Vinay Gowda: ರಕ್ತದಲ್ಲಿ ತನ್ನ ಚಿತ್ರ ಬಿಡಿಸಿದ ಅಭಿಮಾನಿಗೆ ಮಹಾತ್ಮ ಗಾಂಧೀಜಿ ಬಗ್ಗೆ ಪಾಠ ಮಾಡಿದ ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ
- Vinay Gowda: ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ ಆ ಕಾರಣಕ್ಕಾಗಿಯೇ ಫಿನಾಲೆವರೆಗೂ ಅವರ ಆಗಮನವಾಗಿತ್ತು. ಹೀಗಿರುವ ವಿನಯ್ ಗೌಡ ಅಭಿಮಾನಿಯೊಬ್ಬ ರಕ್ತದಲ್ಲಿಯೇ ಅವರ ಭಾವಚಿತ್ರ ಬಿಡಿಸಿದ್ದಾನೆ. ಅಭಿಮಾನಿಯ ಈ ಕೆಲಸಕ್ಕೆ ವಿನಯ್ ಹೀಗೊಂದು ವಿಶೇಷ ಮನವಿ ಮಾಡಿದ್ದಾರೆ.

(1 / 6)
ಸಿನಿಮಾ ಸೆಲೆಬ್ರಿಟಿಗಳ ಮೇಲಿನ ಅಭಿಮಾನವನ್ನು ಅಷ್ಟೇ ವಿಶೇಷವಾಗಿ ಪ್ರದರ್ಶಿಸುತ್ತಿರುತ್ತಾರೆ ಅವರ ಫ್ಯಾನ್ಸ್. ಇದೀಗ ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ಅವರ ಮೇಲಿನ ಪ್ರೀತಿಗೆ ರಕ್ತದಲ್ಲಿಯೇ ಅವರ ಚಿತ್ರ ಬಿಡಿಸಿದ್ದಾನೆ. ಇದು ವಿನಯ್ ಗಮನಕ್ಕೂ ಬಂದಿದೆ. ಈ ಕುರಿತು ವಿಶೇಷ ಕಾಮೆಂಟ್‌ವೊಂದನ್ನು ಅಭಿಮಾನಿಯ ಪೋಸ್ಟ್‌ಗೆ ಹಾಕಿದ್ದಾರೆ. ಹೀಗಿದೆ. ಅವರ ಮಾತು.
(2 / 6)
ಮೊದಲನೇದಾಗಿ ರಕ್ತವನ್ನು ಬಳಸಿ ಈ ರೀತಿಯಲ್ಲಿ ನೀವು ನಿಮ್ಮ ಕಲೆಯನ್ನು ಹೊರಹಾಕಿದ್ದೀರಿ. ನಾನು ನಿಮ್ಮ ಕಲೆಗೆ ಕೃತಜ್ಞತೆ ಹೇಳುತ್ತೇನೆ. ಆದರೆ, ಈ ರೀತಿಯ ಕೆಲಸಕ್ಕೆ ರಕ್ತ ಬಳಸುವುದು ಸರಿಯಲ್ಲ. ಹಾಗಾಗಿ ಇನ್ಯಾವತ್ತೂ ನೀವು ರಕ್ತವನ್ನು ಬಳಸಬೇಡಿ.
(3 / 6)
ಸಾಧ್ಯವಾದರೆ, ಅಗತ್ಯ ಇರುವವರಿಗೆ ನಿಮ್ಮ ರಕ್ತವನ್ನು ದಾನ ಮಾಡಿ. ಅದರಿಂದ ಇನ್ನೊಬ್ಬರಿಗೂ ಪ್ರೋತ್ಸಾಹ ಸಿಗುತ್ತದೆ. ಆಗ ನಾನೂ ನಿಮ್ಮನ್ನು ಪ್ರೋತ್ಸಾಹಿಸುತ್ತೇನೆ ಎಂದಿದ್ದಾರೆ.
(4 / 6)
ನಿಮ್ಮ ನಿಸ್ವಾರ್ಥ ಸೇವೆಯಿಂದ ಒಂದು ಜೀವವನ್ನು ಉಳಿಸಬಹುದು. ಆಗ ಕಲೆ ರೂಪದಲ್ಲಿ ಬಿಡಿಸಿರುವ ಈ ನನ್ನ ಫೋಟೋವನ್ನೂ ಅದು ಮೀರಿಸುತ್ತದೆ. (ಫೋಟೋದಲ್ಲಿರುವವರು ಚಿತ್ರಕ್ಕಾಗಿ ರಕ್ತ ನೀಡಿದ ಫ್ಯಾನ್)
(5 / 6)
ಮಹಾತ್ಮ ಗಾಂಧಿಯವರು ಹೇಳಿದಂತೆ, ನಿಮ್ಮನ್ನು ಕಂಡುಕೊಳ್ಳುವ ಉತ್ತಮ ಮಾರ್ಗವೆಂದರೆ, ಇತರರ ಸೇವೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವುದು.
ಇತರ ಗ್ಯಾಲರಿಗಳು