Priyanka Chincholi: ಭಾರತಕ್ಕೆ ಬೈ ಹೇಳಿ ಪತಿಯೊಂದಿಗೆ ಮನಸಾರೆ ಲಂಡನ್ನಲ್ಲಿ ಸೆಟಲ್ ಆಗಿರುವ ಹರ ಹರ ಮಹಾದೇವ ನಟಿ ಪ್ರಿಯಾಂಕಾ ಚಿಂಚೋಳಿ
ಕನ್ನಡ ಚಿತ್ರರಂಗ, ಕಿರುತೆರೆಯಲ್ಲಿ ಅನೇಕ ನಟಿಯರು ಮದುವೆ ನಂತರ ಭಾರತ ಬಿಟ್ಟು ಪತಿಯೊಂದಿಗೆ ವಿದೇಶದಲ್ಲಿ ಸೆಟಲ್ ಆಗಿದ್ದಾರೆ. ಹರ ಹರ ಮಹಾದೇವ ಧಾರಾವಾಹಿ ಖ್ಯಾತಿಯ ಪ್ರಿಯಾಂಕಾ ಚಿಂಚೋಳಿ ಕೂಡಾ ಈಗ ಲಂಡನ್ನಲ್ಲಿ ನೆಲೆಸಿದ್ದಾರೆ.
(2 / 10)
ಪ್ರಿಯಾಂಕಾ, ಕಲಬುರಗಿಯ ಚಿಂಚೋಳಿಯವರು. ಕನ್ನಡದ ಕೆಲವು ಧಾರಾವಾಹಿಗಳು ಹಾಗೂ ಸಿನಿಮಾಗಳಲ್ಲಿ ಆಕೆ ನಟಿಸಿದ್ದಾರೆ.
(3 / 10)
ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಮನಸಾರೆ ಧಾರಾವಾಹಿಯಲ್ಲಿ ಪ್ರಿಯಾಂಕಾ, ಪ್ರಾರ್ಥನಾ ಪಾತ್ರದಲ್ಲಿ ನಟಿಸಿದ್ದರು.
(4 / 10)
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹರ ಹರ ಮಹಾದೇವ ಧಾರಾವಾಹಿಯಲ್ಲಿ ಪ್ರಿಯಾಂಕಾ ಪಾರ್ವತಿ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದರು.
(6 / 10)
2021 ರಲ್ಲಿ ಪ್ರಿಯಾಂಕಾ ರಾಕೇಶ್ ಕುಮಾರ್ ಎಂಬ ಉದ್ಯಮಿಯ ಕೈ ಹಿಡಿದಿದ್ದರು. ತಮ್ಮ ನಿಶ್ಚಿತಾರ್ಥ, ಮದುವೆ ಫೋಟೋಗಳನ್ನು ಪ್ರಿಯಾಂಕಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
(7 / 10)
ರಾಕೇಶ್ ಅವರಿಗೆ ಲಂಡನ್ನಲ್ಲಿ ಕೆಲಸ ಇರುವುದರಿಂದ ಪ್ರಿಯಾಂಕಾ 2022 ರಲ್ಲಿ ಪತಿಯೊಂದಿಗೆ ಲಂಡನ್ಗೆ ತೆರಳಿ ಸೆಟಲ್ ಆಗಿದ್ದಾರೆ.
(8 / 10)
ಲಂಡನ್ನಲ್ಲಿ ಪತಿ ಜೊತೆಗಿರುವ ಫೋಟೋಗಳನ್ನು ಪ್ರಿಯಾಂಕಾ ಚಿಂಚೋಳಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
(9 / 10)
ಹುಟ್ಟಿ ಬೆಳೆದ ರಾಜ್ಯ, ದೇಶ ಬಿಟ್ಟು ವಿದೇಶಕ್ಕೆ ಹೋಗಲು ಪ್ರಿಯಾಂಕಾಗೆ ಇಷ್ಟವಿರಲಿಲ್ಲವಂತೆ. ಲಂಡನ್ಗೆ ಹೋಗುವಾಗ ಬಹಳ ಅತ್ತಿದ್ದೆ ಎಂದು ಪ್ರಿಯಾಂಕಾ ಸ್ನೇಹಿತರೊಂದಿಗೆ ಹೇಳಿಕೊಂಡಿದ್ದಾರೆ.
ಇತರ ಗ್ಯಾಲರಿಗಳು