ಚ್‌ 11ರಿಂದ ಅನಿರುದ್ಧ್‌ ಜತ್ಕರ್‌ ಸೂರ್ಯವಂಶ ಧಾರಾವಾಹಿ ಶುರು

Suryavamsha Serial: ಮರಳಿದೆ ಭವ್ಯ ಪರಂಪರೆ, ಮಾರ್ಚ್‌ 11ರಿಂದ ಅನಿರುದ್ಧ್‌ ಜತ್ಕರ್‌ ಸೂರ್ಯವಂಶ ಧಾರಾವಾಹಿ ಶುರು

  • ಅನಿರುದ್ಧ್‌ ಜತ್ಕರ್‌ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಸೂರ್ಯವಂಶ ಸೀರಿಯಲ್‌ ಘೋಷಣೆ ಆದ ಬಳಿಕ ಸಾಕಷ್ಟು ಕುತೂಹಲ ಮೂಡಿಸಿತ್ತು. ಪ್ರೋಮೋ ಸಹ ಅಚ್ಚರಿಯ ರೀತಿಯಲ್ಲಿ ಮೂಡಿಬಂದಿತ್ತು. ಈಗ ಆ ಧಾರಾವಾಹಿ ಪ್ರಸಾರಕ್ಕೆ ದಿನಾಂಕ ನಿಗದಿಯಾಗಿದೆ. ಮಾ. 11ರಿಂದ ಉದಯ ಟಿವಿಯಲ್ಲಿ ರಾತ್ರಿ 8 ಗಂಟೆಗೆ ಶುರುವಾಗಲಿದೆ.

’ಸೂರ್ಯವಂಶ’ ಸೀರಿಯಲ್‌ ಪ್ರಸಾರಕ್ಕೆ ದಿನಗಣನೆ ಶುರುವಾಗಿದೆ. ಮಾರ್ಚ್ 11ರಿಂದ ಈ ಧಾರಾವಾಹಿ ಉದಯ ವಾಹಿನಿಯಲ್ಲಿ ಶುರುವಾಗಲಿದೆ. 
icon

(1 / 6)

ಹರಿ ಸಂತೋಷ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಧಾರಾವಾಹಿಯಲ್ಲಿ ಅನಿರುದ್ಧ್‌ ಜತ್ಕರ್‌ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. 
icon

(2 / 6)

ಇದೀಗ ಇದೇ ಸೀರಿಯಲ್‌ ಬಗ್ಗೆ ನಾಡಿನ ಜನರ ಗಮನ ಸೆಳೆಯಲು ಪ್ರಚಾರಕ್ಕೆ ಇಳಿದಿದೆ. ಅದಕ್ಕೆಂದೇ, ರಾಜ್ಯಾದ್ಯಂತ ಐದು ಪ್ರಚಾರ ವಾಹನಗಳಿಗೆ ಚಾಲನೆ ನೀಡಿದೆ ಸೀರಿಯಲ್‌ ತಂಡ. 
icon

(3 / 6)

ಬೆಂಗಳೂರಿನ ಬಸವನಗುಡಿಯಲ್ಲಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ವಾಹನ ಪೂಜೆ ನಡೆಯಿತು. ಕಲಾವಿದರು, ತಂತ್ರಜ್ಞರು ಸೂರ್ಯವಂಶ ಸೀರಿಯಲ್‌ ಬಾವುಟ ತೋರಿಸಿ ವಾಹನಗಳಿಗೆ ಚಾಲನೆ ನೀಡಿದರು. 
icon

(4 / 6)

ನಾಯಕ ಅನಿರುದ್ದ್‌ ಜತ್ಕರ್‌, ನಾಯಕಿ ಅಶ್ವಿನಿ, ಹಿರಿಯ ನಟ ಸುಂದರ್‌ ರಾಜ್, ನಿರ್ದೇಶಕ ಹರಿಸಂತು, ಸಂಚಿಕೆ ನಿರ್ದೇಶಕ ಪ್ರಕಾಶ್ ಮುಚ್ಚಳಗುಡ್ಡ, ಛಾಯಾಗ್ರಾಹಕ ಶಿವರಾಜು.ಎಂ.ಆರ್ ಇತರರು ಪೂಜೆ ವೇಳೆ ಇದ್ದರು. 
icon

(5 / 6)

ಮರಳಿದೆ ಭವ್ಯ ಪರಂಪರೆ ಎಂಬ ಅಡಿಬರಹದೊಂದಿಗೆ ಸೂರ್ಯವಂಶ ಧಾರಾವಾಹಿಯು ಮಾರ್ಚ್‌ 11ರಿಂದ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 8ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.
icon

(6 / 6)

ಇತರ ಗ್ಯಾಲರಿಗಳು