ಶಿವನನ್ನು ಭೇಟಿಯಾದ ಸತಿ; ಅಣ್ಣ ಅತ್ತಿಗೆ ಜತೆಗೆ ಚಿಕ್ಕಬಳ್ಳಾಪುರದ ಆದಿಯೋಗಿಯ ದರ್ಶನ ಪಡೆದ ಬಿಗ್‌ಬಾಸ್ ಸಂಗೀತಾ ಶೃಂಗೇರಿ PHOTOS
- ಕನ್ನಡ ಕಿರುತೆರೆ ಮತ್ತು ಸಿನಿಮಾ ನಟಿ ಸಂಗೀತಾ ಶೃಂಗೇರಿ ಇತ್ತೀಚೆಗಷ್ಟೇ ಚಿಕ್ಕಬಳ್ಳಾಪುರದ ಈಶ ಫೌಂಡೇಷನ್‌ನಲ್ಲಿನ ಆದಿಯೋಗಿ ದರ್ಶನ ಪಡೆದಿದ್ದಾರೆ. ಅಣ್ಣ ಅತ್ತಿಗೆ ಜತೆಗೆ ಗುರುಪೂರ್ಣಿಮೆ ನಿಮಿತ್ತ ಶಿವನ ದರ್ಶನ ಪಡೆದಿದ್ದಾರೆ ಸತಿ. ಈ ಭೇಟಿ ಕ್ಷಣದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

(1 / 6)
ಬಿಗ್ ಬಾಸ್‌ನಲ್ಲಿದ್ದಾಗ ದೊಡ್ಡ ಸುದ್ದಿಯಾಗಿದ್ದ ನಟಿ ಸಂಗೀತಾ ಶೃಂಗೇರಿ, ಸದ್ಯ ಕುಟುಂಬದ ಜತೆಗೆ ಸಮಯ ಕಳೆಯುತ್ತಿದ್ದಾರೆ.
(2 / 6)
ಈ ನಡುವೆ ಇದೇ ಸಂಗೀತಾ ಗುರುಪೂರ್ಣಿಮೆ ನಿಮಿತ್ತ ಚಿಕ್ಕಬಳ್ಳಾಪುರ ಬಳಿಯ ಆದಿಯೋಗಿ ಈಶ್ ಫೌಂಡೇಷನ್‌ಗೆ ಭೇಟಿ ನೀಡಿದ್ದಾರೆ.
(3 / 6)
ಅಣ್ಣ ಸಂತೋಷ್ ಅತ್ತಿಗೆ ಸುಚಿತ್ರಾ ಜತೆಗೆ ಆದಿಯೋಗಿಯ ದರ್ಶನ್ ಪಡೆದು ಮರಳಿದ್ದಾರೆ. ಆದಿಯೋಗಿಯ ಒಂದಷ್ಟು ಫೋಟೋಗಳನ್ನೂ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
(4 / 6)
ನಟಿಯ ಈ ಫೋಟೋಗಳಿಗೆ ನೆಟ್ಟಗರು ಬಗೆ ಬಗೆ ಕಾಮೆಂಟ್‌ಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲವರು ಕವಿತೆ ಬರೆಯುತ್ತಿದ್ದಾರೆ.
(5 / 6)
ಕನ್ನಡದ ಹುಡುಗಿ ನಮ್ಮ ಸಂಗೀತಾ ಇವಳಾಡುವ ಕನ್ನಡ ಮನಮೋಹಕ ಇವಳ ಹಣೆಯ ಮೇಲಿದೆ ಕನ್ನಡದ ತಿಲಕ ಇವಳೊಂದು ಅಪ್ಪಟ ಕನಕ (ಚಿನ್ನ) ಇವಳ ಸೌಂದರ್ಯ ನೋಡಿ ನಾನಾದೆ ಪುಳಕ ಇವಳಿಗೆ ನನ್ನ ಈ ಕವಿತೆ ಸಮರ್ಪಕ ಎಂಬ ಕಾಂಪ್ಲಿಮೆಂಟ್‌ಗಳೂ ಸಂದಾಯವಾಗ್ತಿವೆ.
ಇತರ ಗ್ಯಾಲರಿಗಳು