ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಡಿವೋರ್ಸ್‌ ಬಳಿಕ ಚಂದನ್‌ ಶೆಟ್ಟಿ ಕಡೆಯಿಂದ ನಿವೇದಿತಾ ಗೌಡಗೆ ಸಿಕ್ಕ ಜೀವನಾಂಶ ಎಷ್ಟು? ವಕೀಲರು ಹೇಳಿದ್ದೇನು?

ಡಿವೋರ್ಸ್‌ ಬಳಿಕ ಚಂದನ್‌ ಶೆಟ್ಟಿ ಕಡೆಯಿಂದ ನಿವೇದಿತಾ ಗೌಡಗೆ ಸಿಕ್ಕ ಜೀವನಾಂಶ ಎಷ್ಟು? ವಕೀಲರು ಹೇಳಿದ್ದೇನು?

  • ಬಿಗ್‌ಬಾಸ್‌ ಮೂಲಕ ಪರಿಚತರಾಗಿ ಮದುವೆಯಾಗಿದ್ದ ಚಂದನ್‌ ಶೆಟ್ಟಿ ಮತ್ತು ನಿವೇದಿತಾ ಗೌಡ ಜೋಡಿ ಶುಕ್ರವಾರ ವಿಚ್ಛೇದನ ಪಡೆದುಕೊಂಡಿದೆ. ಇಬ್ಬರು ಪರಸ್ಪರ ಒಪ್ಪಿಗೆ ಪಡೆದುಕೊಂಡೇ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಹಾಗಾದರೆ, ಡಿವೋರ್ಸ್‌ ಬಳಿಕ ಚಂದನ್‌ ಶೆಟ್ಟಿ ಕಡೆಯಿಂದ ನಿವೇದಿತಾಗೆ ಸಿಕ್ಕ ಜೀವನಾಂಶವೆಷ್ಟು?

2020ರ ಫೆಬ್ರವರಿಯಲ್ಲಿ ಬಾಳ ಬಂಧನಕ್ಕೆ ಬಲಗಾಲಿಟ್ಟಿದ್ದ ಸಂಗೀತ ನಿರ್ದೇಶಕ ಚಂದನ್‌ ಶೆಟ್ಟಿ ಮತ್ತು ನಿವೇದಿತಾ ಗೌಡ, ಇದೀಗ ವಿಚ್ಛೇದನ ಪಡೆದು ದೂರವಾಗಿದ್ದಾರೆ. 
icon

(1 / 8)

2020ರ ಫೆಬ್ರವರಿಯಲ್ಲಿ ಬಾಳ ಬಂಧನಕ್ಕೆ ಬಲಗಾಲಿಟ್ಟಿದ್ದ ಸಂಗೀತ ನಿರ್ದೇಶಕ ಚಂದನ್‌ ಶೆಟ್ಟಿ ಮತ್ತು ನಿವೇದಿತಾ ಗೌಡ, ಇದೀಗ ವಿಚ್ಛೇದನ ಪಡೆದು ದೂರವಾಗಿದ್ದಾರೆ. (instagram/ Chandan Shetty)

ಇಬ್ಬರೂ ಪರಸ್ಪರ ಮಾತನಾಡಿಕೊಂಡೇ, ಡಿವೋರ್ಸ್‌ ನಿರ್ಧಾರ ಮಾಡಿ ಅದರಂತೆ ಶಾಂತಿನಗರದ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. 
icon

(2 / 8)

ಕಳೆದ ಆರು ತಿಂಗಳಿಂದ ಈ ಜೋಡಿ ಬೇರೆ ಬೇರೆಯಾಗಿಯೇ ವಾಸಿಸುತ್ತಿದೆ. ಅದರಂತೆ ವಿಚ್ಛೇದನಕ್ಕಡೆ ಕೈ ಕೈ ಹಿಡಿದುಕೊಂಡೇ ಒಂದೇ ಕಾರಿನಲ್ಲಿ ಕೋರ್ಟ್‌ಗೆ ಹಾಜರಾಗಿತ್ತು ಈ ಜೋಡಿ. 
icon

(3 / 8)

ಡಿವೋರ್ಸ್‌ ಬಳಿಕ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡ ನಿವೇದಿತಾ ಮತ್ತು ಚಂದನ್‌ ಶೆಟ್ಟಿ, ನಮ್ಮ ದಾಂಪತ್ಯ ಜೀವನವನ್ನ ಕಾನೂನುಬದ್ಧವಾಗಿ ಪರಸ್ಪರ ಒಪ್ಪಿಗೆಯಿಂದ ಕೊನೆಗೊಳಿಸಿದ್ದೇವೆ ಎಂದಿದ್ದರು. 
icon

(4 / 8)

ನಮ್ಮ ಈ ನಿರ್ಧಾರವನ್ನು ಮತ್ತು ನಮ್ಮ ಜೀವನದ ಖಾಸಗಿತನವನ್ನು ಗೌರವಿಸಲು ಕೋರುತ್ತೇವೆ. ಪ್ರತಿ ಸಂದರ್ಭದಲ್ಲೂ ನಮ್ಮ ಜತೆಗೆ ನಿಂತ ಎಲ್ಲರಿಂದಲೂ ಬೆಂಬಲ ಕೋರುತ್ತೇವೆ. ನಾವು ನಮ್ಮ ಪ್ರತ್ಯೇಕ ಮಾರ್ಗ ಅನುಸರಿಸಿದರೂ ಪರಸ್ಪರ ಒಬ್ಬರನ್ನೊಬ್ಬರು ಗೌರವಿಸುತ್ತೇವೆ ಎಂದಿದ್ದರು. 
icon

(5 / 8)

ಹೀಗೆ ಸಾರ್ವಜನಿಕ ವಲಯದಲ್ಲಿ ಗುರುತಿಸಿಕೊಂಡವರು ಡಿವೋರ್ಸ್‌ ಪಡೆದ ಬಳಿಕ ಪತ್ನಿಗೆ ಜೀವನಾಂಶ ನೀಡಿದ್ದೇಷ್ಟು ಎಂಬ ವಿಚಾರ ಮುನ್ನೆಲೆಗೆ ಬರುತ್ತದೆ. ಇದೀಗ ನಿವೇದಿತಾ ಮತ್ತು ಚಂದನ್‌ ವಿಚಾರದಲ್ಲೂ ಚರ್ಚೆಯಾಗುತ್ತಿದೆ.
icon

(6 / 8)

ಹಾಗಾದರೆ, ನಿವೇದಿತಾ ಗೌಡಗೆ ಚಂದನ್‌ ನೀಡಿದ ಜೀವನಾಂಶ ಎಷ್ಟು? ಕೋರ್ಟ್‌ ಆದೇಶದಲ್ಲಿ ಏನಿದೆ? ಈ ಬಗ್ಗೆ ವಕೀಲೆ ಅನಿತಾ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. 
icon

(7 / 8)

ನಿವೇದಿತಾ ಗೌಡ ಚಂದನ್‌ ಶೆಟ್ಟಿ ಅವರಿಂದ ಯಾವುದೇ ಜೀವನಾಂಶಕ್ಕೆ ಬೇಡಿಕೆ ಇಟ್ಟಿಲ್ಲ.  ಇಬ್ಬರದ್ದೂ ಪರಸ್ಪರ ಇಚ್ಛಿತ ವಿಚ್ಛೇದನ ಆಗಿದ್ದರಿಂದ ಈ ಪ್ರಕರಣದಲ್ಲಿ ಜೀವನಾಂಶ ಬೇಡಿಕೆ ಮುನ್ನೆಲೆಗೆ ಬಂದಿಲ್ಲ. ನಿವೇದಿತಾ ಸಹ ದುಡಿಯುತ್ತಿರುವುದರಿಂದ, ಹಣಕ್ಕೆ ಬೇಡಿಕೆ ಇಟ್ಟಿಲ್ಲ ಎಂದು ತಿಳಿಸಿದ್ದಾರೆ. 
icon

(8 / 8)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು