ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಉದ್ಯಮದ ಜತೆ ಜತೆಗೆ ಸಿನಿಮಾ ನಿರ್ಮಾಣಕ್ಕಿಳಿದ ಬಿಗ್‌ ಬಾಸ್‌ ಖ್ಯಾತಿಯ ತನಿಷಾ ಕುಪ್ಪಂಡ: ಹೀರೋ ಯಾರಿರಬಹುದು?

ಉದ್ಯಮದ ಜತೆ ಜತೆಗೆ ಸಿನಿಮಾ ನಿರ್ಮಾಣಕ್ಕಿಳಿದ ಬಿಗ್‌ ಬಾಸ್‌ ಖ್ಯಾತಿಯ ತನಿಷಾ ಕುಪ್ಪಂಡ: ಹೀರೋ ಯಾರಿರಬಹುದು?

  • ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ಸ್ಪರ್ಧಿಯಾಗಿದ್ದ ನಟಿ ತನಿಷಾ ಕುಪ್ಪಂಡ, ತಮ್ಮ ಬೋಲ್ಡ್‌ ಮಾತುಗಳಿಂದಲೇ ಸದಾ ಸುದ್ದಿಯಲ್ಲಿರುತ್ತಾರೆ. ಸಂದರ್ಶನಗಳಲ್ಲಿ ತಮ್ಮ ಜೀವನದ ಸಿಹಿ ಕಹಿ ಘಟನೆಗಳನ್ನು ಮೆಲುಕು ಹಾಕುತ್ತ, ಟೀಕಿಸಿದವರಿಗೆ ಕಟು ಮಾತಲ್ಲೇ ಚಾಟಿ ಬೀಸುತ್ತಿರುತ್ತಾರೆ. ಇದಿಗ ಇದೇ ನಟಿ ಉದ್ಯಮದ ಜತೆಗೆ ಮತ್ತೊಂದು ಹಂತಕ್ಕೆ ಮೇಲಕ್ಕೆ ಹೊರಟಿದ್ದಾರೆ.

ಬಿಗ್‌ ಬಾಸ್‌ ಮುಗಿಸಿ ಮರಳಿದ ಬಳಿಕ ಇದು ನನ್ನ ಎರಡನೇ ಜನ್ಮ ಎಂದು ತನಿಷಾ ಹೇಳಿದ್ದರು. ತಮ್ಮ ನೈಜ ಗುಣದಿಂದಲೇ, ಆಡುವ ಮಾತಿನಿಂದಲೇ ಬೆಂಕಿ ಎಂದೇ ಕರೆಸಿಕೊಂಡಿದ್ದರು. 
icon

(1 / 9)

ಬಿಗ್‌ ಬಾಸ್‌ ಮುಗಿಸಿ ಮರಳಿದ ಬಳಿಕ ಇದು ನನ್ನ ಎರಡನೇ ಜನ್ಮ ಎಂದು ತನಿಷಾ ಹೇಳಿದ್ದರು. ತಮ್ಮ ನೈಜ ಗುಣದಿಂದಲೇ, ಆಡುವ ಮಾತಿನಿಂದಲೇ ಬೆಂಕಿ ಎಂದೇ ಕರೆಸಿಕೊಂಡಿದ್ದರು. (Instagram/ Tanisha Kuppanda)

ಹಾಗೆ ಬಿಗ್‌ಬಾಸ್‌ ಮುಗಿದ ಬಳಿಕ ಉದ್ಯಮಗಳಲ್ಲಿಯೂ ಬಿಜಿಯಾದರು. ಜ್ಯುವೆಲ್ಲರಿ ಶಾಪ್‌ ತೆರೆದರು. ಅಪ್ಪುಸ್‌ ಕಿಚನ್‌ ಹೆಸರಿನ ನಾನ್‌ವೆಜ್‌ ರೆಸ್ಟೋರಂಟ್‌ ಸಹ ಹೊಂದಿದ್ದಾರೆ ತನಿಷಾ. 
icon

(2 / 9)

ಬೆಂಗಳೂರಿನ ಎನ್‌ಎಂಕೆಆರ್‌ವಿ ಕಾಲೇಜಿನಲ್ಲಿ ಬಿಬಿಎಂ ಪದವಿ ಪಡೆದಿರುವ ನಟಿ ತನಿಷಾ, ಸಿನಿಮಾ ಕೆಲಸಗಳಲ್ಲಿಯೂ ಬಿಜಿಯಾಗಿದ್ದಾರೆ. 
icon

(3 / 9)

ಇತ್ತೀಚೆಗಷ್ಟೇ ಸೆಬಾಸ್ಟಿಯನ್‌ ಡೇವಿಡ್‌ ನಿರ್ದೇಶನದಲ್ಲಿ ಮೂಡಿಬರಲಿರುವ ಪೆನ್‌ಡ್ರೈವ್‌ ಸಿನಿಮಾದಲ್ಲಿ ಪೊಲೀಸ್‌ ಅಧಿಕಾರಿಯಾಗಿಯೂ ನಟಿಸುತ್ತಿದ್ದಾರೆ ತನಿಷಾ.
icon

(4 / 9)

ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ತನಿಷಾ ಸಿನಿಮಾಗಳಲ್ಲಿ ನಟಿಸುವುದರ ಜತೆಗೆ ಚಿತ್ರ ನಿರ್ಮಾಣಕ್ಕೂ ಇಳಿದಿದ್ದಾರೆ. ಈ ವಿಚಾರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
icon

(5 / 9)

ನಮ್ಮ ಹೊಸ ಹೆಜ್ಜೆ Brand New Step ನಿಮ್ಮೆಲ್ಲರ ಸಹಕಾರ ನಮ್ಮ ಈ ಹೊಸ ಪ್ರಯತ್ನದ ಮೇಲೆ ಹೊಳೆಯಾಗಿ ಹರಿಯಲಿ. ನಿಮ್ಮ ಪ್ರೀತಿ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ. ಇಂತಿ ನಿಮ್ಮ ಪ್ರೀತಿಯ ಬೆಂಕಿ ಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ. 
icon

(6 / 9)

ನಟ ಕೋಮಲ್‌ ಜತೆಗಿನ ಎರಡು ಫೋಟೋಗಳನ್ನು ಶೇರ್‌ ಮಾಡಿಕೊಂಡು, ಕುಪ್ಪಂಡಾಸ್‌ ಪ್ರೊಡಕ್ಷನ್‌ ಹೌಸ್‌ ಎಂದೂ ಹ್ಯಾಷ್‌ಟ್ಯಾಗ್‌ ಹಾಕಿದ್ದಾರೆ. 
icon

(7 / 9)

.ಶೀಘ್ರದಲ್ಲಿ ಶೀರ್ಷಿಕೆ ಅನಾವರಣವಾಗಲಿದೆ ಎಂದೂ ಸುಳಿವು ನೀಡಿದ್ದಾರೆ.
icon

(8 / 9)

.ಶೀಘ್ರದಲ್ಲಿ ಶೀರ್ಷಿಕೆ ಅನಾವರಣವಾಗಲಿದೆ ಎಂದೂ ಸುಳಿವು ನೀಡಿದ್ದಾರೆ.

ಹಾಗಾದರೆ, ಶೀರ್ಷಿಕೆ ಏನು? ಯಾವ ಥರದ ಸಿನಿಮಾ? ಹೀರೋ ಯಾರು? ಈ ಎಲ್ಲ ಮಾಹಿತಿಯನ್ನು ಇನ್ನೇನು ಶೀಘ್ರದಲ್ಲಿಯೇ ನೀಡಲಿದ್ದಾರೆ ತನಿಷಾ.  
icon

(9 / 9)

ಇತರ ಗ್ಯಾಲರಿಗಳು