ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Varun Aradya: ಬೃಂದಾವನ ಧಾರಾವಾಹಿ ಮುಗೀತಿದ್ದಂತೆ, ನಟನೆಯಲ್ಲಿ ಪಳಗಲು ರಂಗಭೂಮಿ ಕಡೆ ವಾಲಿದ ವರುಣ್‌ ಆರಾಧ್ಯ

Varun Aradya: ಬೃಂದಾವನ ಧಾರಾವಾಹಿ ಮುಗೀತಿದ್ದಂತೆ, ನಟನೆಯಲ್ಲಿ ಪಳಗಲು ರಂಗಭೂಮಿ ಕಡೆ ವಾಲಿದ ವರುಣ್‌ ಆರಾಧ್ಯ

  • Varun Aradya: ಕಲರ್ಸ್‌ ಕನ್ನಡದಲ್ಲಿ ಇತ್ತೀಚೆಗಷ್ಟೇ ಮುಕ್ತಾಯವಾದ ಬೃಂದಾವನ ಸೀರಿಯಲ್‌ನಲ್ಲಿ ನಾಯಕನಾಗಿ ವರುಣ್‌ ಆರಾಧ್ಯ ನಟಿಸಿದ್ದರು. ರೀಲ್ಸ್‌ ಮೂಲಕ ಗಮನಸೆಳೆದು, ಕಿರುತೆರೆ ಪ್ರೇಕ್ಷಕರಿಗೂ ಬೃಂದಾವನ ಧಾರಾವಾಹಿ ಮೂಲಕ ಹತ್ತಿರವಾಗಿದ್ದರು. ಈಗ ಇದೇ ನಟ ನಟನೆಯನ್ನು ಮತ್ತಷ್ಟು ಮೊನಚಾಗಿಸಿಕೊಳ್ಳಲು ರಂಗಭೂಮಿಯ ಮೊರೆ ಹೋಗಿದ್ದಾರೆ.

ರೀಲ್ಸ್‌ ಮೂಲಕ ಗಮನ ಸೆಳೆದು, ಸೋಷಿಯಲ್‌ ಮೀಡಿಯಾದಲ್ಲಿಯೂ ಅಪಾರ ಫ್ಯಾಲೋವರ್ಸ್‌ ಸಂಪಾದಿಸಿದವರ ಪೈಕಿ ವರುಣ್‌ ಆರಾಧ್ಯ ಸಹ ಒಬ್ಬರು. 
icon

(1 / 6)

ರೀಲ್ಸ್‌ ಮೂಲಕ ಗಮನ ಸೆಳೆದು, ಸೋಷಿಯಲ್‌ ಮೀಡಿಯಾದಲ್ಲಿಯೂ ಅಪಾರ ಫ್ಯಾಲೋವರ್ಸ್‌ ಸಂಪಾದಿಸಿದವರ ಪೈಕಿ ವರುಣ್‌ ಆರಾಧ್ಯ ಸಹ ಒಬ್ಬರು. (instagram\ Varun Aradya)

ಆ ರೀಲ್ಸ್‌ ಪ್ರಭಾವದಿಂದಲೇ ರಾತ್ರೋ ರಾತ್ರಿ ಕಲರ್ಸ್‌ ಕನ್ನಡದ ಬೃಂದಾವನ ಸೀರಿಯಲ್‌ಗೆ ನಾಯಕ ನಟನಾಗಿ ಅಚ್ಚರಿಯ ಎಂಟ್ರಿ ಪಡೆದಿದ್ದರು ವರುಣ್.‌ 
icon

(2 / 6)

ಆ ರೀಲ್ಸ್‌ ಪ್ರಭಾವದಿಂದಲೇ ರಾತ್ರೋ ರಾತ್ರಿ ಕಲರ್ಸ್‌ ಕನ್ನಡದ ಬೃಂದಾವನ ಸೀರಿಯಲ್‌ಗೆ ನಾಯಕ ನಟನಾಗಿ ಅಚ್ಚರಿಯ ಎಂಟ್ರಿ ಪಡೆದಿದ್ದರು ವರುಣ್.‌ 

ಇದೀಗ ಇದೇ ಬೃಂದಾವನ ಸೀರಿಯಲ್‌ ಇತ್ತೀಚೆಗಷ್ಟೇ ಮುಕ್ತಾಯವಾಗಿದೆ. ಹಾಗಾದರೆ, ವರುಣ್‌ ಆರಾಧ್ಯ ಏನು ಮಾಡ್ತಿರಬಹುದು. ಅದಕ್ಕೂ ಅವರೇ ಉತ್ತರ ನೀಡಿದ್ದಾರೆ. 
icon

(3 / 6)

ಇದೀಗ ಇದೇ ಬೃಂದಾವನ ಸೀರಿಯಲ್‌ ಇತ್ತೀಚೆಗಷ್ಟೇ ಮುಕ್ತಾಯವಾಗಿದೆ. ಹಾಗಾದರೆ, ವರುಣ್‌ ಆರಾಧ್ಯ ಏನು ಮಾಡ್ತಿರಬಹುದು. ಅದಕ್ಕೂ ಅವರೇ ಉತ್ತರ ನೀಡಿದ್ದಾರೆ. 

ನಟನೆಯಲ್ಲಿ ಇನ್ನಷ್ಟು ಪಳಗಲು ರಂಗಭೂಮಿಗೆ ಎಂಟ್ರಿಕೊಟ್ಟಿದ್ದಾರೆ. ರಂಗದ ಮೇಲೆ ನಾಟಕಗಳನ್ನು ಮಾಡುತ್ತ, ಆಕ್ಟಿಂಗ್‌ ಕಲಿಯುತ್ತಿದ್ದಾರೆ. 
icon

(4 / 6)

ನಟನೆಯಲ್ಲಿ ಇನ್ನಷ್ಟು ಪಳಗಲು ರಂಗಭೂಮಿಗೆ ಎಂಟ್ರಿಕೊಟ್ಟಿದ್ದಾರೆ. ರಂಗದ ಮೇಲೆ ನಾಟಕಗಳನ್ನು ಮಾಡುತ್ತ, ಆಕ್ಟಿಂಗ್‌ ಕಲಿಯುತ್ತಿದ್ದಾರೆ. 

ರೂಪಾಂತರ ತಂಡದ ಜತೆಗೆ ಕೈ ಜೋಡಿಸಿರುವ ವರುಣ್‌, ಪರಸಂಗದ ಗೆಂಡೆತಿಮ್ಮ ನಾಟಕದಲ್ಲಿ ಅಭಿನಯಿಸಿದ್ದಾರೆ. 
icon

(5 / 6)

ರೂಪಾಂತರ ತಂಡದ ಜತೆಗೆ ಕೈ ಜೋಡಿಸಿರುವ ವರುಣ್‌, ಪರಸಂಗದ ಗೆಂಡೆತಿಮ್ಮ ನಾಟಕದಲ್ಲಿ ಅಭಿನಯಿಸಿದ್ದಾರೆ. 

ಸೋಷಿಯಲ್‌ ಮೀಡಿಯಾದಲ್ಲಿ ರಂಗದ ಮೇಲಿನ ಒಂದಷ್ಟು ಫೋಟೋಗಳನ್ನು ಶೇರ್‌ ಮಾಡಿ, "ನನ್ನ ರಂಗಭೂಮಿಯ ಮೊದಲ ಹೆಜ್ಜೆ ಪರಸಂಗದ ಗೆಂಡೆತಿಮ್ಮ ನಾಟಕದ ಮೂಲಕ ಪ್ರಾರಂಭ" ಎಂದು ಬರೆದುಕೊಂಡಿದ್ದಾರೆ.  
icon

(6 / 6)

ಸೋಷಿಯಲ್‌ ಮೀಡಿಯಾದಲ್ಲಿ ರಂಗದ ಮೇಲಿನ ಒಂದಷ್ಟು ಫೋಟೋಗಳನ್ನು ಶೇರ್‌ ಮಾಡಿ, "ನನ್ನ ರಂಗಭೂಮಿಯ ಮೊದಲ ಹೆಜ್ಜೆ ಪರಸಂಗದ ಗೆಂಡೆತಿಮ್ಮ ನಾಟಕದ ಮೂಲಕ ಪ್ರಾರಂಭ" ಎಂದು ಬರೆದುಕೊಂಡಿದ್ದಾರೆ.  

ಇತರ ಗ್ಯಾಲರಿಗಳು